ಬಿಗ್‌ಬಾಸ್‌ ಮನೆಯೊಳಗೆ ಬಾಕ್ಸಿಂಗ್ ಪಂಚ್ ಮತ್ತು ಪಂಚಿಂಗ್ ಡೈಲಾಗ್ಸ್!

ಬೆಂಗಳೂರು, (www.thenewzmirror.com);

ಫಿನಾಲೆಗೆ ದಿನಗಣನೆ ಶುರುವಾಗಿರುವ ಹಾಗೆಯೇ ಮನೆಯೊಳಗಿನ ಸದಸ್ಯರ ನಡುವಿನ ಹಣಾಹಣಿಯೂ ಜೋರಾಗಿಯೇ ಇದೆ. ಮಾಡು ಇಲ್ಲವೇ ಮಡಿ ಹಂತದಲ್ಲಿ ಸಿಕ್ಕ ಅವಕಾಶವನ್ನು ತಮ್ಮ ಎದುರಾಳಿಗಳನ್ನು ಕುಗ್ಗಿಸುವುದಕ್ಕೆ, ತಮಗೆ ಫಿನಾಲೆ ದಾರಿಯನ್ನು ಸುಗಮಗೊಳಿಸಿಕೊಳ್ಳುವುದಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಈ ಪ್ರಯತ್ನದಲ್ಲಿ ಹಿಂದೆಂದೂ ಕಾಣದ ಅವರ ಗುಣಸ್ವಭಾವಗಳು ಆಚೆಗೆ ಬರುತ್ತಿವೆ.

RELATED POSTS

ಬಿಗ್‌ಬಾಸ್‌, ಮನೆಯೊಳಗಿನ ಆರು ಸ್ಪರ್ಧಿಗಳಿಗೆ ತಮ್ಮ ಎದುರಾಳಿಗಳ ಮೇಲಿನ ಆಕ್ರೋಶವನ್ನು ವ್ಯಕ್ತಪಡಿಸುವುದಕ್ಕೆ ಒಂದು ಅವಕಾಶವನ್ನು ನೀಡಿದೆ. ಎದುರಿಗೆ ಆರು ಪಂಚಿಂಗ್ ಬ್ಯಾಗ್ ಇಟ್ಟು ಅವುಗಳ ಮೇಲೆ ಆರು ಸ್ಪರ್ಧಿಗಳ ಫೋಟೊ ಛಾಪಿಸಲಾಗಿದೆ. ಪ್ರತಿ ಸದಸ್ಯರೂ ತಾವು ಆಯ್ಕೆ ಮಾಡಿಕೊಳ್ಳುವ ಒಬ್ಬ ಸ್ಪರ್ಧಿಯ ಎದುರು ನಿಂತುಕೊಂಡು ಆ ಸ್ಪರ್ಧಿಗೆ ಹೇಳಬೇಕೆಂದಿರುವ ಆಕ್ರೋಶದ ಮಾತುಗಳನ್ನು ಹೇಳಿ ಅವರ ಫೋಟೊ ಇರುವ ಬ್ಯಾಗ್‌ಗೆ ಪಂಚ್ ಮಾಡಬೇಕು.

ವಿನಯ್‌, ಪ್ರತಾಪ್ ಚಿತ್ರವಿರು ಬ್ಯಾಗ್ ಎದುರು ನಿಂತಿದ್ದಾರೆ. ತಮ್ಮದೇ ಸ್ಟೈಲ್‌ನಲ್ಲಿ ಪ್ರತಾಪ್‌ ಕಡೆಗೆಕೆಂಡಗಣ್ಣಿನ ಖಡಕ್ ಲುಕ್‌ ಕೊಟ್ಟು, ಸಿನಿಮೀಯವಾಗಿ, ‘ಪ್ರತಾಪ್, ನೀನು ನನ್ನ ಬಗ್ಗೆ ಸರಿಯಾಗಿ ಮಾತಾಡುವುದನ್ನು ಕಲ್ತ್ಕೋ. ಇಲ್ಲಾಂದ್ರೆ ಪರಿಣಾಮ ಸರಿಯಾಗಿರಲ್ಲ’ ಎಂದು ಹೇಳಿ ಬಲವಾಗಿ ಪ್ರತಾಪ್ ಫೋಟೊ ಇರುವ ಬ್ಯಾಗ್ ಮೇಲೆ ಪಂಚ್ ಮಾಡಿದ್ದಾರೆ. ಪ್ರತಾಪ್ ಮುಖಕ್ಕೇ ಪಂಚ್ ಮಾಡುವಷ್ಟು ಆಕ್ರೋಶ ಅವರಲ್ಲಿದ್ದದ್ದು ಎದ್ದು ಕಾಣಿಸುತ್ತಿತ್ತು.

ಆದರೆ ಇದಕ್ಕೆ ಡ್ರೋಣ್ ಪ್ರತಾಪ್ ಕೊಟ್ಟ ಕೌಂಟರ್ ಮಾತ್ರ ಇನ್ನೂ ಸರ್ಪೈಸಿಂಗ್ ಆಗಿತ್ತು! ಸಾಮಾನ್ಯವಾಗಿ ಹೀಗೆ ತಮ್ಮ ಬಗ್ಗೆ ಆರೋಪ ಬಂದಾಗ ಅವುಗಳಿಗೆ ಉತ್ತರಿಸುವಾಗ ಪ್ರತಾಪ್, ಸಾವಧಾನದಿಂದ ತಮಗೆ ಅನಿಸಿದ್ದನ್ನು ವಿವರಿಸುತ್ತಿದ್ದರು. ಎದುರುಗಡೆಯವರು ಎಷ್ಟೇ ಕಿರುಚಾಡಿದರೂ ತಾಳ್ಮೆ ಕಳೆದುಕೊಳ್ಳದೆ ತಣ್ಣನೆಯ ಧ್ವನಿಯಲ್ಲಿಯೇ ವಿವರಿಸುತ್ತಿದ್ದರು.

ವಿನಯ್ ಜೊತೆಗಿನ ಜಗಳದಲ್ಲಿ ಕೆಲವೊಮ್ಮೆ ತಾಳ್ಮೆ ಕಳೆದುಕೊಂಡು ಏರುಧ್ವನಿಯಲ್ಲಿ ಕಿರುಚಾಡಿದ್ದೂ ಇತ್ತು. ಆದರೆ ಈಗಿನ ಹಂತದಲ್ಲಿ ಪ್ರತಾಪ್ ಕೌಂಟ್ ಈ ಎರಡಕ್ಕಿಂತ ತುಂಬ ಭಿನ್ನವಾಗಿತ್ತು. ಈ ಸಲ, ಬಹುಶಃ ತಮ್ಮ ಬಿಗ್‌ಬಾಸ್ ಪಯಣದಲ್ಲಿ ಇದೇ ಮೊದಲ ಸಲ ಅವರು ವ್ಯಂಗ್ಯದ ಅಸ್ತ್ರವನ್ನು ಹಿಡಿದಿದ್ದಾರೆ!

ಕೈಗೆ ಬಾಕ್ಸಿಂಗ್ ಗ್ಲೌಸ್ ತೊಟ್ಟ ಪ್ರತಾಪ್, ವಿನಯ್ ಅವರನ್ನೇ ಇಮಿಟೇಟ್ ಮಾಡಿದ್ದಾರೆ. ‘ನಿಮ್ಮ ಅರಚಾಟಕ್ಕೆ…. ವೋ ಪ್ರತಾಪ್… ಹೋ ಪ್ರತಾಪ್… ಪ್ರತಾಪ್ ಎಂದರೆ ಇಲ್ಲಿ ಯಾರೂ ಹೆದರಿಕೊಳ್ಳೋರಿಲ್ಲ. ನೀವು ಅತ್ತರೆ ಅದು ಪ್ರೀತಿ… ನಾನು ನನ್ನ ತಂದೆ-ತಾಯಿ ನೆನಪಿಸಿಕೊಂಡು ಅತ್ತರೆ ಅದು ಸಿಂಪತಿ’ ಎಂದು ವ್ಯಂಗ್ಯವಾಗಿ ಹೇಳಿದ್ದಾರೆ.
ವಿನಯ್, ‘ನೀನು ಬುದ್ಧಿವಾದ ನನಗೆ ಹೇಳಬೇಕಾಗಿಲ್ಲ’ ಎಂದು ತಿರುಗೇಟು ಕೊಟ್ಟಿದ್ದಾರೆ.

ಅದಕ್ಕೂ ಪ್ರತಾಪ್, ಭಯವನ್ನು ನಟಿಸುತ್ತ, ‘ಅಯ್ಯೋ ವಿನಯಣ್ಣ… ಭಯ ಅಣ್ಣ… ನಂಗೆ ಆಗ್ತಾ ಇಲ್ಲ ಅಣ್ಣಾ…’ ಎಂದು ಮುದುರಿದ ಹಾಗೆ ನಟಿಸಿದ್ದಾರೆ. ‘ನಿನಗೆ ಹೆದರಿಸೋದಕ್ಕಲ್ಲ ಮರಿ ನಾನು ಹೇಳ್ತಾ ಇರೋದು’ ಎಂದು ವಿನಯ್ ಹೇಳಿದರೆ, ‘ಕೇಳಿ ಅಣ್ಣಾ ನಾನ್ಹೇಳ್ತೀನಿ… ಕೇಳಿ… ಕೇಳ್ಬೇಕು ನೀವೀವತ್ತು’ ಎಂದು ಇನ್ನಷ್ಟು ಕೆಣಕಿದ್ದಾರೆ.

ಹಾಗಾದ್ರೆ ಪ್ರತಾಪ್ ಒಳಗಿನ ಈ ಅಣುಕುನಟ ಹೊರಬಂದಿದ್ದು ಹೇಗೆ? ಯಾಕೆ? ಅವರು ವಿನಯ್‌ಗೆ ಏನು ಹೇಳಲು ಹೊರಟಿದ್ದಾರೆ? ಈ ಎಲ್ಲವನ್ನೂ ತಿಳಿದುಕೊಳ್ಳಲು ಇಬತ್ತಿನ ಎಪಿಸೋಡ್ ನೋಡಿ

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist