ಬೆಂಗಳೂರು, ( www.thenewzmirror.xom) :
ಖೇಲೋ ಇಂಡಿಯಾ ಮತ್ತು ಅಂತರ ವಿಶ್ವವಿದ್ಯಾಲಯಗಳ ಸ್ಪರ್ಧೆಯಲ್ಲಿ ವಿಜೇತರಾದ ಬೆಂಗಳೂರು ವಿಶ್ವವಿದ್ಯಾಲಯ ವಿದ್ಯಾರ್ಥಿಗಳಿಗೆ ಕ್ರೀಡಾ ಪುರಸ್ಕಾರ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಜ್ಞಾನಭಾರತಿ ಆವರಣದ ಪ್ರೊ.ವೆಂಕಟಗಿರಿಗೌಡ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ 42 ವಿದ್ಯಾರ್ಥಿಗಳಿಗೆ ಸಭಾಪತಿ ಬಸವರಾಜ್ ಹೊರಟ್ಟಿ ನಗದು ಸಹಿತ ಕ್ರೀಡಾ ಪುರಸ್ಕಾರ ಪ್ರಶಸ್ತಿ ನೀಡಿ ಸನ್ಮಾನಿಸಿದರು.
ಕ್ರೀಡಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ ಗೌರವಾನ್ವಿತ ಸಭಾಪತಿ ಬಸವರಾಜ್ ಹೊರಟ್ಟಿ, ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರಧಾನದ ಬಳಿಕ ವಿದ್ಯಾರ್ಥಿಗಳೊಂದಿಗೆ ತಮ್ಮ ಅನುಭವ ಹಂಚಿಕೊಂಡರು. ನಾನು ಕೂಡ ಬೆಂಗಳೂರು ವಿಶ್ವವಿದ್ಯಾಲಯ ಹಳೇ ವಿದ್ಯಾರ್ಥಿ.ಬಿ.ಪಿ.ಎಡ್,ಎಂ.ಪಿ.ಎಡ್ ಗಳನ್ನು ಬೆಂಗಳೂರು ವಿವಿಯಲ್ಲಿ ಮುಗಿಸಿ ನಂತರ ದೈಹಿಕ ಶಿಕ್ಷಕನಾಗಿ ಆ ನಂತರ ರಾಜಕೀಯ ಪ್ರವೇಶಿಸಿ ಪರಿಷತ್ತು ಸದಸ್ಯನಾದೆ. ಎಂದು ತಿಳಿಸಿದರು.
ಬೆಂಗಳೂರು ವಿದ್ಯಾರ್ಥಿಯಿಂದ ಸಭಾಪತಿ ಸ್ಥಾನದದವರೆಗಿನ ಪಯಣ ಹೆಮ್ಮೆ ತಂದಿದೆ.ಕ್ರೀಡೆಯಿಂದ ವಿದ್ಯಾರ್ಥಿಗಳು ದೈಹಿಕ, ಮಾನಸಿಕ ಸ್ಥಿರತೆ ಹೆಚ್ಚಾಗಲಿದೆ. ಕ್ರೀಡೆಯಲ್ಲಿ ಆಸಕ್ತಿ ಹೊಂದಿದವರು ಎಲ್ಲಾ ಕ್ಷೇತ್ರದಲ್ಲೂ ಶಿಸ್ತು ಹೊಂದಿರುತ್ತಾರೆ.ಕ್ರೀಡಾಪಟುಗಳು ಕೂಡ ದೇಶ ಕಟ್ಟುವ ಕೆಲಸದಲ್ಲಿದ್ದಾರೆ.ವಿದ್ಯಾರ್ಥಿಗಳಾದ ನೀವು ಈಗಿನಿಂದಲೇ ವ್ಯವಸ್ಥೆಯ ಬದಲಾವಣೆಯ ಭಾಗವಾಗಬೇಕು ಎಂದು ” ತಮ್ಮ ಅಭಿಪ್ರಾಯ ಹಂಚಿಕೊಂಡರು.
“ಭಾರತ ಇಂದು ಎಲ್ಲಾ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ ಆದರೆ ಕ್ರೀಡಾ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಪ್ರಗತಿ ಸಾಧಿಸಬೇಕಿದೆ.ಕಳೆದ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತ ಉತ್ತಮ ಪ್ರದರ್ಶನ ತೋರಿದೆ,ಅದೇ ನಿಟ್ಟಿನಲ್ಲಿ ಮುಂದೆ ಭಾರತ ಕ್ರೀಡಾ ಕ್ಷೇತ್ರದಲ್ಲೂ ನಂಬರ್ ಒನ್ ಆಗಬೇಕಾಗಿದೆ.ಅದಕ್ಕೆ ಯುವ ಕ್ರೀಡಾಪಟುಗಳಿಂದ ಮಾತ್ರ ಸಾಧ್ಯ. ವಿಶ್ವವಿದ್ಯಾಲಯ ಮಟ್ಟದ ಕ್ರೀಡಾಪಟುಗಳು ದೇಶವನ್ನು ಪ್ರತಿನಿಧಿಸುವಂತಾಗಬೇಕು. ಪಿಎಂ ಉಷಾ ಯೋಜನೆಯ 100 ಕೋಟಿ ಅನುದಾನದಲ್ಲಿ ಕ್ರೀಡಾಸೌಲಭ್ಯಗಳ ಉನ್ನತೀಕರಣಕ್ಕೂ ಕೂಡ ಕ್ರಮ ವಹಿಸುತ್ತೇವೆ ಎಂದು” ಕುಲಪತಿ ಡಾ.ಜಯಕರ ಎಸ್ ಎಂ ಭರವಸೆ ನೀಡಿದರು.