ಬೆಂಗಳೂರು, (www.thenewzmirror.com) :
ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆದ ಸ್ಪೋಟ ಪೂರ್ವ ನಿಯೋಜಿತಾನಾ ಎನ್ನುವ ಅನುಮಾನ ಕಾಡುತ್ತಿದೆ.
ರಾಮೇಶ್ವರಂ ಕೆಫೆ ಎಂಡಿ ದಿವ್ಯಾ ಅವರು ನೀಡಿರುವ ಮಾಹಿತಿ ಪ್ರಕಾರ ಗ್ರಾಹಕರು ತಂದಿಟ್ಟ ಬ್ಯಾಗ್ ನಿಂದ ಸ್ಫೋಟ ಆಗಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ ಈ ಹಿಂದೆ ಬೇರೆ ಶಾಖೆಯಲ್ಲಿ ಯಾರೋ ಅಪರಿಚಿತರು ಎರಡು ಬಾರಿ ಅನುಮಾನ ಬರುವ ರೀತಿಯಲ್ಲಿ ಬ್ಯಾಗ್ ಇಟ್ಟು ಹೋಗಿದ್ದರು ಎಂದು ಮಾಹಿತಿ ನೀಡಿದ್ದಾರೆ.
ಕುಂದಲಹಳ್ಳಿಯ ರಾಮೇಶ್ವರಂ ಕೆಫೆಯಲ್ಲಿ 10 ಸೆಕೆಂಡ್ ನಲ್ಲಿ ಎರಡು ಬಾರಿ ಸ್ಪೋಟವಾಗಿದೆ. ಕೆಫೆಯ ತಟ್ಟೆಗಳನ್ನ ಇಡುತ್ತಿದ್ದ ಜಾಗದಲ್ಲಿ ಬ್ಲಾಸ್ಟ್ ಆಗಿದೆ ಎಂದು ಮಾಹಿತಿ ನೀಡಿದ್ದಾರೆ.
ಕೆಫೆಯಲ್ಲಿ ಸಿಲಿಂಡರ್ ಹಾಗೂ ಗ್ಯಾಸ್ ನಿಂದ ಯಾವುದೇ ಸ್ಪೋಟವಾಗಿಲ್ಲ ಎಂದು ಹೇಳಿರುವ ದಿವ್ಯಾ ಹೊಟೇಲ್ ನ ಸಿಸಿಟಿವಿ ಫೋಟೇಜ್ ಅನ್ನ ಪೊಲೀಸರಿಗೆ ಹಸ್ತಾಂತರಿಸಲಾಗಿದೆ ಎಂದರು.
ಘಟನೆಯಲ್ಲಿ ಐವರಿಗೆ ಗಂಭೀರ ಸ್ವರೂಪದ. ಗಾಯಗಳಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆಮ ಇನ್ಮು ಘಟನೆ ಸಂಬಂಧಪಟ್ಟಂತೆ NIA ತಂಡವೂ ಭೇಟಿ ನೀಡಿದ್ದು ಮಾಹಿತಿ ಕಲೆಹಾಕುವ ಕೆಲ್ಸ ಮಾಡುತ್ತಿದೆ.
ಇತ್ತೀಚಿನ ದಿನಗಳಲ್ಲಿ ಹೆಚ್ಚು ಪ್ರಸಿದ್ದಿ ಪಡೆಯುತ್ತಿರುವ ಹಿನ್ನಲೆಯಲ್ಲಿ ಯಾರೋ ಸಹಿಸದವರು ಈ ಕೃತ್ಯ ಎಸಗಿರಬಹುದು ಎಂಬ ಅನುಮಾನ ಮೂಡುತ್ತಿದೆ. ಕೆಫೆಗೆ ಬಂದ ಗ್ರಾಹಕರ ಸೋಗಿನಲ್ಲಿ ಬಂದ ಗ್ರಾಹಕರೊಬ್ಬರು ಬ್ಯಾಗ್ ಇಟ್ಟು ತೆರಳಿದ್ದರು ಎನ್ನಲಾಗುತ್ತಿದೆ.
ಘಟನಾ ಸ್ಥಳದಲ್ಲಿ ಐಡಿ ಕಾರ್ಡ್, ಟ್ಯಾಗ್ ಪತ್ತೆ.!
ರಾಮೇಶ್ವರಂ ಕೆಫೆಯಲ್ಲಿ ಬ್ಲಾಸ್ಟ್ ಆದ ಸ್ಥಳದಲ್ಲಿ ಐಡಿ ಕಾರ್ಡ್ ಗಳು, ಟ್ಯಾಗ್, ನಟ್ ,ಬೋಲ್ಟದ ಗಳು ಪತ್ತೆಯಾಗಿವೆ. ಹೀಗಾಗಿ ಇದೊಂದು ಉದ್ದೇಶಪೂರಕವಾಗಿಯೇ ಕೃತ್ಯ ನಡೆದಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.