ಬೆಂಗಳೂರು, (www.thenewzmirror.com);
ಈ ವಾರದ ನಾಮಿನೇಷನ್ ಗುಮ್ಮ ಬಂದೇಬಿಟ್ಟಿದೆ. ಅದಕ್ಕೆ ಇರುವ ಚಟುವಟಿಕೆ ಕೂಡ ಭಿನ್ನವಾಗಿದೆ. ಆ ಚಟುವಟಿಕೆಯ ಸ್ವರೂಪ JioCinema ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ಜಾಹೀರಾಗಿದೆ.
ನಿಯೋಜಿತ ಕುರ್ಚಿಯಲ್ಲಿ ಪ್ರತಿಯೊಂದು ಸದಸ್ಯರು ಕೂಡಬೇಕು. ಎದುರು ನಿಂತಿರುವ ಸದಸ್ಯರಲ್ಲಿ ಯಾರಿಗೆ ಕುರ್ಚಿಯಲ್ಲಿ ಕೂತಿರುವ ಸದಸ್ಯರು ನಾಮಿನೇಟ್ ಆಗಬೇಕು ಅನಿಸುತ್ತದೆಯೋ ಅವರು ಬೋರ್ಡ್ ಎತ್ತಿ ಸೂಚಿಸಬೇಕು.
ಆಮೇಲೆ ಮಸಿನೀರನ್ನು ಅವರ ಮೇಲೆ ಸುರಿಯಬೇಕು. ಕೊನೆಗೆ ಅತಿ ಹೆಚ್ಚು ಸದಸ್ಯರಿಂದ ಸೂಚಿತರಾದವರು ನಾಮಿನೇಟ್ ಆಗುತ್ತಾರೆ.
ಈ ಚಟುವಟಿಕೆಯಲ್ಲಿ ಮೈಕಲ್ ಅವರು ಕಾರ್ತೀಕ್ ಅವರನ್ನು ನಾಮಿನೇಟ್ ಮಾಡಿದ್ದಾರೆ. ಆದರೆ ಅವರು ಕೊಟ್ಟ ಕಾರಣ ಕಾರ್ತೀಕಗ ಅವರಿಗೆ ಸೂಕ್ತ ಅನಿಸಿಲ್ಲ.
ಹಾಗಾಗಿ ಅದೇ ಕಾರಣ ಇಟ್ಟುಕೊಂಡು ಕಾರ್ತೀಕ್ ಕೂಡ ಮೈಕಲ್ ಅವರನ್ನು ನಾಮಿನೇಟ್ ಮಾಡಿದ್ದಾರೆ. ಹಾಗೆಯೇ ಸಂಗೀತಾ, ಪ್ರತಾಪ್ ಸೇರಿದಂತೆ ಹಲವರ ಹೆಸರುಗಳು ಸೂಚಿತಗೊಂಡಿವೆ. ಯಾರ ಹೆಸರು ಹೆಚ್ಚು ಸಲ ಸೂಚಿತಗೊಂಡಿದೆ? ಯಾರು ಯಾರೆಲ್ಲ ನಾಮಿನೇಟ್ ಆಗುತ್ತಾರೆ ಎಂಬುದನ್ನು ಕಾದು ನೋಡಬೇಕಷ್ಟೆ.
ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು JioCinemaದಲ್ಲಿ ಉಚಿತವಾಗಿ ನೋಡಿ.