ಬೆಂಗಳೂರು, (www.thenewzmirror.com) ;
ಮಾಗಡಿ ರಸ್ತೆಯಲ್ಲಿರುವ ಜಿಟಿ ಮಾಲ್ ಪಂಚೆ ಹಾಕಿಕೊಂಡು ಬಂದಿದ್ದ ರೈತನನ್ನ ಒಳಗೆ ಬಿಡದೆ ಅಪಮಾನ ಮಾಡಿದ ಪ್ರಕರಣ ಇದೀಗ ಮತ್ತೊಂದು ಹಂತಕ್ಕೆ ತಲುಪಿದೆ. ದೇಶದ ಬೆನ್ನೆಲುಬು ರೈತ ಅಂತ ಹೇಳೋ ದೇಶದಲ್ಲೇ ಅನ್ನದಾತನಿಗೆ ಅವಮಾನ ಮಾಡಿರುವ ಮಾಲ್ ನಡೆಗೆ ಇದೀಗ ರಾಜ್ಯಾದ್ಯಂತ ಬಾರೀ ಚರ್ಚೆಗೆ ಕಾರಣವಾಗ್ತಿದೆ.
ಸಿನೆಮಾ ನೋಡಲು ಬಂದಿದ್ದ ರೈತನ್ನ ಒಳಗೆ ಬಡಿದ ಸಿಬ್ಬಂದಿ ನಡೆ ಖಂಡಿಸಿ ರೈತನ ಮಗ ಸಾಮಾಜಿಕ ಜಾಲತಾಣಲದಲ್ಲಿ ನೋವನ್ನ ತೋಡಿಕೊಂಡಿದ್ದರು. ಈ ವಿಚಾರ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದ್ದಂತೆ ತಪ್ಪನ್ನ ಒಪ್ಪಿಕೊಂಡು ಬಳಿಕ ಅಪಮಾನ ಮಾಡಿದ ರೈತನಿಗೆ ಸನ್ಮಾನ ಮಾಡುವ ಕೆಲಸವನ್ನೂ ಮಾಡ್ತು. ಆದ್ರೆ ಈ ಪ್ರಕರಣ ಇದೀಗ ಅಧಿವೇಶನದಲ್ಲಿ ಚರ್ಚೆಗೆ ಬಂದಿದ್ದು, ಮಾಲ್ ನಡೆಗೆ ಪಕ್ಷಾತೀತವಾಗಿ ಅಸಮಧಾನ ವ್ಯಕ್ತವಾಗುತ್ತಿದೆ.
ಅನ್ನದಾತನಿಗೆ ಮರ್ಯಾದೆ ನೀಡದೆ ಅವಮಾನ ಮಾಡಿದ ಮಾಲ್ ಹಾಗೂ ಅಲ್ಲಿನ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಬೇಕು ಅನ್ನೋ ವಿಚಾರವನ್ನವಿರೋಧ ಪಕ್ಷದ ಶಾಸಕರು ಸದನದಲ್ಲಿ ಪ್ರಸ್ತಾಪಿಸಿದ್ರು. ಇದಕ್ಕೆ ಆಡಳಿತ ಪಕ್ಷದ ಸದಸ್ಯರು ಧನಿ ಗೂಡಿಸಿದ್ದು, ಮಾಲ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ರು.
ಈಗಾಗಲೇ ರೈತನಿಗೆ ಸನ್ಮಾನ ಮಾಡಿದ್ದರೂ ಮಾಲ್ ಮಾಲೀಕರ ವಿರುದ್ಧ ಎಫ್ ಐಆರ್ ದಾಖಲು ಮಾಡಬೇಕು ಅಂತ ಆಗ್ರಹ ಕಾಂಗ್ರೆಸ್ ಶಾಸಕ ಶರಣಗೌಡ ಕಂದಕೂರ ಮನವಿ ಮಾಡಿದ್ರು. ಇದಕ್ಕೆ ವಿರೋಧ ಪಕ್ಷದ ಕೆಲ ಶಾಸಕರು ಸಹಮತಿ ವ್ಯಕ್ತಪಡಿಸಿದ್ರು. ಈ ವೇಳೆ ಮಾತನಾಡಿದ ಶಾಸಕ ಲಕ್ಷ್ಮಣ್ ಸವದಿ ಮಾಲ್ ಒಂದು ವಾರ ವಿದ್ಯುತ್ ಸಂಪರ್ಕ ಕಟ್ ಮಾಡುವಂತೆ ಆಗ್ರಹಿಸಿದ್ರು.
ನಿಯಮ ಎಂದರೆ ಎಲ್ಲರಿಗೂ ಒಂದೇ, ಹೀಗಾಗಿ ಬಿಬಿಎಂಪಿ ಮುಖ್ಯ ಆಯುಕ್ತರ ಜತೆ ಚರ್ಚೆ ನಡೆಸಿ ಕಾನೂನಿನಲ್ಲಿ ಅವಕಾಶ ಇರುವಂತೆ ಏಳು ದಿನ ಮಾಲ್ ಅನ್ನ ಮುಚ್ಚಿಸಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಸದನಕ್ಕೆ ಮಾಹಿತಿ ನೀಡಿದರು.
ಪ್ರತಿಷ್ಠಿತ ಏರಿಯಾದಲ್ಲಿರುವ ಜಿಟಿ ಮಾಲ್ ಅನ್ನ ಸರ್ಕಾರ ಒಂದು ವಾರ ಬಂದ್ ಮಾಡಿಸುತ್ತಾ ಎನ್ನುವ ಪ್ರಶ್ನೆ ಇದೀಗ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.