Cinema News | ಗೌರವ ಡಾಕ್ಟರೇಟ್ ತಿರಸ್ಕಾರ ಮಾಡಿದ ನಟ ಸುದೀಪ, ಕಾರಣ ಕೇಳಿದ್ರೆ ನೀವೂ ಶಹಬ್ಬಾಸ್ ಅಂತೀರಾ..!

ಬೆಂಗಳೂರು, (www.thenewzmirror.com) ;

ತುಮಕೂರು ವಿಶ್ವವಿದ್ಯಾಲಯ ತನ್ನ 17ನೇ ಘಟಿಕೋತ್ಸವದಲ್ಲಿ ಟ, ನಿರ್ಮಾಪಕ, ನಿರೂಪಕ ಕಿಚ್ಚ ಸುದೀಪ್ ಅವರಿಗೆ ಗೌರವ ಡಾಕ್ಟರೇಟ್ ನೀಡಲು ತೀರ್ಮಾನ ಮಾಡಿತ್ತು. ಆದರೆ ಅದನ್ನ ಸುದೀಪ್ ನಯವಾಗಿಯೇ ತಿರಸ್ಕಾರ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

RELATED POSTS

ಸುಮಾರು 40ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ ಸುದೀಪ್ ಚಿತ್ರರಂಗಕ್ಕೆ ಕೊಡುಗೆ ನೀಡಿದ್ದಾರೆ. ಸಮಾಜಮುಖಿ ಕೆಲಸಗಳಲ್ಲಿ ಕೂಡ ಗುರ್ತಿಸಿಕೊಂಡಿದ್ದಾರೆ. ಇದನ್ನೆಲ್ಲಾ ಪುರಸ್ಕರಿಸಿ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲು ವಿವಿ ನಿರ್ಧರಿಸಿತ್ತು. ವಿವಿ ಸಿಂಡಿಕೇಟ್ ಸಭೆಯಲ್ಲಿ ಚರ್ಚೆ ನಡೆಸಿ ಗೌರವ ಡಾಕ್ಟರೇಟ್ ನೀಡುವ ಬಗ್ಗೆ ಸುದೀಪ್ ಗಮನಕ್ಕೆ ತರಲಾಗಿತ್ತು.

ಆದರೆ ಆದರೆ ವಿವಿ ನಿರ್ಧಾರಕ್ಕೆ ನಟ ಸುದೀಪ್ ಹೃದಯಪೂರ್ವಕ ಧನ್ಯವಾದ ತಿಳಿಸಿದ್ದಾರೆ. ಜೊತೆಗೆ ಇದನ್ನು ವಿನಮ್ರವಾಗಿ ನಿರಾಕರಿಸಿದ್ದಾರೆ. “ಸಮಾಜದಲ್ಲಿ ಸೇವೆ ಸಲ್ಲಿಸಿರುವ ನನಗಿಂತ ಹಿರಿಯರು ಹಲವರು ಇದ್ದಾರೆ. ಅವರಿಗೆ ಈ ಗೌರವ ನೀಡಿ” ಎಂದು ಸುದೀಪ್ ಮನವಿ ಮಾಡಿದ್ದಾರೆ ಎಂದು ವಿವಿ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಮಾಹಿತಿ ನೀಡಿದ್ದಾರೆ.

ಸುದೀಪ್ ಅವರನ್ನು ವಿವಿಧ ಹಂತಗಳಲ್ಲಿ ಸಂಪರ್ಕಿಸಲು ಆಪ್ತ ಸಹಾಯಕರ ಮೂಲಕ ಸಂದೇಶ ತಲುಪಿಸಿದ್ದೇವು. ಆದರೆ ಸುದೀಪ್ ಅವರು ಗೌರವ ಡಾಕ್ಟರೇಟ್ ಸ್ವೀಕಾರ ಮಾಡಲು ಎರಡು ದಿನ ಕಾಲಾವಕಾಶ ಕೋರಿದ್ದರು. ಅಂತಿಮವಾಗಿ ಅವ್ರು ನಿರಾಕರಣೆ ಮಾಡಿದ್ದಾಗಿ ತಿಳಿದು ಬಂದಿದೆ ಎಂದು ಕುಲಪತಿ ಮಾಹಿತಿ ನೀಡಿದರು.

ಯಾರು ಯಾರಿಗೆ ಗೌರವ ಡಾಕ್ಟರೇಟ್..?

ಆಗಸ್ಟ್ 17ರಂದು ತುಮಕೂರು ವಿವಿ ಆವರಣದಲ್ಲಿ ಗೌರವ‌ ಡಾಕ್ಟರೇಟ್ ಪ್ರಧಾನ ನಡೆಯಲಿದೆ. ಈ ಬಾರಿ ತುಮಕೂರು ವಿವಿಯಿಂದ ಮೂವರಿಗೆ ಗೌರವ ಡಾಕ್ಟರೇಟ್ ಘೋಷಣೆ ಮಾಡಲಾಗಿದೆ. ಜಲಕ್ರೀಡಾ ಸಾಹಸಿಗ ಮತ್ತು‌ ಸಾಮಾಜಿಕ ಕಾರ್ಯಕರ್ತ ಸಿ.ಎಸ್. ನಾಗಾನಂದನ ಸ್ವಾಮಿ, ಕೈಗಾರಿಕೋದ್ಯಮಿ ಎಚ್. ಜಿ‌.ಚಂದ್ರಶೇಖರ್, ರಾಜನಹಳ್ಳಿ ವಾಲ್ಮೀಕಿ ಗುರು ಪೀಠದ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿಗೆ ಗೌರವ ಡಾಕ್ಟರೇಟ್ ನೀಡಲಾಗುತ್ತಿದೆ. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಡಾಕ್ಟರೇಟ್​ ಪ್ರಧಾನ ಮಾಡಲಿದ್ದಾರೆ.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist