BIGGBOSS KANNADA |‘ಅಮ್ಮಾ ವಾಪಸ್ ಬಾರಮ್ಮಾ’ ; ಬಿಕ್ಕಿ ಬಿಕ್ಕಿ ಅತ್ತ ಕಾರ್ತಿಕ್..!

ಬೆಂಗಳೂರು, (www.thenewzmirror.com);

ಕನ್ನಡ ಬಿಗ್‌ಬಾಸ್‌ ಮನೆಯೊಳಗೆ ಈ ವಾರ ಭಾವುಕತೆಯ ಸಮುದ್ರವೇ ಮೊರೆಯುತ್ತಿದೆ. ಇಷ್ಟು ದಿನಗಳ ಕಾಲ ಮನೆಯವರಿಂದ ದೂರವಿದ್ದ ಮನೆಯ ಸದಸ್ಯರಿಗೆ ಬಿಗ್‌ಬಾಸ್‌ ಕುಟುಂಬದವರೊಂದಿಗೆ ಬೆರೆಯುವ ಅವಕಾಶ ನೀಡುತ್ತಿದ್ದಾರೆ. ಅಲ್ಲದೆ ಮನೆಯ ಕ್ಯಾಪ್ಟನ್ಸಿ ಟಾಸ್ಕ್‌ನ ಭಾಗವಾಗಲೂ ಬಿಗ್‌ಬಾಸ್‌ ಮನೆಮಂದಿಯ ಬಂಧುಗಳಿಗೆ ಅವಕಾಶ ನೀಡುತ್ತಿದ್ದಾರೆ. ಈವತ್ತು JioCinema ಬಿಡುಗಡೆ ಮಾಡಿರುವ ಪ್ರೋಮೊ, ಅಂಥದ್ದೇ ಮತ್ತೊಂದು ಭಾವುಕ ಕ್ಷಣಕ್ಕೆ ಸಾಕ್ಷಿಯಾಗಿದೆ.

RELATED POSTS

ಎಲ್ಲರೂ ಮನೆಯ ಚಟುವಟಿಕೆಗಳಲ್ಲಿ ನಿರತರಾಗಿದ್ದಾಗ, ‘ನನ್ನ ಮುದ್ದು ತಾರೆ; ನಗುತಲಿ ಬಾರೆ’ ಎಂಬ ಹಾಡು ಮನೆಯೊಳಗೆ ಮೊಳಗಿದೆ. ಈ ಧ್ವನಿಯನ್ನು ಗುರ್ತು ಹಿಡಿದ ಕಾರ್ತಿಕ್‌, ಖುಷಿಯಿಂದ ಜಿಗಿಯುತ್ತ, ‘ಅಮ್ಮಾ…’ ಎಂದು ಓಡಿಹೋಗಿ ಷರ್ಟ್‌ ತೊಟ್ಟುಕೊಂಡು ಬಂದಿದ್ದಾರೆ. ಅಮ್ಮನೊಡನೆ ಒಡನಾಡಲು ಕಾಯುತ್ತಿದ್ದ ಕಾರ್ತಿಕ್‌ಗೆ ಬಿಗ್‌ಬಾಸ್‌ ಶಾಕ್ ನೀಡಿದ್ದಾರೆ. ಕಾರ್ತಿಕ್ ಮನೆಯೊಳಗೆ ಪ್ರವೇಶಿಸುತ್ತಿದ್ದ ಹಾಗೆಯೇ ಬಿಗ್‌ಬಾಸ್‌ ಎಲ್ಲರಿಗೂ ಪಾಸ್ ಹೇಳಿದ್ದಾರೆ.

ಹಾಗಾಗಿ ಕಾರ್ತಿಕ್ ಸೇರಿದಂತೆ ಎಲ್ಲರೂ ನಿಂತಲ್ಲೇ ನಿಶ್ಚಲರಾಗಿದ್ದಾರೆ. ಆಗ ಮನೆಯೊಳಗೆ ಬಂದ ಕಾರ್ತಿಕ್ ಅಮ್ಮ, ಕಾರ್ತಿಕ್ ಅವರ ಕೆನ್ನೆ ಸವರಿ, ‘ನಾವೆಲ್ಲರೂ ಚೆನ್ನಾಗಿದೀವಿ. ಅಳಬೇಡ ನೀಡು’ ಎಂದಷ್ಟೇ ಹೇಳಿದ್ದಾರೆ. ಕಣ್ಣಲ್ಲಿ ನೀರು ಸುರಿಯುತ್ತಿದ್ದರೂ ಹೆತ್ತಮ್ಮನನ್ನು ತಬ್ಬಿಕೊಳ್ಳಲು, ಅವರೊಡನೆ ಮಾತಾಡಲು ಸಾಧ್ಯವಾಗದ ಸ್ಥಿತಿಯಲ್ಲಿ ಕಾರ್ತಿಕ್ ಅಸಹಾಯಕತೆ ಹೃದಯಕರಗಿಸುವಂತಿದೆ.

ಅಷ್ಟರಲ್ಲಿ ಬಿಗ್‌ಬಾಸ್ ಮನೆಯ ಮುಖ್ಯದ್ವಾರ ತೆರೆದುಕೊಂಡಿದೆ. ಎಲ್ಲರೂ ನಿಶ್ಚಲ ಸ್ಥಿತಿಯಲ್ಲಿದ್ದಾಗಲೇ, ಕಾರ್ತಿಕ್ ಅಮ್ಮ, ತೆರೆದ ಬಾಗಿಲಿನಿಂದ ಹೊರಗೆ ಹೋಗಿದ್ದಾರೆ. ಬಾಗಿಲು ಹಾಕಿಕೊಂಡಿದೆ.

‘ಅಮ್ಮಾ ವಾಪಸ್ ಬಾರಮ್ಮಾ’ ಎಂದು ಬಿಕ್ಕಿ ಬಿಕ್ಕಿ ಅಳುತ್ತಿರುವ ಕಾರ್ತಿಕ್, ಅವರಿಗೆ ಅಮ್ಮನ ಜೊತೆ ಮಾತಾಡಲು ಅವಕಾಶ ಸಿಗುತ್ತದೆಯಾ? ಅವರು ಮಾಡಿದ ಯಾವ ತಪ್ಪಿಗೆ ಈ ಶಿಕ್ಷೆ?


ಎಲ್ಲವನ್ನೂ ತಿಳಿದುಕೊಳ್ಳಲು ಬಿಗ್‌ಬಾಸ್ ವೀಕ್ಷಿಸಿ. ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು JioCinemaದಲ್ಲಿ ಉಚಿತವಾಗಿ ನೋಡಿ.
ಪ್ರತಿದಿನದ ಎಪಿಸೋಡ್‌ಗಳನ್ನು Colors Kannada ದಲ್ಲಿ ರಾತ್ರಿ 9.30ಕ್ಕೆ ವೀಕ್ಷಿಸಿ.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist