ಬೆಂಗಳೂರು,( www.thenewzmirror.com) :
ಕುಂದಲಹಳ್ಳಿಯ ರಾಮೇಶ್ವರಂ ಕೆಫೆಯಲ್ಲಿ ನಡೆದಿದ್ದ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮತ್ತೊಂದು ವೀಡಿಯೋ ಲಭ್ಯವಾಗಿದೆ.
ಘಟನೆ ನಡೆದ ದಿನ ಬೆಳಗ್ಗೆ 11.34 ಕ್ಕೆ ಕೆಫೆಗೆ ಬರುವ ಬಾಂಬರ್, ತಾನು ಅಂದುಕೊಂಡಿದ್ದನ್ನ ಸಾಧಿಸಿ ಅಲ್ಲಿಂದ 11.43 ಕ್ಕೆ ತೆರಳಿದ್ದಾನೆ.
ಆ 9 ನಿಮಿಷದಲ್ಲಿ ಇಡ್ಲಿ ತಿಂದು ನಿಗಧಿತ ಜಾಗದಲ್ಲಿ ಬಾಂಬ್ ಇಟ್ಟು ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ಈ ಕುರಿತ ಸಿಸಿಟಿವಿ ಫೂಟೇಜ್ ಲಭಿಸಿದ್ದು, ಕೃತ್ಯ ನಡೆಸಿದವನ ಹುಡುಕುವಲ್ಲಿ ಬೆಂಗಳೂರು ಪೊಲೀಸರು ನಿರತರಾಗಿದ್ದಾರೆ.
ಹೊಟೆಲ್ ಗೆ ಬರುವಾಗಲೇ ಟೈಮರ್ ಫಿಕ್ಸ್ ಮಾಡಿದ್ನಾ? ಎಂಬ ಪ್ರಶ್ನೆ ಎದ್ದಿದೆ. ಬ್ಯಾಗ್ ಹಾಕಿಕೊಂಡು ಕೂಲ್ ಆಗಿಯೇ ಹೊಟೆಲ್ ಒಳಗೆ ಎಂಟ್ರಿ ಆಗಿದ್ದು, ಬಳಿಕ ಹೋಟೆಲ್ ಒಳಗಡೆ ಹೋಗಿ ಇಡ್ಲಿ ಖರೀದಿ ಮಾಡಿದ್ದಾನೆ. ಬಳಿಕ ಬಾಂಬ್ ಇಟ್ಟು ಮೊಬೈಲ್ ಅಲ್ಲಿ ಮಾತನಾಡುವಂತೆ ಓಡೋಡಿ ಬರ್ತಾನೆ.
ಹೊಟೆಲ್ ನಲ್ಲಿ ಇರುವಾಗ ಮೊಬೈಲ್ ಅಲ್ಲಿ ಮಾತನಾಡುವಂತೆ ನಾಟಕ ಮಾಡಿದ್ದು, ಒಳಗೆ ಬಂದು ಹೊರಗೆ ಹೋಗುವವರೆಗೂ ಸಂಪೂರ್ಣ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಬಾಂಬರ್ ಹೋಟೆಲ್ ಬರುವಾಗ ಮುಖ ಕಾಣದಂತೆ ಟೋಪಿ, ಮಾಸ್ಕ್, ಫಿಂಗರ್ ಪಿಂಟ್ ಸಿಗಬಾರದು ಎಂದು ಕೈಗೆ ಗ್ಲೌಸ್ ಧರಿಸಿ ಬಂದಿದ್ದಾನೆ. ಸುಮಾರು 9 ನಿಮಿಷಗಳ ಕಾಲ ಇದ್ದ ಹೋಟೆಲ್ ಒಳಗೆ ಇದ್ದ ಬಾಂಬರ್ ಒಂಬತ್ತು ನಿಮಿಷವೂ ಡ್ರಾಮಾ ಮಾಡಿ, ಒಂದೇ ಒಂದು ಸಾಕ್ಷಿ ಸಿಗದಂತೆ ಬಾಂಬಿಟ್ಟು ಎಸ್ಕೇಪ್ ಆಗಿದ್ದಾನೆ.
ಸದ್ಯ ಇದೇ ಸುಳಿವು ಆಧರಿಸಿ ಆರೋಪಿಯ ಪತ್ತೆಗೆ ಶೋಧಕಾರ್ಯ ಮುಂದುವರೆದಿದೆ.