ಬೆಂಗಳೂರು, (www.thenewzmirror.com) ;
ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಸುಮಾರು ₹ 50 ಕೋಟಿ ಮೌಲ್ಯದ ಹತ್ಯೆಯಾದ ಗ್ಯಾಂಗ್‌ಸ್ಟರ್, ರಾಜಕಾರಣಿ ಅತೀಕ್ ಅಹ್ಮದ್‌ಗೆ ಸೇರಿದ ಆಸ್ತಿಯನ್ನ ಅಲ್ಲಿನ ಸರ್ಕಾರ ವಶಪಡಿಸಿಕೊಂಡಿದೆ. ಅತೀಕ್ ಅಹ್ಮದ್ ಈ ಆಸ್ತಿಯನ್ನು ಅಪರಾಧ ಚಟುವಟಿಕೆಗಳ ಹಣದಿಂದ ಖರೀದಿ ಮಾಡಿದ್ದ ಎಂದು ಹೇಳಲಾಗಿದೆ.
ಜಿಲ್ಲಾ ಸರ್ಕಾರಿ ವಕೀಲ ಗುಲಾಬ್ ಚಂದ್ರ ಅಗ್ರಹರಿ ಅವರು, ಅತೀಕ್ 2.377 ಹೆಕ್ಟೇರ್ ಭೂಮಿಯನ್ನು ಅಪರಾಧ ಸಂಬಂಧಿತ ಚಟುವಟಿಕೆಗಳ ಹಣವನ್ನು ಬಳಸಿಕೊಂಡು ಹೂಬಲಾಲ್ ಎಂಬ ಮೇಸ್ತ್ರಿಯ ಹೆಸರಲ್ಲಿ ನೋಂದಾಯಿಸಿದ್ದು, ಅಗತ್ಯಬಿದ್ದರೆ ಭೂಮಿಯನ್ನು ತನ್ನ ಹೆಸರಿಗೆ ವರ್ಗಾಯಿಸಲು ಸಿದ್ಧತೆ ನಡೆಸಿದ್ದನಂತೆ.
ದರೋಡೆಕೋರರ ಕಾಯಿದೆಯ ಸೆಕ್ಷನ್ 14 (1) ಅಡಿಯಲ್ಲಿ ಪೊಲೀಸ್ ಕಮಿಷನರ್ ನ್ಯಾಯಾಲಯವು ಆಸ್ತಿಯನ್ನು ವಶಪಡಿಸಿಕೊಂಡಿರೋದಾಗಿ ಮಾಹಿತಿ ಲಭ್ಯವಾಗಿದೆ.
ಖಾಸಗಿ ಪತ್ರಿಕಾ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರೋ ಡಿಸಿಪಿ ದೀಪಕ್ ಭುಕರ್, ನ್ಯಾಯಾಲಯದ ತೀರ್ಪಿನ ನಂತರ, “ಮೊದಲ ಬಾರಿಗೆ, ಗ್ಯಾಂಗ್ ಸ್ಟರ್ ನ್ಯಾಯಾಲಯವು ಕಥುಲಾ ಗೌಸ್ಪುರ್ ಗ್ರಾಮದಲ್ಲಿ ಹತ್ಯೆಗೀಡಾದ ದರೋಡೆಕೋರ ಅತೀಕ್ ಅಹ್ಮದ್ನ ಬೇನಾಮಿ ಆಸ್ತಿಯನ್ನು ಜುಲೈ 15ರಂದು ರಾಜ್ಯ ಸರ್ಕಾರಕ್ಕೆ ವಹಿಸಲು ಆದೇಶಿಸಿದೆ.
ಪ್ರಯಾಗ್‌ರಾಜ್ ಪೊಲೀಸರು ನವೆಂಬರ್ 6, 2023 ರಂದು ದರೋಡೆಕೋರರ ಕಾಯಿದೆಯಡಿಯಲ್ಲಿ ಸದರ್ ತಹಸಿಲ್‌ನ ಕಥುಲಾ ಗೌಸ್‌ಪುರ ಗ್ರಾಮದಲ್ಲಿ ಅತೀಕ್‌ನ ಕೋಟ್ಯಂತರ ರೂಪಾಯಿ ಮೌಲ್ಯದ ಬೇನಾಮಿ ಆಸ್ತಿಯನ್ನು ಜಪ್ತಿ ಮಾಡಿದ್ದರು.
ವಿಚಾರಣೆ ವೇಳೆ ಹೂಬ್ಲಾಲ್ ಆಸ್ತಿಗೂ ತನಗೂ ಯಾವುದೇ ಸಂಬಂಧವಿಲ್ಲ ಎಂದು ಬಹಿರಂಗಪಡಿಸಿದ್ದು, ಅತೀಕ್ 2015ರಲ್ಲಿ ಜಮೀನನ್ನು ತನ್ನ ಹೆಸರಿಗೆ ನೋಂದಣಿ ಮಾಡುವಂತೆ ಒತ್ತಾಯಿಸಿದ್ದ. ಉಮೇಶ್ ಪಾಲ್ ಹತ್ಯೆ ಪ್ರಕರಣ ಸೇರಿದಂತೆ 100ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಅತೀಕ್ ಮತ್ತು ಆತನ ಸಹೋದರ ಅಶ್ರಫ್ ಅವರನ್ನು ಕಳೆದ ವರ್ಷ ಏಪ್ರಿಲ್ 15 ರಂದು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.