Bengaluru Blast | ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇಟ್ಟವನು ಇವನೇ, ರಾತ್ರಿವರೆಗೂ ಎಲ್ಲಿದ್ದ ಗೊತ್ತಾ.?

ಬೆಂಗಳೂರು, (www.thenewzmirror.com) :

ರಾಮೇಶ್ವರಂ ಕೆಫೆಯ ಬಾಂಬ್ ಬ್ಲಾಸ್ಟ್ ಆರೋಪಿ ತಡರಾತ್ರಿವರೆಗೂ ಬೆಂಗಳೂರಿನಲ್ಲೇ ಬೀಡುಬಿಟ್ಟಿದ್ದ. NIA ಬಿಡುಗಡೆ ಮಾಡಿದ ವೀಡಿಯೋದಲ್ಲಿ ರಾತ್ರಿ ಅಂದರೆ 10 ಗಂಟೆಯ ಸಮಯದಲ್ಲಿ  ಓಡಾಡಿಕೊಂಡಿದ್ದ ಚಿತ್ರವನ್ನ ಬಿಡುಗಡೆ ಮಾಡಿದೆ.

RELATED POSTS

ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಆಗಿತ್ತು. ಅದಾದ ಬಳಿಕ ಬೆಂಗಳೂರಿನ ಹಲವೆಡೆ ಬಾಂಬರ್ ಓಡಾಡಿದ್ದ ವೀಡಿಯೋಗಳನ್ನ ಬಿಡುಗಡೆ ಮಾಡೋದಲ್ಲದೆ ಬಾಂಬರ್ ನ ಸ್ಒಷ್ಟ ಚಿತ್ರವನ್ನೂ ರಿಲೀಸ್ ಮಾಡಿದೆ.

ಅದರ ಪ್ರಕಾರ ಬಾಂಬರ್ ರಾತ್ರಿ 10 ಗಂಟೆ ವರೆಗೂ ಓಡಾಡಿಕೊಂಡು ಬಟ್ಟೆ ಬದಲಿಸಿಕೊಂಡು ಆನಂತರ ಬೆಂಗಳೂರಿನಿಂದ‌ ಬೇರೆ ಊರಿಗೆ ಹೋಗಿರುವ ಸಾಧ್ಯತೆಯಿದ್ದು, ಈ ನಿಟ್ಟಿನಲ್ಲಿ ತನಿಖೆ ಮುಂದುವರೆದಿದೆ.

https://twitter.com/NIA_India/status/1766363637008957551?t=zd7waZx1VkYJWPL4ExtkNg&s=19

ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳದಿಂದ ಬಾಂಬರ್‌ಗಾಗಿ ಭಾರಿ ಶೋಧನೆ ಮಾಡುತ್ತಿದ್ದು, ಬಾಂಬರ್ ನ ಸ್ಪಷ್ಟ ಫೋಟೋವನ್ನ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಬಿಡುಗಡೆ ಮಾಡಿದೆ. ಇನ್ನು ಈತನ ಸುಳಿವು ಸಿಕ್ಕಲ್ಲಿ ಪೊಲೀಸರಿಗೆ ಮಾಹಿತಿ ನೀಡುವಂತೆ ಮನವಿ ಮಾಡಲಾಗಿದೆ.

ಈ ಹಿನ್ನೆಲೆಯಲ್ಲಿ ಬಾಂಬರ್‌ನ ಎಲ್ಲ ಸಂಚಾರ ಸುಳಿವನ್ನು ಜಾಲಾಡುತ್ತಿದ್ದರೂ ಬಾಂಬರ್ ಮಾತ್ರ ಪೊಲೀಸರ ಕಣ್ತಪ್ಪಿಸಿಕೊಂಡೇ ಓಡಾಡುತ್ತಿದ್ದಾರೆ. ಹೀಗಾಗಿ, ಕೆಫೆಯಲ್ಲಿ ಬಾಂಬ್ ಸ್ಪೋಟಿಸಿದ ಶಂಕಿತ ಉಗ್ರ ಬಳ್ಳಾರಿಯಲ್ಲಿ ಸಂಚಾರ ಮಾಡಿದ ಸಿಸಿಟಿವಿ ಕ್ಯಾಮರಾವನ್ನು ಆಧರಿಸಿ ರಾಷ್ಟ್ರೀಯ ತನಿಖಾ ದಳದಿಂದ ಇರುವುದರಲ್ಲಿಯೇ ಸ್ಪಷ್ಟವಾದ ಫೋಟೋವನ್ನು ಬಿಡುಗಡೆ ಮಾಡಲಾಗಿದೆ.

ರಾಷ್ಟ್ರೀಯ ತನಿಖಾ ದಳದಿಂದ ಸಾಮಾಜಿಕ ಜಾಲತಾಣದ ಎಕ್ಸ್‌ನಲ್ಲಿ ಶಂಕಿತ ಉಗ್ರ ಬಳ್ಳಾರಿಯಲ್ಲಿ ಸಂಚಾರ ಮಾಡಿದ 4 ಫೋಟೋಗಳನ್ನು ಹಂಚಿಕೊಳ್ಳಲಾಗಿದೆ. ಇನ್ನು ಆರೋಪಿ ಪತ್ತೆಗಾಗಿ ಸಾರ್ವಜನಿಕರ ಸಹಕಾರಕ್ಕಾಗಿ ಪೋಟೋ ರಿಲೀಸ್ ಮಾಡಲಾಗಿದ್ದು, ಈ ವ್ಯಕ್ತಿಯ ಸುಳಿವು ಸಿಕ್ಕಲ್ಲಿ 08029510900, 8904241100 ಕರೆ ಮಾಡಿ ಅಥವಾ [email protected] ಗೆ ಇಮೇಲ್ ಮಾಡುವಂತೆ ಮನವಿ ಮಾಡಲಾಗಿದೆ.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist