ಬೆಂಗಳೂರು, (www.thenewzmirror.com) ;
ಎಲೆಕ್ಟ್ರಿಕ್ ವಾಹನಗಳು ಸೇಫ್ ಅಲ್ವಾ ಅನ್ನೋ ಪ್ರಶ್ನೆ ಪದೆ ಪದೇ ಕಾಡುತ್ತಿದೆ. ಯಾಕಂದ್ರೆ ಮಳೆ ಸುರಿಯುತ್ತಿದ್ದರೂ ಚಲಿಸುತ್ತಿದ್ದ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ಭಾರೀ ಮಳೆ ಸುರಿಯುತ್ತಿದ್ದಾಗಲೇ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ನಲ್ಲಿ ಅಗ್ನಿಕಾಣಿಸಿಕೊಂಡಿದೆ. ಅದೃಷ್ಟವಶಾತ್ ಬಸ್ ನಲ್ಲಿದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನಾಗಾವರ ಕಡೆಯಿಂದ ಹೆಬ್ಬಾಳ ಕಡೆಗೆ ಬರುತ್ತಿದ್ದಬಸ್ ಹೆಬ್ಬಾಳ ಸಮೀಪವಿರೋ ಜಲಮಂಡಳಿ ಸರ್ವೀಸ್ ರಸ್ತೆಯಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡಿದೆ.
ತಕ್ಷಣ ಎಚ್ಚತ್ತ ಕಂಡಕ್ಟರ್ ಬಸ್‌ನಿಂದ ಪ್ರಯಾಣಿಕರನ್ನು ಕೆಳಗಿಳಿಸಿದ್ದಾರೆ. ಪ್ರಯಾಣಿಕರು ಕೆಳಗಿಳಿಯುತ್ತಿದ್ದಂತೆ ಬಸ್ ಹೊತ್ತಿ ಉರಿದಿದೆ. ಜೋರು ಮಳೆ ಬರುತ್ತಿದ್ದರಿಂದ ಬಸ್‌ನ ಎಂಜಿನ್‌ಗೆ ನೀರು ಹೋಗಿ ಶಾರ್ಟ್ ಸರ್ಕ್ಯೂಟ್ ಆಗಿರಬಹುದೆಂದು ಶಂಕಿಸಲಾಗಿದೆ.
ಸ್ಥಳಕ್ಕೆ ಅಗ್ನಿಶಾಮಕ ದಳದ ಅಧಿಕಾರಿಗಳು, ಬಿಎಂಟಿಸಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರಾದರೂ ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಪದೆ ಪದೇ ಬಿಎಂಟಿಸಿ ಬಸ್ ನಲ್ಲಿ ಅಗ್ನಿಅನಾಹುತ ಸಂಭವಿಸುತ್ತಿರೋದು ಯಾಕೆ ಹಾಗೂ ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಅಧಿಕಾರಿಗಳು ಯಾಕೆ ಮುಂದಾಗ್ತಿಲ್ಲ ಎನ್ನುವ ಪ್ರಶ್ನೆಯನ್ನ ಸಾರ್ವಜನಿಕರು ಮಾಡುತ್ತಿದ್ದಾರೆ.