ಬೆಂಗಳೂರು,(www.thenewzmirror.com);
ಅಯೋಧ್ಯೆಯಲ್ಲಿ ರಾಮ ಪ್ರಾಣ ಪ್ರತಿಷ್ಠಾಪನೆ ಸಮಾರಂಭದ ಐತಿಹಾಸಿಕ ಕ್ಷಣದಲ್ಲಿ ಇಡೀ ದೇಶವೇ ಸಾಕ್ಷಿಯಾಗಿದೆ. ಈ ಶುಭ ದಿನದಂದು,
ಹನುಮಾನ್ ಸಿನಿಮಾ ನಿರ್ದೇಶಕ ಪ್ರಶಾಂತ್ ವರ್ಮಾ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ತಮ್ಮ ಮುಂಬರುವ ಚಿತ್ರ ‘ಜೈ ಹನುಮಾನ್’ ಸಿನಿಮಾಗಾಗಿ ತಯಾರಿಯನ್ನು ಪ್ರಾರಂಭಿಸಿದ್ದಾರೆ. ಅದರ ಭಾಗವಾಗಿ ಇಂದು ಜೈ ಹನುಮಾನ್ ಸಿನಿಮಾದ ಸ್ಟ್ರಿಪ್ಟ್ ಪೂಜೆ ನೆರವೇರಿಸಿದ್ದಾರೆ.
ಪ್ರಶಾಂತ್ ವರ್ಮಾ ಅವರ ಸೂಪರ್ ಹೀರೋ ಚಿತ್ರ ಹನುಮಾನ್ ಜನವರಿ 12 ರಂದು ಬಿಡುಗಡೆಯಾಯಿತು. ತೇಜ ಸಜ್ಜ, ವರಲಕ್ಷ್ಮಿ ಶರತ್‌ಕುಮಾರ್, ಅಮೃತ ಅಯ್ಯರ್ ಮತ್ತು ವಿನಯ್ ರೈ ನಟಿಸಿರುವ ಚಿತ್ರವು ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಈ ಸಕ್ಸಸ್ ಬೆನ್ನಲ್ಲೇ ಜೈ ಹನುಮಾನ್ ಸಿನಿಮಾದ ಕೆಲಸ ಶುರುವಾಗಿವೆ.
ಹನುಮಾನ್ ಸಿನಿಮಾ ಮೂಲಕ ಪ್ರಶಾಂತ್ ವರ್ಮಾ ರಾಷ್ಟ್ರವ್ಯಾಪಿ ಜನಪ್ರಿಯರಾಗಿದ್ದಾರೆ. ಸೃಜನಶೀಲ ನಿರ್ದೇಶಕರು ಪ್ರಶಾಂತ್ ವರ್ಮಾ ಸಿನಿಮಾಟಿಕ್ ಯೂನಿವರ್ಸ್ (PVCU) ನಿಂದ ಮತ್ತೊಂದು ಮಹಾಕಾವ್ಯ ಸಾಹಸವನ್ನು ಪ್ರೇಕ್ಷಕರ ಎದುರು ತರುತ್ತಿದ್ದಾರೆ. ಅದರ ಭಾಗವಾಗಿ ಜೈ ಹನುಮಾನ್ ಸಿನಿಮಾ ಘೋಷಿಸಿದ್ದು, ದೊಡ್ಡ ಮಟ್ಟದಲ್ಲಿ ಮೂಡಿಬರಲಿರುವ ಸೀಕ್ವೆಲ್‌ಗಾಗಿ ನಿರ್ದೇಶಕರು ಈಗಾಗಲೇ ಸ್ಕ್ರಿಪ್ಟ್ ನ್ನು ಸಿದ್ಧಪಡಿಸಿದ್ದಾರೆ.
ಹೈದರಾಬಾದ್‌ನ ಹನುಮಾನ್ ದೇವಾಲಯದಲ್ಲಿಂದು ಸ್ಕ್ರಿಪ್ಟ್ ಪೂಜೆ ನೆರವೇರಿದೆ. ಮುಂದಿನ ದಿನಗಳಲ್ಲಿ ತಾರಾ ಬಳಗ ಹಾಗೂ ತಾಂತ್ರಿಕ ವರ್ಗದ ಬಗ್ಗೆ ಮಾಹಿತಿ ನೀಡಲಿದ್ದಾರೆ.