ಬೆಂಗಳೂರು, (www.thenewzmirror.com);
ಗ್ಯಾರಂಟಿ ಮೂಲಕ ಅಧಿಕಾರಕ್ಕೆ ಬಂದ ಸರ್ಕಾರ ಲೋಕಸಭೆ ಚುನಾವಣೆ ಬಳಿಕ ಸದ್ದಿಲ್ಲದೆ ಶಾಕ್ ಮೇಲೆ ಶಾಕ್ ನೀಡುತ್ತಿದೆ. ಕೆಲ ದಿನಗಳ ಹಿಂದೆಯಷ್ಟೇ ಪೆಟ್ರೋಲ್, ಡಿಸೇಲ್ ದರ ಏರಿಸಿದ್ದ ಸರ್ಕಾರ ಇದೀಗ ಹಾಲಿನ ದರ ಪ್ರತಿ ಲೀಟರ್ ಗೆ 2 ರೂ ಏರಿಸಿ ಆದೇಶ ಹೊರಡಿಸಿದೆ.
ಕರ್ನಾಟಕ ಹಾಲು ಒಕ್ಕೂಟ(KMF) ನಂದಿನಿ ಹಾಲಿನ ದರಗಳನ್ನು ಏರಿಕೆ ಮಾಡಿದ್ದು, ಅದರಂತೆ ಪ್ರತಿ ಲೀಟರ್‌ಗೆ 2 ರುಪಾಯಿ ಏರಿಕೆಸಿದ್ದು, ಒಂದು ಲೀಟರ್ ಹಾಲಿನ ದರ ನಾಳೆಯಿಂದ 44 ರೂ. ಆಗುತ್ತಿದೆ ಎಂದು ಕೆಎಂಎಫ್ ಅಧ್ಯಕ್ಷ ಭೀಮನಾಯ್ಕ್ ತಿಳಿಸಿದ್ದಾರೆ.

ಪ್ರತಿ ಲೀಟರ್ ಹಾಲಿಗೆ 2 ರೂ.ಏರಿಕೆ ಮಾಡಲಾಗಿದೆ. ಹಾಗೂ ಅರ್ಧ ಲೀಟರ್ ಹಾಲಿನ ದರ 22 ರೂ. ನಿಂದ 24 ರೂ.ಗೆ ಹೆಚ್ಚಿಸಲಾಗಿದೆ. ಆದರೆ ಗ್ರಾಹಕರಿಗೆ ಸಿಗುತ್ತಿದ್ದ 1,000 ಎಂಎಲ್ (1 ಲೀಟರ್) ಪ್ಯಾಕೆಟ್ ಹಾಲು ಇನ್ಮುಂದೆ 1,050 ಎಂಎಲ್ ಹಾಗೂ ಅರ್ಧ ಲೀಟರ್ ಪ್ಯಾಕೆಟ್ ಹಾಲು 550 ಎಂಎಲ್ ಹೆಚ್ಚುವರಿ ಸಿಗಲಿದೆ.
ಕೆಎಂಎಫ್ ಇಡೀ ರಾಷ್ಟ್ರದಲ್ಲಿ ಅತಿ ದೊಡ್ಡ ಎರಡನೇ ದೊಡ್ಡ ಹಾಲಿನ ಮಂಡಳಿ. ಸದ್ಯ 98 ಲಕ್ಷದ 17 ಸಾವಿರ ಲೀಟರ್ ಹಾಲು KMF ನಲ್ಲಿ ಶೇಖರಣೆ ಆಗುತ್ತಿದೆ. ಒಂದು ಕೋಟಿ ಲೀಟರ್ ಹಾಲಿನ ಶೇಖರಣೆ ಮಾಡಲು KMF ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದು ಭೀಮನಾಯ್ಕ್ ತಿಳಿಸಿದರು.
ರಾಜ್ಯದಲ್ಲಿ 27 ಲಕ್ಷ ಹಾಲು ಉತ್ಪಾದಕ ರೈತರಿದ್ದಾರೆ. 98 ಲಕ್ಷದ 17 ಸಾವಿರ ಲೀಟರ್ ಹಾಲಿನಲ್ಲಿ 30 ಲಕ್ಷ ಲೀಟರ್ ಹಾಲು, ಹಾಲಿನ ಪೌಡರ್‌ಗೆ ಮೀಸಲಾಗಿದೆ ಎಂದು ಭೀಮಾ ನಾಯ್ಕ್ ಮಾಹಿತಿ ನೀಡಿದ್ರು. ಬೇರೆ ರಾಜ್ಯಗಳಿಗೆ ಹಾಲಿನದರ ಹೋಲಿಕೆ ಮಾಡಿದರೆ ನಮ್ಮ ರಾಜ್ಯದಲ್ಲಿ ಪ್ಯಾಕೆಟ್ ಹಾಲಿನ ಬೆಲೆ ಕಡಿಮೆ ಇದೆ ಎಂದು ಹಾಲಿನ ದರವನ್ನ ಸಮರ್ಥಿಸಿಕೊಂಡ್ರು.
ಕರ್ನಾಟಕ ಹಾಲು ಮಹಾಮಂಡಳಿ (Karnataka Milk Federation) ನಂದಿನಿ ಹಾಲಿನ ದರ ಏರಿಕೆಯನ್ನು ಘೋಷಿಸಿದ್ದು, ನಾಳೆಯಿಂದ ಜಾರಿಗೆ ಬರಲಿದೆ. ಇತ್ತೀಚೆಗಷ್ಟೇ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಬರೆ ಎಳೆದಿದ್ದ ಕರ್ನಾಟಕ ಸರ್ಕಾರ, ಈಗ ಹಾಲಿನ ದರ ಏರಿಕೆ ಮಾಡಿ ಗ್ರಾಹಕರನ್ನು ಮತ್ತಷ್ಟು ಸಂಕಷ್ಟಕ್ಕೆ ನೂಕಿದೆ.

50 ml ಅಧಿಕ ಇರಲಿದೆ..!
ಹಾಲಿನ ದರ ಏರಿಕೆ ಮಾಡಿರುವ KMF ಅರ್ಧ ಹಾಗೂ ಒಂದು ಲೀಟರ್ ಹಾಲಿನ ಪ್ಯಾಕೇಡ್ ನಲ್ಲಿ 50 ಎಂ ಎಲ್ ಹಾಲು ಅಧಿಕ ನೀಡಲು ಮುಂದಾಗಿದೆ. ಚಿಲ್ಲರೆ ಸಮಸ್ಯೆ ನೀಗಿಸಲು ತೀರ್ಮಾನ ಎಂದು ಕೆಎಂ ಎಫ್ ತಿಳಿಸಿದೆ. ಅರ್ಧ-ಲೀಟರ್ ಪ್ಯಾಕೆಟ್ ಈ ಮೊದಲು 500 ಮಿಲಿ ಹಾಲು ಹೊಂದಿರುತ್ತಿತ್ತು. ನಾಳೆಯಿಂದ 550 ಮಿಲಿ ಹಾಲನ್ನು ಹೊಂದಿರುತ್ತದೆ. ಬೆಲೆ ಏರಿಕೆಯ ಜೊತೆಗೆ ಗ್ರಾಹಕರಿಗೆ ಪ್ರಮಾಣದಲ್ಲಿ ಸ್ವಲ್ಪ ಹೆಚ್ಚಳವನ್ನು ನೀಡುತ್ತಿದೆ. ಹಾಲಿನ ದರ ಮಾತ್ರ ಹೆಚ್ಚಳ ಮಾಡಲಾಗಿದ್ದು, ಮೊಸರಿಗೆ ಈ ಹಿಂದಿನ ದರವೆ ಅನ್ವಯವಾಗಲಿದೆ.
ಹೇಗಿರಲಿದೆ ಹೊಸ ದರ.?
– ನೀಲಿ ಪ್ಯಾಕೆಟ್ ಹಾಲು – 42 ರಿಂದ 44 ರೂಪಾಯಿಗೆ ಏರಿಕೆ
– ನೀಲಿ ಪ್ಯಾಕೆಟ್ (ಟೋನ್ಡ್ ಹಾಲು) – 43 ರಿಂದ 45 ರೂಪಾಯಿಗೆ ಏರಿಕೆ
– ಆರೆಂಜ್ ಪ್ಯಾಕೆಟ್ ಹಾಲು – 46 ರಿಂದ 48 ರೂಪಾಯಿಗೆ ಏರಿಕೆ
– ಆರೆಂಜ್ ಸ್ಪೆಷಲ್ ಹಾಲು- 48 ರಿಂದ 50 ರೂಪಾಯಿಗೆ ಏರಿಕೆ
– ಶುಭಂ ಹಾಲು – 48 ರಿಂದ 50 ರೂಪಾಯಿಗೆ ಏರಿಕೆ
– ಸಮೃದ್ದಿ ಹಾಲು – 51 ರಿಂದ 53 ರೂಪಾಯಿಗೆ ಏರಿಕೆ
– ಶುಭಂ (ಟೋನ್ಡ್ ಹಾಲು) – 49 ರಿಂದ 51 ರೂಪಾಯಿಗೆ ಏರಿಕೆ
– ಸಂತೃಪ್ತಿ ಹಾಲು – 55 ರಿಂದ 57 ರೂಪಾಯಿಗೆ ಏರಿಕೆ
– ಶುಭಂ ಗೋಲ್ಡ್ ಹಾಲು- 49 ರಿಂದ 51 ರೂಪಾಯಿಗೆ ಏರಿಕೆ
– ಶುಭಂ ಡಬಲ್ ಟೋನ್ಡ್ ಹಾಲು – 41 ರಿಂದ 43 ರೂಪಾಯಿಗೆ ಏರಿಕೆ