BIGGBOSS KANNADA | ತೊಂಬತ್ತು ದಿನಗಳಲ್ಲಿ ಕನ್ನಡದ ಮಣ್ಣಿನ ಮಗನಾದೆ; ಮೈಕಲ್‌ ಅಜಯ್ |Exclusive Interview

ಬೆಂಗಳೂರು, (www.thenewzmirror.com);

ಬಿಗ್‌ಬಾಸ್‌ ಕನ್ನಡ ಸೀಸನ್‌ 10ನ ಪ್ರಾರಂಭದ ದಿನ ಈ ಹೆಸರು ಘೋಷಣೆಯಾಗುತ್ತಿದ್ದಂತೆಯೇ ಹಲವರ ಹುಬ್ಬುಗಳು ಮೇಲೇರಿದ್ದವು. ಯಾರಿದು ಮೈಕಲ್ ಅಜಯ್? ಎಂಬ ಪ್ರಶ್ನೆ ಅವರ ಮನಸಲ್ಲಿ ಎದ್ದಿತ್ತು.

RELATED POSTS

ಹಿಂದಿಯ ರಿಯಾಲಿಟಿ ಷೋ ಒಂದರಲ್ಲಿ ಭಾಗವಹಿಸಿರುವ ವಿದೇಶದ ಪ್ರಜೆಯಾಗಿರುವ, ಕನ್ನಡದ ನೆಲದಲ್ಲಿ ಮೂಲಬೇರುಗಳ ಸಂಬಂಧ ಹೊಂದಿರುವ ಮೈಕಲ್‌, ಬಿಗ್‌ಬಾಸ್‌ ಮನೆಯೊಳಗೆ ಅಡಿಯಿಟ್ಟ ಮೇಲೆಯೂ ಅವರ ಬಗ್ಗೆ ಕುತೂಹಲ ತೋರಿದವರು ಕಡಿಮೆಯೇ. ಇವರ ಹೆಸರೇ ಕೇಳಿಲ್ಲ, ಕನ್ನಡವೂ ಬರುವುದಿಲ್ಲ. ಇವರು ಇಲ್ಲಿ ಹೆಚ್ಚು ದಿನ ಉಳಿದುಕೊಳ್ಳುವುದಿಲ್ಲ ಎಂದು ಉದಾಸೀನವಾಗಿ ನೋಡಿದವರೇ ಹೆಚ್ಚು.

ಆದರೆ ಅಂಥವರೇ ಅಚ್ಚರಿ ಕಣ್ಣುಗಳಿಂದ, ಮೆಚ್ಚುಗೆಯ ಮನಸ್ಸಿಂದ ನೋಡುವಂತೆ ಮಾಡುವ ಹಾಗೆ ಬೆಳೆದರು, ಬಿಗ್‌ಬಾಸ್ ಮನೆಯಲ್ಲಿ ಬಹುಧೀರ್ಘಕಾಲದವರೆಗೆ, ಫಿನಾಲೆಯ ಕೆಲವೇ ಹೆಜ್ಜೆಗಳಷ್ಟು ದೂರದವರೆಗೆ ಕ್ರಮಿಸಿದರು ಮೈಕಲ್! ಬೇರೆಯವರು ಬಿಡಿ, ಸ್ವತಃ ಅವರಿಗೇ ಎರಡು ಮೂರು ವಾರಕ್ಕಿಂತ ಹೆಚ್ಚು ಇಲ್ಲಿರಲಾರೆ ಎಂದು ಅನಿಸಿತ್ತಂತೆ! ಎಲ್ಲರೊಂದಿಗೆ ಸ್ನೇಹದೊಂದಿಗೆ ವರ್ತಿಸುವ ಗುಣ, ಸತ್ಯಕ್ಕೆ, ಪ್ರಾಮಾಣಿಕತೆಗೆ ಅಂಟಿಕೊಂಡಿರುವ ಬದ್ಧತೆ, ಇದ್ದಿದ್ದನ್ನು ಇದ್ದ ಹಾಗೆ ನೇರವಾಗಿ ಹೇಳುವ ದಿಟ್ಟ ಸ್ವಭಾವದಿಂದಲೇ ಕನ್ನಡಿಗರ ಮೆಚ್ಚುಗೆ ಗಳಿಸಿಕೊಂಡಿದ್ದ ಮೈಕಲ್ ಅಜಯ್ ಈ ವಾರ ಮನೆಯಿಂದ ಹೊರಗೆ ಬಂದಿದ್ದಾರೆ.

ಹೊರಬಂದ ಕೂಡಲೇ JioCinemaಗೆ ನೀಡಿರುವ ಎಕ್ಸ್‌ಕ್ಲ್ಯೂಸಿವ್ ಸಂದರ್ಶನದಲ್ಲಿ ಅವರು ತಮ್ಮದೇ ಸ್ಟೈಲ್‌ನಲ್ಲಿ ಬಿಗ್‌ಬಾಸ್‌ ಕನ್ನಡದ ಅನುಭವವನ್ನು ಹಂಚಿಕೊಂಡಿದ್ದಾರೆ. ಅದರ ಅಕ್ಷರರೂಪ ಇಲ್ಲಿದೆ. ಈ ಸಂದರ್ಶನವನ್ನು ನೀವು JioCinemaದಲ್ಲಿ ವೀಕ್ಷಿಸಬಹುದು.

‘ಹಾಯ್, ನಾನು ನಿಮ್ಮ ಮಣ್ಣಿನ ಮಗ. ನಿಮ್ಮ ಕನ್ನಡದ ಕಂದ. ಬಿಗ್‌ಬಾಸ್ ಕನ್ನಡ ಸೀಸನ್ 10 ಸ್ಪರ್ಧಿ ಮೈಕಲ್ ಅಜಯ್.
ತುಂಬ ಮಿಸ್ಸಿಂಗ್ ಫೀಲಿಂಗ್‌ನಲ್ಲಿದ್ದೀನಿ. ಆದರೆ ಈಗ ಹೊರಗಡೆ ಇರುವ ಜೀವನವನ್ನು ಅನುಭವಿಸಲು ಎಕ್ಸೈಟ್ ಆಗಿದ್ದೀನಿ. ನಾನು ಬಿಗ್‌ಬಾಸ್‌ ಮನೆಯೊಳಗೆ ಹೋದಾಗ, ಅಲ್ಲಿನ ವಾತಾವರಣ ನೋಡಿ ಎರಡು ಮೂರು ವಾರ ಇರಬಹುದಷ್ಟೇ ಎಂದುಕೊಂಡಿದ್ದೆ. ಆದರೆ ಹದಿಮೂರು ವಾರ ಉಳಿದೆ.


ಈವತ್ತು ಎಲಿಮಿನೇಟ್ ಆಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಎಲ್ಲೋ ಒಂದು ಕಡೆ, ಇನ್ನೊಂದೆರಡು ವಾರ ಕಳೆದು ಫೈನಲ್‌ಗೂ ಹೋಗಬಹುದು ಎಂಬ ವಿಶ್ವಾಸವೂ ಇತ್ತು. ಆದರೆ ಬ್ಯಾಡ್‌ಲಕ್!

ಕನ್ನಡ ಸುಂದರವಾದ ಭಾಷೆ!
ನಾನು ನನ್ನ ಬದುಕಿನಲ್ಲಿ ಕನ್ನಡ ಬಳಸಿದ್ದು ತುಂಬ ಕಡಿಮೆ. ಆದರೆ ಇಲ್ಲಿಗೆ ಬಂದು ಕನ್ನಡ ಎಂಥ ಸುಂದರವಾದ ಭಾಷೆ, ಅದರ ಲಿಪಿ ತುಂಬ ಸರಳ. ನಾನು ಐದಾರು ದಿನಗಳಲ್ಲಿಯೇ ಕನ್ನಡ ಲಿಪಿಗಳನ್ನೆಲ್ಲ ಕಲಿತುಕೊಂಡುಬಿಟ್ಟೆ. ಎಲ್ಲರ ಮೈಕ್‌ನ ನೇಮ್‌ಟ್ಯಾಗ್ ನೋಡಿ ನೋಡಿ ಅಕ್ಷರಗಳನ್ನು ಕಲಿಯುತ್ತಿದ್ದೆ. ಬಿಗ್‌ಬಾಸ್‌ ಎಂಬ ಫಲಕದಲ್ಲಿ ಬ ಮತ್ತು ಗ ಎಲ್ಲ ಗೊತ್ತಾಗುತ್ತಿತ್ತು.
ಕನ್ನಡ ತುಂಬ ಸುಂದರವಾದ ಭಾಷೆ ಅಂತ ನನಗನಿಸಿತು. ಕಲಿಯುವುದೂ ಸುಲಭ. ಕರ್ನಾಟಕಕ್ಕೆ ಬೇರೆ ಕಡೆಯಿಂದ ಬರುವವರೆಲ್ಲ ಟ್ರೈ ಮಾಡಿದ್ರೆ ತುಂಬ ಸುಲಭವಾಗಿ ಕನ್ನಡ ಕಲಿಯಬಹುದು.

ಆರಂಭದಲ್ಲಿಯೇ ಗಟ್ಟಿಯಾಗಿರಬೇಕಿತ್ತು
ಸ್ಟಾರ್ಟಿಂಗ್‌ನಲ್ಲಿ ತುಂಬ ಸ್ಲೋ ಆಗಿದ್ದೆ. ಅದೇ ನನ್ನನ್ನು ಕೊಂಚ ಹಿಂದಕ್ಕೆ ತಳ್ಳಿತು ಅನಿಸುತ್ತದೆ. ಆರಂಭದಿಂದಲೇ ಇನ್ನಷ್ಟು ಸ್ಟ್ರಾಂಗ್ ಆಗಿ ನಿಂತುಕೊಂಡಿದ್ದರೆ ಇನ್ನೂ ತುಸು ಮುಂದಕ್ಕೆ ಹೋಗಬಹುದಿತ್ತು ಅನಿಸುತ್ತದೆ. ಈಗೇನಾದ್ರೂ ಮತ್ತೆ ಪುನಃ ಮನೆಯೊಳಗೆ ಹೋಗಲು ಅವಕಾಶ ಸಿಕ್ಕರೆ ಮೊದಲ ದಿನದಿಂದಲೇ ಎಲ್ಲರ ಜೊತೆಯಲ್ಲಿ ಬೆರೆಯಲು ಶುರುಮಾಡುತ್ತಿದ್ದೆ.

ವಿನಯ್ ಜೆನ್ಯೂನ್
ಮನೆಯಲ್ಲಿ ವಿನಯ್‌ ತುಂಬ ಜೆನ್ಯೂನ್‌ ವ್ಯಕ್ತಿ. ಮೊದಲ ದಿನದಿಂದಲೇ ಅವರೊಂದಿಗೆ ಶುರುವಾದ ಸ್ನೇಹ, ಹೊರಗೆ ಬರುವ ದಿನದವರೆಗೆ ಮುಂದುವರಿದಿತ್ತು. ನಮ್ಮ ಮಧ್ಯ ತುಂಬ ಜಗಳಗಳಾಗಿವೆ. ಆದರೆ ಅವೆಲ್ಲವೂ ಟಾಸ್ಕ್‌ಗಳಿಗಾಗಿ. ಅದರಾಚೆಗೆ ನಮ್ಮ ಮಾತು, ಫ್ರೆಂಡ್‌ಷಿಪ್ ಎಲ್ಲ ಪ್ಯೂರ್ ಆಗಿವೆ. ಹಾಗಾಗಿ ವಿನಯ್ ತುಂಬ ಜೆನ್ಯೂನ್ ಅನಿಸುತ್ತಾರೆ.
ನನ್ನ ಪ್ರಕಾರ ಮನೆಯಲ್ಲಿ ಫೇಕ್ ಆಗಿದ್ದಿದ್ದು ಇಬ್ಬರು. ಒಬ್ಬರು ಸಂಗೀತಾ ಇನ್ನೊಬ್ಬ ಪ್ರತಾಪ್. ಪ್ರತಾಪ್‌ ಹೇಗೆ ಅಂತ ಅರ್ಥನೇ ಆಗಿಲ್ಲ. ಅವನು ಕಂಪ್ಲೀಟ್ ಸಿಂಪತಿ ಕಾರ್ಡ್‌ ಪ್ಲೇ ಮಾಡಿ ಮುಂದೆ ಬಂದಿದಾನೆ. ಸಂಗೀತಾ ಕೂಡ ಬೇಡದಿರುವ ಕಡೆ ತನ್ನ ಅಭಿಪ್ರಾಯಗಳನ್ನು ಇಂಜೆಕ್ಟ್ ಮಾಡಿ, ಕಾರ್ಡ್‌ ಪ್ಲೇ ಮಾಡಿ ಮುಂದೆ ಹೋಗಿದಾಳೆ ಅನಿಸುತ್ತದೆ.

ಮೈಕಲ್ ಟಾಪ್‌ 5 ಲೀಸ್ಟ್
ನನ್ನ ಪ್ರಕಾರ ವಿನಯ್, ಸಂಗೀತಾ, ಕಾರ್ತಿಕ್ ಸಂಗೀತಾ, ತುಕಾಲಿ ಮತ್ತು ಪ್ರತಾಪ್ ಇವರು ಕೊನೆಯ ಹಂತದಲ್ಲಿರುತ್ತಾರೆ. ಸಂಗೀತಾ ವಿನ್ ಆಗಬಹುದು ಅಂತ ನನಗನಿಸುತ್ತದೆ.
ಮುಂದಿನ ವಾರ ತನಿಷಾ ಎಲಿಮಿನೇಟ್ ಆಗಬಹುದು. ಯಾಕೆಂದರೆ, ಅವಳು ಲೌಡ್ ಆಗಿದ್ದಾಳೆ. ಅದರೆ ಅವಳ ಗೇಮ್ ತುಂಬ ಸ್ಲೋ ಆಗಿ ಹೋಗುತ್ತಿದೆ.

ಜಿಯೊ ಫನ್ ಫ್ರೈಡೆ
ಜಿಯೊ ಫನ್ ಫ್ರೈಡೆ ಟಾಸ್ಕ್‌ಗಳು ನನಗೆ ಯಾವಾಗಲೂ ಇಷ್ಟ. ಚೆನ್ನಗಿರುತ್ತಿದ್ದವು. ಫ್ರೈಡೆ ಮಾಡಲಿಕ್ಕೆ ಹೆಚ್ಚೇನೂ ಇರುತ್ತಿರಲಿಲ್ಲ. ಹಾಗಾಗಿ ಫನ್ ಫ್ರೈಡೆಗಾಗಿ ನಾವೆಲ್ಲ ಕಾಯುತ್ತಿದ್ದೆವು. ಅದೇ ದೊಡ್ಡ ಎಂಟರ್‍ಟೈನ್ಮೆಂಟ್‌. ಯಾವಾಗಲೂ ಒಂದು ಎಂಟರ್‍ಟೈನಿಂಗ್ ಟಾಸ್ಕ್‌ ಆಗಿರುತ್ತಿತ್ತು.
ನನಗೆ ತುಂಬ ದಿನಗಳವರೆಗೆ ಒಂದು ಫೀಲಿಂಗ್ ಇತ್ತು, ‘ಏನ್ ಗುರು, ನಾನು ಎಷ್ಟೆಲ್ಲ ಟಾಸ್ಕ್ ಗೆದ್ದಿದೀನಿ. ಕಿಚ್ಚನ ಚಪ್ಪಾಳೆ ತಗೊಂಡಿದೀನಿ. ಕ್ಯಾಪ್ಟನ್ ಆಗಿದ್ದೀನಿ. ಆದ್ರೆ ಜಿಯೊ ಟಾಸ್ಕ್ ಗೆದ್ದಿಲ್ಲವಲ್ಲ ಅಂತ. ಆದರೆ ಎರಡು ವಾರದ ಹಿಂದೆ  ಬ್ರೆಡ್ ತಿನ್ನುವ ಟಾಸ್ಕ್ ಬಂತು. ನನಗೋಸ್ಕರವೇ ಮಾಡಿದ ಟಾಸ್ಕ್ ಹಾಗಿತ್ತು ಅದು. ಅದನ್ನು ಗೆದ್ದೆ. ತುಂಬ ಖುಷಿಯಾಯ್ತು.

ಬಿಗ್‌ಬಾಸ್‌ನಲ್ಲಿ ಮಿಸ್‌ ಮಾಡ್ಕೊಳ್ಳೋದೇನು?
ಬೆಳಬೆಳಿಗ್ಗೆ ಹಾಡು ಹಾಕಿನಮ್ಮನ್ನು ಎಬ್ಬಿಸೋದನ್ನು ನಾನು ಮಿಸ್ ಮಾಡ್ತೀನಿ. ಬೆಳಿಗ್ಗೆ ಹಾಡು ಕೇಳಿ ಎದ್ದು, ಡಾನ್ಸ್ ಮಾಡಿ, ಕಾಫಿ ಕುಡಿದು, ವರ್ಕೌಟ್ ಮಾಡಿ ಹೋಗಿ ಪಾತ್ರೆ ತೊಳೆಯುವ ದಿನಚರಿಯನ್ನು ನಾನು ತುಂಬ ಮಿಸ್ ಮಾಡ್ಕೋತೀನಿ. 90 ದಿನಗಳ ಕಾಲ ಆ ದಿನಚರಿ ಮಾಡಿ ಸೆಟ್ ಆಗಿಬಿಟ್ಟಿದೆ ನನಗೆ. ಅದನ್ನು ಮಿಸ್ ಮಾಡ್ಕೋತೀನಿ.

ಬಿಗ್‌ಬಾಸ್ ಜರ್ನಿ ತುಂಬ ಅಮೇಜಿಂಗ್ ಆಗಿತ್ತು. ಎರಡೇ ವಾರ ಇರ್ತೀನಿ ಅಂದುಕೊಂಡು ಹೋದವನು ನಾನು. ಆದರೆ ಈ ಹದಿಮೂರು ವಾರದಲ್ಲಿ ಹಲವು ಬಗೆಯ ಸಂದರ್ಭಗಳಲ್ಲಿ ಹಾದೂ ನಾನು ನಾನೇ ಆಗಿ ಇದ್ದೀನಿ. ಹಾಗಾಗಿ ಇನ್ನೂ ಸಾಕಷ್ಟು ಸಾಧನೆ ಮಾಡಬಹುದು ಎಂದು ನನಗೆ ವಿಶ್ವಾಸ ಹುಟ್ಟಿದೆ.

ಬರೀ ತೊಂಬತ್ತು ದಿನಗಳಲ್ಲಿ ಒಂದು ಭಾಷೆಯನ್ನು ತುಂಬ ಚೆನ್ನಾಗಿ ಕಲಿತುಕೊಂಡು ಮಣ್ಣಿನ ಮಗ ಆಗಬಹುದು ಎಂಬುದನ್ನೂ ಬಿಗ್‌ಬಾಸ್ ನನಗೆ ಮನವರಿಕೆ ಮಾಡಿಕೊಟ್ಟಿದೆ.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist