Bbmp Scam | ನಕಲಿ ಖಾತೆ ಸೃಷ್ಟಿಸಿ ಒಂದೇ ತಿಂಗಳಲ್ಲಿ 5 ಕೋಟಿ ಪಂಗನಾಮ..!  ಅಧಿಕಾರಿಗಳ ಕಳ್ಳಾಟ ಬಯಲು ಮಾಡಿದ ಬಿಜೆಪಿ ಮುಖಂಡ ಎನ್.ಆರ್. ರಮೇಶ್ !

ಬೆಂಗಳೂರು, (www.thenewzmirror.com) :

ರಾಜ್ಯದಲ್ಲಿ ಭ್ರಷ್ಟಚಾರ ಮುಕ್ತ ಆಡಳಿತ ಕೊಡುತ್ತೀವಿ ಅಂತ ಬಂದಿರುವ ಕಾಂಗ್ರೆಸ್ ಸರ್ಕಾರದಲ್ಲಿ ನಡೆದ ಬಹುದೊಡ್ಡ ಹಗರಣ, ಡಿಸಿಎಂ ಉಸ್ತುವಾರಿ ವಹಿಸಿರುವ ಬೆಂಗಳೂರಿನಲ್ಲೇ ಆಗಿರುವ ಭ್ರಷ್ಟಚಾರ, ಒಂದೇ ತಿಂಗಳಲ್ಲಿ ನಕಲಿ ದಾಖಲೆ ಸೃಷ್ಟಿಸಿ 5ಕೋಟಿಗೂ ಅಧಿಕ ಹಣ ಪಂಗನಾಮ ಮಾಡಿದ ಅಧಿಕಾರಿಗಳ ಹಣದಾಸೆಯ ಕರಾಳ ಮುಖ ಇದೀಗ ಬಯಲಾಗಿದೆ.

RELATED POSTS

ಯಶವಂತಪುರ ವಿಧಾನಸಭಾ ಕ್ಷೇತ್ರದ ಕೆಂಗೇರಿ ಉಪ ವಿಭಾಗದ ವ್ಯಾಪ್ತಿಗೆ ಬರುವ ವಾರ್ಡ್ ನಂಬರ್ 198 (ಹೆಮ್ಮಿಗೆಪುರ ವಾರ್ಡ್) ರ ವ್ಯಾಪ್ತಿಯಲ್ಲಿ 2024 ರ ಫೆಬ್ರವರಿ ತಿಂಗಳಿನಲ್ಲಿ ಒಟ್ಟು 200 ಸ್ವತ್ತುಗಳ ಖಾತಾಗಳಿಗೆ ಸಂಬಂಧಿಸಿದಂತೆ ನಕಲಿ `ಎ’ ಖಾತಾಗಳನ್ನು ಮಾಡಿಕೊಡುವ ಮೂಲಕ ಸುಮಾರು ಐದು ಕೋಟಿ ರೂಪಾಯಿಗಳಿಗೂ ಹೆಚ್ಚು ಮೊತ್ತವನ್ನು ಪಾಲಿಕೆಗೆ ನಷ್ಟ ಉಂಟು ಮಾಡಿರುವ ಮತ್ತು ಅಪಾರ ಪ್ರಮಾಣದ ಭ್ರಷ್ಟಾಚಾರ ನಡೆಸಿರುವ ಕಾನೂನು ಬಾಹಿರ ಕಾರ್ಯವೊಂದು ನಡೆದಿದೆ‌.

ಬಸವರಾಜ್ ಮಗ್ಗಿ , ಕಂದಾಯ ಅಧಿಕಾರಿ, ಕೆಂಗೇರಿ ವಿಭಾಗ

ಕೆಂಗೇರಿ ವಿಭಾಗದ ಕಂದಾಯ ಅಧಿಕಾರಿ ಡಾ.  ಬಸವರಾಜ ಮಗ್ಗಿ, ಕೆಂಗೇರಿ ಉಪ ವಿಭಾಗದ ಸಹಾಯಕ ಕಂದಾಯ ಅಧಿಕಾರಿ ದೇವರಾಜು, ರಾಜರಾಜೇಶ್ವರಿನಗರ ವಲಯದ ಉಪ ಆಯುಕ್ತ ಅಬ್ದುಲ್ ರಬ್ ಹಾಗೂ ರಾಜರಾಜೇಶ್ವರಿನಗರ ವಲಯದ ಜಂಟಿ ಆಯುಕ್ತ ಅಜಯ್ ವಿ. ಜತೆಗೆ Meru Info Solutions ಎಂಬ ಸಂಸ್ಥೆಯ ಮುಖ್ಯಸ್ಥರು  ಈ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಬಿಜೆಪಿ ಮುಖಂಡ ಎನ್ ಆರ್ ರಮೇಶ್ ಆರೋಪ ಮಾಡಿದ್ದಾರೆ.

ಪಟ್ಟಣಗೆರೆ ಸರ್ವೆ ನಂಬರ್ 10 ರಲ್ಲಿ ಪುಟ್ಟಮ್ಮ W/o ಮುನಿಯಪ್ಪ ರವರ ಹೆಸರಿಗೆ 72 ಖಾತೆಗಳು, UM ಕಾವಲು ಸರ್ವೆ ನಂಬರ್ 98/1 ರಲ್ಲಿ ಗಂಗಾಧರ್ G. S. ರವರ ಹೆಸರಿಗೆ 30 ಖಾತೆಗಳು, ವಾಜರಹಳ್ಳಿ ಗ್ರಾಮದ ಸರ್ವೆ ನಂಬರ್ 09 ರಲ್ಲಿ ಪ್ರದೀಪ್ ಕೃಷ್ಣಪ್ಪ ರವರ ಹೆಸರಿನಲ್ಲಿ 02 ಎಕರೆ 25 ಗುಂಟೆ ಹಾಗೂ ಜಯಮ್ಮ D/o ಕೃಷ್ಣಪ್ಪ ರವರ ಹೆಸರಿಗೆ 01 ಎಕರೆ 23 ½ ಗುಂಟೆ ಮತ್ತು ಹೆಮ್ಮಿಗೆಪುರ ಸರ್ವೆ ನಂಬರ್ 19/P4, 19/P2, 19/P3, 22/1, 22/3, 22/2P1, 22/4 ಇತರೆ ಸರ್ವೆ ನಂಬರ್ ಗಳಲ್ಲಿ 96 ಖಾತೆಗಳನ್ನು ಉಪಕಾರ್ ಎಸ್ಟೇಟ್ ಅಂಡ್ ಪ್ರಾಪರ್ಟೀಸ್ ರವರ ಹೆಸರಿನಲ್ಲಿ ಅನಧಿಕೃತವಾಗಿ ಖಾತೆಗಳನ್ನು ನಮೂದಿಸಿರುತ್ತಾರೆ. ಆದರೆ ಪಟ್ಟಣಗೆರೆ ಸರ್ವೆ ನಂಬರ್ 10 ಕ್ಕೆ ಸಂಬಂಧಿಸಿದಂತೆ, ಈಗಾಗಲೇ ಘನ ಉಚ್ಛ ನ್ಯಾಯಾಲಯದಲ್ಲಿ ದಾವೆ ಇರುತ್ತದೆ ಹಾಗೂ ಈ ಹಿಂದೆ ಪುಟ್ಟಮ್ಮ ರವರ ಹೆಸರಿನಲ್ಲಿ ಯಾವುದೇ ಖಾತೆ ದಾಖಲಾಗಿರುವುದು ಕಂಡುಬಂದಿರುವುದಿಲ್ಲ ಎಂದು ಮಾಹಿತಿ ಹಕ್ಕು ಅಧಿನಿಯಮದಡಿ ಮಾಹಿತಿ ನೀಡಿರುತ್ತಾರೆ. ಹಿಂದಿನ ನಗರ ಸಭೆಯಲ್ಲಿ ಖಾತೆ ದಾಖಲಾಗದೇ ಇದ್ದರೂ ಸಹ ಯಾವುದೇ ಕಡತದ ಸಂಖ್ಯೆ ನಮೂದಿಸದೇ ಹಾಗೂ ವಲಯ ಉಪ ಆಯುಕ್ತರು ಮತ್ತು ಜಂಟಿ ಆಯುಕ್ತರ ಅನುಮೋದನೆ ಪಡೆಯದೇ ಪುಟ್ಟಮ್ಮ ರವರ ಹೆಸರಿಗೆ ಖಾತೆ ದಾಖಲಿಸಿರುತ್ತಾರೆ.

ದಾಖಲೆಗಳೊಂದಿಗೆ ಬಿಜೆಪಿ ಮುಖಂಡ ಎನ್.ಆರ್. ರಮೇಶ್

ವಾಜರಹಳ್ಳಿ ಗ್ರಾಮದ ಸರ್ವೆ ನಂಬರ್ 09 ರಲ್ಲಿ 02 ಎಕರೆ 25 ಗುಂಟೆ ಪ್ರದೀಪ್ ಕೃಷ್ಣಪ್ಪ ರವರ ಹೆಸರಿಗೆ ಹಾಗೂ 01 ಎಕರೆ 23 ½ ಗುಂಟೆ ಜಯಮ್ಮ D/o ಕೃಷ್ಣಪ್ಪ ರವರ ಹೆಸರಿಗೆ ಅಕ್ರಮವಾಗಿ ಖಾತೆ ಮಾಡಿದ್ದು, ಈ ಸಂಬಂಧ ಮಾನ್ಯ ಆಯುಕ್ತರ ಸುತ್ತೋಲೆಯಂತೆ – ಚ. ಮೀ. ಗೆ 250 ರೂ. ಗಳಂತೆ ಅಭಿವೃದ್ಧಿ ಶುಲ್ಕ ಪಾವತಿಸಿಕೊಳ್ಳದೇ ಪಾಲಿಕೆಗೆ ₹. 42,63,500/- ಗಳಷ್ಟು ಆರ್ಥಿಕ ನಷ್ಟವನ್ನು ಕಂದಾಯ ಅಧಿಕಾರಿ ಬಸವರಾಜ ಮಗ್ಗಿ ಹಾಗೂ ಸಹಾಯಕ ಕಂದಾಯ ಅಧಿಕಾರಿ ದೇವರಾಜು ರವರು ಮಾಡಿರುತ್ತಾರೆ

ಹಗರಣ ಬೆಳಕಿಗೆ ಬಂದಿದ್ದು ಹೇಗೆ‌?

– ಖಾಸಗಿ ಬಡಾವಣೆಯ ಬಿಡಿ ನಿವೇಶನಗಳ ಖಾತಾ ಮಾಡಲು ಕಾನೂನು ರೀತ್ಯಾ ಅವಕಾಶವಿರುವುದಿಲ್ಲ.

– ಯಾವುದೇ ಸ್ವತ್ತಿಗೆ ಯಾವುದೇ ಮಾಲೀಕನೂ ಸಹ ಖಾತಾ ಮಾಡಿಕೊಡುವಂತೆ ಅರ್ಜಿಗಳನ್ನೇ ಸಲ್ಲಿಸಿರುವುದಿಲ್ಲ.

– ವಾರ್ಡ್ ನಂಬರ್ 198 ರ ‘A’ Assessment Registerನಲ್ಲಿ ವಿಷಯ ನಿರ್ವಾಹಕ (Case Worker) ಮತ್ತು ವ್ಯವಸ್ಥಾಪಕರು (Manager) ರವರು ತಮ್ಮ ಸಹಿ ಹಾಕಿರುವುದಿಲ್ಲ ಮತ್ತು ಯಾವ ದಿನಾಂಕದಿಂದ ಜಾರಿಗೆ ಬಂದಿದೆ ಎಂಬ ಬಗ್ಗೆ ದಾಖಲೆಗಳೇ ಇರುವುದಿಲ್ಲ.

– ಖಾತೆ ಮಾಡಿಕೊಡುವ ಮೊದಲು ಕಡ್ಡಾಯವಾಗಿ ಇರಬೇಕಾದ ಕಂದಾಯ ಪರಿವೀಕ್ಷಕರ ವರದಿ ಬರೆದಿರುವುದಿಲ್ಲ.

– ಈ 200 ಖಾತಾಗಳಿಗೆ ಸಂಬಂಧಿಸಿದ ಕಡತಗಳಿಗೆ KTR ಸಂಖ್ಯೆಗಳು ನೀಡಲಾಗಿಲ್ಲ ಮತ್ತು MR ಆಗಿರುವುದಿಲ್ಲ.

ಈ ರೀತಿ ಕಾನೂನಿನ ಎಲ್ಲಾ ನಿಯಮಗಳನ್ನೂ ಗಾಳಿಗೆ ತೂರಿ 200 ಕ್ಕೂ ಹೆಚ್ಚು ಸ್ವತ್ತುಗಳಿಗೆ ಕೇವಲ 2024 ರ ಫೆಬ್ರವರಿ ತಿಂಗಳ ಒಂದರಲ್ಲೇ 200 ಕ್ಕೂ ಹೆಚ್ಚು `ಎ’ ಖಾತಾಗಳನ್ನು ಮಾಡಿರುವ ಮತ್ತು ಆ ಮೂಲಕ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಐದಾರು ಕೋಟಿ ನಷ್ಟ ಉಂಟು ಮಾಡಿ ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆಸಿರುವ ಕೆಂಗೇರಿ ವಿಭಾಗದ ಕಂದಾಯ ಅಧಿಕಾರಿ ಡಾ‌ ಬಸವರಾಜ ಮಗ್ಗಿ, ಕೆಂಗೇರಿ ಉಪ ವಿಭಾಗದ ಸಹಾಯಕ ಕಂದಾಯ ಅಧಿಕಾರಿ ದೇವರಾಜು, ರಾಜರಾಜೇಶ್ವರಿನಗರ ವಲಯದ ಉಪ ಆಯುಕ್ತ. ಅಬ್ದುಲ್ ರಬ್, ರಾಜರಾಜೇಶ್ವರಿನಗರ ವಲಯದ ಜಂಟಿ ಆಯುಕ್ತ ಅಜಯ್ ವಿ. ರವರು ಮತ್ತು Meru Info Solutions ಸಂಸ್ಥೆಯ ವಿರುದ್ಧ ಪಾಲಿಕೆಯ ವತಿಯಿಂದಲೇ ಪೋಲೀಸ್ ಠಾಣೆಯಲ್ಲಿ ಪ್ರಕರಣಗಳನ್ನು ದಾಖಲಿಸುವ ಜತೆಗೆ ಕಾನೂನು ಕ್ರಮ ಕೈಗೊಳ್ಳುವಂತೆ ಎನ್ ಆರ್ ರಮೇಶ್ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ರನ್ನ  ಒತ್ತಾಯ ಮಾಡಿದ್ದಲ್ಲದೆ ಲೋಕಾಯುಕ್ತಕ್ಕೂ ದೂರು ದಾಖಲಿಸಿದ್ದಾರೆ.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist