BIGGBOSS KANNADA | ವಿನಯ್ ಅವಾಜ್, ತುಕಾಲಿ ಜವಾಬ್!

ಬೆಂಗಳೂರು, (www.thenewzmirror.com) ;

ವಾರಾಂತ್ಯ ಸಮೀಪ ಬಂದ ಹಾಗೆ ಎಲಿಮಿನೇಷನ್‌ ತೂಗುಗತ್ತಿಯಡಿಯಲ್ಲಿ ಸ್ಪರ್ಧಿಗಳೆಲ್ಲ ನಡುಗುತ್ತಿದ್ದಾರೆ. ಒಬ್ಬರನ್ನೊಬ್ಬರು ಮಣಿಸಲು, ಹಣಿಯಲು ಹೊಸ ಹೊಸ ಕಾರ್ಯತಂತ್ರಗಳನ್ನು ರೂಪಿಸಿಕೊಳ್ಳುತ್ತಿದ್ದಾರೆ. ಇದು ಪರಪಸ್ಪರ ದೂಷಣೆಗೂ, ಜಗಳಕ್ಕೂ ಎಡೆ ಮಾಡಿಕೊಡುತ್ತಿದೆ. ಅದರ ಒಂದು ಝಲಕ್ JioCinema ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ಜಾಹೀರಾಗಿದೆ.

RELATED POSTS

ಮನೆಯ ಕ್ಯಾಪ್ಟನ್‌, ‘ಈ ಟಾಸ್ಕ್‌ ಯಾರುಆಡುತ್ತಿಲ್ಲವೋ ಅವರು ನೆಕ್ಸ್ಟ್ ಟಾಸ್ಕ್ ಆಡಿ’ ಎಂದು ಸಂಗೀತಾ ಹೇಳಿದ್ದಾರೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ತುಕಾಲಿ ಸಂತೋಷ್ ಅವರು, ‘ವೋಟಿಂಗ್ ಅಂತ ಸ್ಟಾರ್ಟ್‌ ಮಾಡಿದ್ರಿ. ಹೋಗ್ತಾ ಹೋಗ್ತಾ ಈಗ ಯಾರಿಗೆ ಅವಕಾಶ ಸಿಗಲ್ವೋ ಅವರು ಆಡಬೇಕು ಅಂತಿರಾ… ಇಲ್ಲಿ ವೋಟಿಂಗ್‌ನಿಂದಾನೇ ಎಲ್ಲಾನೂ ಆಗಬೇಕು’ ಎಂದು ಜೋರು ಧ್ವನಿಯಲ್ಲಿ ಹೇಳಿದ್ದಾರೆ.

ಅವರ ಮಾತಿಗೆ ಸಿಟ್ಟಿಗೆದ್ದಿರುವ ವಿನಯ್ ತುಕಾಲಿ ಜೊತೆಗೆ ಜಗಳಕ್ಕಿಳಿದಿದ್ದಾರೆ. ‘ಏನ್ ಮಾಡ್ತೀಯಾ ನೀನು? ಜೋರಾಗಿ ಮಾತಾಡಿದ ತಕ್ಷಣ ಏನೂ ಕಿತ್ಕೊಳಕ್ಕಾಗಲ್ಲ ಇಲ್ಲಿ. ನೀನು ಫಸ್ಟ್ ಡೇನಿಂದ ಏನು ಮಾಡ್ಕೊಂಡ್ ಬಂದಿದೀಯಾ ಅಂತ ಎಲ್ಲರಿಗೂ ಗೊತ್ತು’ ಎಂದು ಕಿರುಚಾಡಿದ್ದಾರೆ.

ತುಕಾಲಿ ಕೂಡ ಜಗ್ಗದೇ ಅವರಷ್ಟೇ ಎತ್ತರದ ಧ್ವನಿಯಲ್ಲಿ ಉತ್ತರ ಕೊಟ್ಟಿದ್ದಾರೆ. ವರ್ತೂರು ಸಂತೋಷ್ ಅವರು, ‘ಅಂಥ ಪದಗಳನ್ನೆಲ್ಲ ಬಳಸಬೇಡಿ ಇಲ್ಲಿ. ಅವರವರ ಗತ್ತು ಅವರವರಿಗೆ ಗೊತ್ತು’ ಎಂದು ತಮ್ಮದೇ ಸ್ಟೈಲ್‌ನಲ್ಲಿ ಹೇಳಿದ್ದಾರೆ. ಒಟ್ಟಾರೆ ಬಿಗ್‌ಬಾಸ್ ಮನೆಯೊಳಗೆ ಡು ಆರ್ ಡೈ ಹೋರಾಟ ಶುರುವಾಗಿರುವುದಂತೂ ಖಚಿತ. ಇದರಲ್ಲಿ ಯಾರು ಗೆಲ್ತಾರೆ. ಯಾರು ಸೋತು ಗೇಟ್‌ಪಾಸ್ ತೆಗೆದುಕೊಳ್ಳುತ್ತಾರೆ ಎಂಬುದನ್ನು ವಾರಾಂತ್ಯದ ಎಪಿಸೋಡ್‌ನಲ್ಲಿ ಕಾದುನೋಡೇಕು.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist