Investigation Story | ರಾಜ್ಯದಲ್ಲಿ Eeco ಅಂಬುಲೆನ್ಸ್  ಬಳಸುವ ಮುನ್ನ ಎಚ್ಚರ..! ಇದು ದಿ ನ್ಯೂಝ್ ಮಿರರ್ ತನಿಖಾ ವರದಿ.!

Be careful before using Eeco Ambulance in the state..! This is an investigative report by The Newz Mirror.

ಬೆಂಗಳೂರು,(www.thenewzmirror.com) ;

ರೋಗಿಗಳನ್ನ ಹಾಗೆನೇ ಆರೋಗ್ಯ ಸಮಸ್ಯೆ ಇರುವವರನ್ನ ಇದೆಲ್ಲಕ್ಕಿಂತ ಮುಖ್ಯವಾಗಿ ತುರ್ತು ಆರೋಗ್ಯ ಸೇವೆ ಅಗತ್ಯ ಇದ್ದವರು ಆಂಬುಲೆನ್ಸ್ ಮೊರೆ ಹೋಗುತ್ತಾರೆ. ರಸ್ತೆಯಲ್ಲಿ ಯಾವುದಾದರೂ ಒಂದು ಆಂಬುಲೆನ್ಸ್ ಹೋಗುತ್ತಿದೆ ಎಂದರೆ ಯಾರದ್ದೋ ಪ್ರಾಣ ಅಪಾಯದಲ್ಲಿ ಇರಬೇಕು ಅಂತ ಆಂಬುಲೆನ್ಸ್ ಗೆ ಮೊದಲ ಆದ್ಯತೆ ನೀಡುತ್ತೀವಿ.

RELATED POSTS

ಹೀಗೆ ತುರ್ತು ಅಗತ್ಯ ಸೇವೆಗಳಲ್ಲಿ ಬಳಕೆಯಾಗುವ ಆಂಬುಲೆನ್ಸ್ ನಲ್ಲೂ ಹಲವಾರು ವಿಧಗಳಿವೆ, ಬೈಕ್,ಓಮ್ನಿ, ಇಕೋ, ಐಷರ್, ಟಿಟಿ, ಬಸ್, ಏರ್ ಬಸ್ ಹೀಗೆ ನಾನಾ ಬಗೆಯ ವಾಹನಗಳ ಮೂಲಕ ತುರ್ತು ಅಗತ್ಯ ಇರುವವರಿಗೆ ಸೇವೆ ನೀಡಲು ಬಳಕೆಯಾಗುತ್ತಿದೆ. ಯಾವುದೇ ಬಗೆಯ ಆಂಬುಲೆನ್ಸ್ ಆದರೂ ಅದಕ್ಕೆ ಸಂಬಂಧ ಪಟ್ಟ ಇಲಾಖೆ ಅಂದರೆ RTO ಯಿಂದ ಅನುಮತಿ ಪಡೆದು ಸೇವೆಯನ್ನ ಒದಗಿಸುವ ಕೆಲಸ ಆಗುತ್ತಿದೆ.

ರಾಜ್ಯದಲ್ಲಿ ಅಲ್ಲಲ್ಲಿ ನಕಲಿ ವೈದ್ಯರು ಟ್ರೀಟ್ ಮೆಂಟ್ ಕೊಡ್ತಿರೋ ಪ್ರಕರಣಗಳು ಹೇಗೆ ಬೆಳಕಿಗೆ ಬರ್ತಿದವೋ ಅದೇ ರೀತಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಕಲಿ ಆಂಬುಲೆನ್ಸ್ ಗಳ ಹಾವಳಿ ಸದ್ದಿಲ್ಲದೆ ತಲೆ ಎತ್ತಿದೆ. ದಿ ನ್ಯೂಝ್ ಮಿರರ್ ನ ತನಿಖಾವರದಿಯಲ್ಲಿ ಇದು ಬಟಾಬಯಲಾಗಿದ್ದು, ಕೆಲ ಆಂಬುಲೆನ್ಸ್ ಬಳಸುವ ಮುನ್ನ ಹತ್ತಾರು ಬಾರಿ ಯೋಚನೆ ಮಾಡುವ ಸ್ಥಿತಿ ಬಂದೊದಗಿದೆ.

ರೋಗಿಗಗಳಿಗೆ ಸುರಕ್ಷಿತವಲ್ಲ ಎಂಬ ಕಾರಣಕ್ಕೆ ರಾಜ್ಯ ಸಾರಿಗೆ ಇಲಾಖೆ 2018ರ ಏಪ್ರಿಲ್ 1ರಿಂದ ಓಮ್ನಿ ಆಂಬುಲೆನ್ಸ್ ಬಳಕೆಯನ್ನ ನಿಷೇಧ ಮಾಡಿ ಆದೇಶ ಹೊರಡಿಸಿತ್ತು. ಅಷ್ಟೇ ಅಲ್ದೇ ಓಮ್ನಿ ಆಂಬುಲೆನ್ಸ್ ಗಳಿಗಿದ್ದ ಮಾನ್ಯತೆಯನ್ನೂ ರದ್ದು ಮಾಡಿ ಆದೇಶ ಹೊರಡಿಸಿತ್ತು. ಇದ್ರಿಂದ ರಾಜ್ಯಾದ್ಯಂತ ಸುಮಾರು 70 ಸಾವಿರ ಓಮ್ನಿ ಆಂಬುಲೆನ್ಸ್​ಗಳ ಸಂಚಾರಕ್ಕೆ ಕಡಿವಾಣ ಬಿದ್ದಿತ್ತು.

ಸಾಂದಾರ್ಭಿಕ ಚಿತ್ರ

ಯಾವಾಗ ಸಾರಿಗೆ ಇಲಾಖೆ ಓಮ್ನಿ ಆಂಬುಲೆನ್ಸ್ ಗಳಿಗೆ ಕಡಿವಾಣ ಹಾಕ್ತೋ ಕೈಗೆಟುಕುವ ದರದಲ್ಲಿ ಸಿಗ್ತಿದ್ದ ಮಾರುತಿ ಸುಜುಕಿ ಇಕೋ ವಾಹನವನ್ನ ಆಂಬುಲೆನ್ಸ್ ಆಗಿ ಪರಿವರ್ತನೆ ಮಾಡಿ ಸೇವೆ ನೀಡೋಕೆ ಕೆಲವು ಆಸ್ಪತ್ರೆಗಳೂ ಸೇರಿದಂತೆ ಹಲವು ಸಂಘಸಂಸ್ಥೆಗಳು ಮುಂದಾದ್ವು. ಪ್ರಯಾಣಿಕರ ಓಡಾಟಕ್ಕೆ ಸಿದ್ದವಾಗಿದ್ದ ಇಕೋ ಆಂಬುಲೆನ್ಸ್ ಅನ್ನ ಆಂಬುಲೆನ್ಸ್ ಆಗಿ ಪರಿವರ್ತನೆ ಮಾಡಿ ಅದಕ್ಕೆ ಆಂಬುಲೆನ್ಸ್ ಅಂತ ಸಾರಿಗೆ ಇಲಾಖೆ ಅನುಮತಿ ಪಡೆದು ತುರ್ತು ಅಗತ್ಯ ಸೇವೆ ನೀಡುವ ಕೆಲ್ಸ ಆರಂಭವಾಯ್ತು.

ಹೀಗಾಗಿ ಮಾರುತಿ ಕಂಪನಿಯ ಇಕೋ ವಾಹನಗಳಿಗೆ ಸಾಕಷ್ಟು ಡಿಮ್ಯಾಂಡ್ ಕೂಡ ಬಂತು. 2018 ರಿಂದು ಐದು ವರ್ಷ ಅಂದರೆ 2023 ರ ವರೆಗೂ ಇಕೋ ವಾಹನಗಳನ್ನ ಆಂಬುಲೆನ್ಸ್ ಆಗಿ ಪರಿವರ್ತನೆ ಮಾಡಿ ಸೇವೆ ನೀಡಲಾಗಿತ್ತು. ರೋಗಿಗಗಳಿಗೆ  ಇನ್ನಷ್ಟು ಸುರಕ್ಷತೆ ನೀಡುವ ನಿಟ್ಟಿನಲ್ಲಿ ಕಂಪನಿ ಇಕೋ ವಾಹನಗಳಲ್ಲಿ ಆಂಬುಲೆನ್ಸ್ ಆಗಿಯೇ ಪ್ರತ್ಯೇಕವಾಗಿ ಸಿದ್ದಪಡಿಸಿದ ವಾಹನದ ಮಾದರಿಯನ್ನ ಪರಿಚಯಿಸಲು ಮುಂದಾಯ್ತು. ಅಂದ್ರೆ ಇಕೋ ವಾಹನಗಳಲ್ಲಿ ಒಂದಷ್ಟು ಬದಲಾವಣೆಗಳನ್ನ ತಂದು ರೋಗಿಗಳ ಸುರಕ್ಷಿತ ದೃಷ್ಟಿಯಿಂದ  ಕೆಲ ಮಾಡಿಫೈ ಮಾಡಿ ಸೇವೆ ನೀಡಲು ಮುಂದಾಯ್ತು.

ಅದರಂತೆ ಕರ್ನಾಟಕದಲ್ಲಿ 2023 ರ ಜನವರಿ ತಿಂಗಳಿನಲ್ಲಿ ರಾಜ್ಯ ಸಾರಿಗೆ ಇಲಾಖೆ ಸುತ್ತೋಲೆಯೊಂದನ್ನ ಹೊರಡಿಸ್ತು. ಇನ್ಮುಂದೆ ನಾರ್ಮಲ್ ಇಕೋ ವಾಹನವನ್ನ ಆಂಬುಲೆನ್ಸ್ ಆಗಿ ಪರಿವರ್ತನೆ ಮಾಡುವಂತಿಲ್ಲ. ಕಂಪನಿಯಿಂದಲೇ ಅಧಿಕೃತವಾಗಿ ಇಕೋ ಆಂಬುಲೆನ್ಸ್ ಮಾದರಿಯನ್ನ ಬಿಡುಗಡೆ ಮಾಡಿದ್ದು, ಇನ್ನು ಮುಂದಿನ ದಿನಗಳಲ್ಲಿ ಇಂಥ ಮಾದರಿಗಳನ್ನ ಮಾತ್ರ ಆಂಬುಲೆನ್ಸ್ ಆಗಿ ನೋಂದಣಿ ಮಾಡಬೇಕೆಂಬ ಆದೇಶವನ್ನ ಹೊರಡಿಸ್ತು.

– ಇಕೋ ಆಂಬ್ಯುಲೆನ್ಸ್ ಮೂರು ಜನರು ಮತ್ತು ಒಬ್ಬ ರೋಗಿಯ ಆಸನ ಸಾಮರ್ಥ್ಯ ಹೊಂದಿದೆ
– Eeco ಆಂಬ್ಯುಲೆನ್ಸ್ 6000 rpm ನಲ್ಲಿ 59.4 kW (80.7 PS) ಗರಿಷ್ಠ ಉತ್ಪಾದನೆಯೊಂದಿಗೆ 1197 cc K12N ಎಂಜಿನ್ ಹೊಂದಿದೆ.
– ಇಕೋ ಆಂಬ್ಯುಲೆನ್ಸ್ 3675 ಎಂಎಂ ಉದ್ದ, 1475 ಎಂಎಂ ಅಗಲ ಮತ್ತು 1930 ಎಂಎಂ ಎತ್ತರ (ಹೊಂದಿದೆ).
– ಇಕೋ ಆಂಬ್ಯುಲೆನ್ಸ್ 160 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ.
– ಇಕೋ ಆಂಬ್ಯುಲೆನ್ಸ್ 540 ಲೀಟರ್ ಬೂಟ್ ಸ್ಪೇಸ್ ಹೊಂದಿದೆ.
– ಇಕೋ ಆಂಬ್ಯುಲೆನ್ಸ್ ಸಾರ್ವಜನಿಕ ವಿಳಾಸ ವ್ಯವಸ್ಥೆ, ಮೊನೊಬ್ಲಾಕ್ ಸ್ಟ್ರೆಚರ್, ಪ್ರಥಮ ಚಿಕಿತ್ಸೆ ಮತ್ತು ಶುಶ್ರೂಷಾ ಕಿಟ್‌ಗೆ ಸ್ಥಳಾವಕಾಶ, ಆಮ್ಲಜನಕ ಸಿಲಿಂಡರ್ ಕ್ಲಾಂಪ್‌ಗಳು ಮತ್ತು ಇನ್ಫ್ಯೂಷನ್ ಆರೋಹಿಸಲು ಒಂದು ಹುಕ್ ಅನ್ನು ಹೊಂದಿದೆ.
– Eeco ಆಂಬ್ಯುಲೆನ್ಸ್ EBD ಜೊತೆಗೆ ABS, ಹೆಚ್ಚಿನ ಮೌಂಟ್ ಸ್ಟಾಪ್ ಲ್ಯಾಂಪ್ ಮತ್ತು ಚಾಲಕ ಮತ್ತು ಸಹ-ಚಾಲಕ ಸೀಟ್ ಬೆಲ್ಟ್ ರಿಮೈಂಡರ್‌ಗಳಂತಹ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ.
– ಇಕೋ ಆಂಬ್ಯುಲೆನ್ಸ್ ಗೌಪ್ಯತೆಗಾಗಿ ಭಾಗಶಃ ಫ್ರಾಸ್ಟೆಡ್ ವಿಂಡೋಗಳನ್ನು ಹೊಂದಿದೆ.
– ಇಕೋ ಆಂಬುಲೆನ್ಸ್ ಪ್ರಯಾಣಿಕ ಇಕೋ ವಾಹನಕ್ಕಿಂತ ದರ ಕೊಂಚ ಹೆಚ್ಚು
– ಇಕೋ ಆಂಬುಲೆನ್ಸ್ ಗೆ

– Eeco 1.2-ಲೀಟರ್ K12N ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ, ಅದು ಪೆಟ್ರೋಲ್ ಅಥವಾ CNG ಯಲ್ಲಿ ಕಾರ್ಯನಿರ್ವಹಿಸುತ್ತದೆ.
– ಪೆಟ್ರೋಲ್ ಆವೃತ್ತಿಯು 80 bhp ಮತ್ತು 104 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ, ಆದರೆ CNG ಆವೃತ್ತಿಯು 71 bhp ಮತ್ತು 95 Nm ಅನ್ನು ಉತ್ಪಾದಿಸುತ್ತದೆ.
– Eeco 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಬರುತ್ತದೆ.
– Eeco 5–7 ಜನರು ಕುಳಿತುಕೊಳ್ಳಬಹುದು.
– Eeco 19.71–26.78 km/l ಮೈಲೇಜ್ ಪಡೆಯುತ್ತದೆ.
– Eeco 32-ಲೀಟರ್ ಇಂಧನ ಟ್ಯಾಂಕ್ ಹೊಂದಿದೆ.
– eco 3,675 mm ಉದ್ದ, 1,475 mm ಅಗಲ ಮತ್ತು 1,825 mm ಎತ್ತರವಾಗಿದೆ.
– ಇಕೋ 160 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ.
– Eeco 140–146 kmph ವೇಗವನ್ನು ತಲುಪುತ್ತದೆ.
– Eeco ಡ್ಯುಯಲ್ ಏರ್‌ಬ್ಯಾಗ್‌ಗಳನ್ನು ಹೊಂದಿದೆ ಮತ್ತು ಆಫ್‌ಸೆಟ್ ಕ್ರ್ಯಾಶ್‌ನೊಂದಿಗೆ ಕ್ರ್ಯಾಶ್ ಕಂಪ್ಲೈಂಟ್ ಆಗಿದೆ.
– ಇಕೋ ಆಂಬುಲೆನ್ಸ್ ಗೆ ಹೋಲಿಸಿದರೆ ದರ ಕೊಂಚ ಕಡಿಮೆ

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist