ಬೆಂಗಳೂರು, (www.thenewzmirror.com) :
ಕಳೆದ 9 ವರ್ಷಗಳಿಂದ ನಿರಂತರವಾಗಿ ಸಂಚಲನ ಸೃಷ್ಟಿಸಿದ್ದ ಕರ್ನಾಟಕ ಜಾತಿಗಣತಿ ವರದಿ (ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ 2015ರ ದತ್ತಾಂಶಗಳ ಅಧ್ಯಯನ ವರದಿ 2024)ಯು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ವೀಕಾರ ಮಾಡಿದ್ದಾರೆ. ಎರಡು ಬೃಹತ್ ಮೂಟೆಗಳಲ್ಲಿ ಜಾತಿ ಗಣತಿ ವರದಿಗಳ ಪ್ರತಿಯನ್ನು ವಿಧಾನಸೌಧಕ್ಕೆ ತರಲಾಗಿದ್ದು, ಅವುಗಳನ್ನು ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗಡೆ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಹಸ್ತಾಂತರ ಮಾಡಿದರು.
ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗಡೆ ಅವರಿಂದ ಸಲ್ಲಿಕೆಯಾದ ಜಾತಿ ಗಣತಿ ವರದಿಯಲ್ಲಿ ಒಟ್ಟು 13 ಪ್ರತಿಗಳನ್ನು ಸಿದ್ಧಪಡಿಸಲಾಗಿದೆ. ಎಲ್ಲ ಪ್ರತಿಗಳು ದೊಡ್ಡ ಸಂಪುಟಗಳಾಗಿವೆ. ಕೆಲವು ಸಂಪುಟಗಳನ್ನು ಎರಡು-ಮೂರು ಭಾಗಗಳಾಗಿ ಮಾಡಲಾಗಿದ್ದು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಹಾಗೂ ಎಲ್ಲ ವರ್ಗಗಳ ಶೈಕ್ಷಣಿಕ ಮತ್ತು ಸಾಮಾಜಿಕ ಸ್ಥಾನಮಾನಗಳ ಸಮೀಕ್ಷೆಯನ್ನು ವರದಿಯು ಒಳಗೊಂಡಿದೆ.
* ಒಟ್ಟು 5.98 ಕೋಟಿ ಮಂದಿಯ ಸಮೀಕ್ಷೆ
* ಸಮೀಕ್ಷೆಯಿಂದ ಹೊರಗುಳಿದವರ ಪ್ರಮಾಣ 32 ಲಕ್ಷ
* ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ನಡೆಸಿದ ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ
* ಕರ್ನಾಟಕದಲ್ಲಿ ದಲಿತರ ಪ್ರಮಾಣವೇ ಹೆಚ್ಚು
* ಕುರುಬರೇ ಅತ್ಯಂತ ಹಿಂದುಳಿದ ವರ್ಗ
* ಸಮೀಕ್ಷೆಗೊಳಪಟ್ಟ ಜಾತಿಗಳ ಸಂಖ್ಯೆ 1,351
* ಹೊಸದಾಗಿ ದಾಖಲಾದ ಜಾತಿಗಳ ಸಂಖ್ಯೆ 192
* ಸರಕಾರ ಗುರುತಿಸಿರುವ ಇತರೆ ಹಿಂದುಳಿದ ಜಾತಿಗಳು(ಓಬಿಸಿ) 816
* 10ಕ್ಕಿಂತ ಕಡಿಮೆ ಜನಸಂಖ್ಯೆ ದಾಖಲಾಗಿರುವ ಜಾತಿಗಳ ಪ್ರಮಾಣ 80
ಜಾತಿವಾರು ಜನಸಂಖ್ಯೆ
* ಪರಿಶಿಷ್ಟ ಜಾತಿ(ಎಸ್’ಸಿ)ಯವರ ಸಂಖ್ಯೆ 1.08 ಕೋಟಿ
* ಪರಿಶಿಷ್ಟ ಪಂಗಡ(ಎಸ್’ಟಿ)ದವರ ಪ್ರಮಾಣ 40.45 ಲಕ್ಷ
* ಮುಸ್ಲಿಮರು 70 ಲಕ್ಷ
* ಲಿಂಗಾಯತ: 65 ಲಕ್ಷ
* ಒಕ್ಕಲಿಗ: 60 ಲಕ್ಷ
* ಕುರುಬರು 45 ಲಕ್ಷ
* ಈಡಿಗ: 15 ಲಕ್ಷ
* ವಿಶ್ವಕರ್ಮ: 15
* ಬೆಸ್ತ: 15 ಲಕ್ಷ
* ಬ್ರಾಹ್ಮಣ: 14 ಲಕ್ಷ
* ಗೊಲ್ಲ(ಯಾದವ) 10 ಲಕ್ಷ
* ಮಡಿವಾಳ ಸಮಾಜ: 6
* ಅರೆ ಅಲೆಮಾರಿ 6 ಲಕ್ಷ
* ಕುಂಬಾರ 5 ಲಕ್ಷ
* ಸವಿತಾ ಸಮಾಜ 5 ಲಕ್ಷ