ಬೆಂಗಳೂರು, (www.thenewzmirror.com) ;
ರಾಷ್ಟ್ರಾದ್ಯಂತ 78 ನೇ ಸ್ವಾತಂತ್ರ್ಯ ದಿನಾಚರಣೆಯನ್ನ ಅದ್ದೂರಿಯಾಗಿ ಆಚರಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಮಾಣಿಕ್ ಷಾ ಪೆರೇಡ್ ಮೈದಾನದಲ್ಲಿ ಹಾಗೆನೇ ಪ್ರಧಾನಿ ಮೋದಿ ಕೆಂಪುಕೋಟೆ ಮೇಲೆ ಧ್ವಜಾರೋಹಣ ಮಾಡಿದ್ದಾರೆ. ಅದೇ ರೀತಿ ಆಯಾ ಇಲಾಖೆಯ ಮುಖ್ಯಸ್ಥರು ತಮ್ಮ ತಮ್ಮ ಅಧೀನದಲ್ಲಿರೋ ಕಚೇರಿಗಳಲ್ಲಿ ತಿರಂಗ ಹಾರಿಸಿದ್ದಾರೆ.
ಹೀಗೆ ತಿರಂಗಾ ಹಾರಿಸೋ ಭರದಲ್ಲಿ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿರೋ ಘಟನೆಗಳು ತಡವಾಗಿ ಬೆಳಕಿಗೆ ಬಂದಿದೆ. ಹೀಗೆ ಶೂ ಧರಿಸಿ ರಾಷ್ಟ್ರಧ್ವಜ ಹಾರಿಸಿರೋ ಬಿಎಂಟಿಸಿ ಹವಾಲ್ದಾರ್ ವಿರುದ್ಧ ಆಕ್ರೋಶ ವ್ಯಕ್ತ ಅಗುತ್ತಿದೆ.
ಹೌದು, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(BMTC)ಯ ಘಟಕ 27 ಜಿಗಣಿಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅದರಂತೆ ಆ ಡಿಪೋದಲ್ಲಿ ಧ್ವಜ ಅನಾವರಣ ಮಾಡುವ ಸಂದರ್ಭದಲ್ಲಿ ತ್ರಿವರ್ಣ ಧ್ವಜಕ್ಕೆ ಹಾಗೂ ಧ್ವಜದ ಕಟ್ಟಿಯ ಮೇಲೆ ನಿಂತು ಶೂಗಳನ್ನು ಧರಿಸಿಯೇ ಧ್ವಜ ಹಿಡಿದು ಧ್ವಜಾರೋಹಣ ಮಾಡಿದ್ದಾರೆ ಡಿಪೋದ ಭದ್ರತಾ ಹವಾಲ್ದಾರ್ ಪುಟ್ಟರಾಜು.
ಪುಟ್ಟರಾಜು ಜತೆ ಇತರ ಸಿಬ್ಬಂದಿ ಇದ್ದರಾದರೂ ಅವರು ಶೂ ಬಿಜ್ಜಿಟ್ಟು ಧ್ವಜಾರೋಹಣ ನೆರವೇರಿಸಿದ್ದಾರೆ. ಆದರೆ ಪುಟ್ಟರಾಜು ಮಾತ್ರ ಶೂ ಧರಿಸಿ ಧ್ವಜಕಟ್ಟೆ ಹತ್ತಿದ್ದಾರೆ. ಅದರ ಪಕ್ಕದಲ್ಲೇ ಮಹಾತ್ಮ ಗಾಂಧಿ ಫೋಟೋ ಕೂಡ ಇತ್ತು. ಹೀಗಿದ್ದರೂ ಶೂ ಧರಿಸಿ ದ್ವಜಾರೋಹಣ ಮಾಡಿ ಮುಗಿಸಿದ್ದಾರೆ.
ಪುಟ್ಟರಾಜು ನಡೆಗೆ ಇದೀಗ ಎಲ್ಲೆಡೆ ವಿರೋಧ ವ್ಯಕ್ತವಾಗುತ್ತಿದೆ. ಸಂಸ್ಥೆಯ ಗೌರವ-ಘನತೆಗೆ ಚ್ಯುತಿ ಬರುವಂತೆ ಮಾಡಿದ್ದಲ್ಲದೆ ತ್ರಿವರ್ಣ ಧ್ವಜಕ್ಕೆ ಅಗೌರವ ತೋರಿರುವ ಅವರನ್ನ ಕೂಡಲೇ ಅಮಾನತು ಮಾಡುವಂತೆ ಆಗ್ರಹ ಕೇಳಿ ಬರುತ್ತಿದೆ. ಹಾಗೆನೇ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆಯೂ ಕೂಗು ಹೆಚ್ಚಾಗುತ್ತಿದೆ.
ಕೆಲ ಸಂಘಟನೆಗಳಿಂದಲೂ ಅಸಮಧಾನ..!
ಶೂ ಧರಿಸಿ ಧ್ವಜಾರೋಹಣ ಮಾಡಿರೋ ಭದ್ರತಾ ಹವಾಲ್ದಾರ್ ಪುಟ್ಟರಾಜು ನಡೆಗೆ ಕೆಲ ದಲಿತ ಸಂಘಟನೆಗಳು ಅಸಮಧಾನ ಹೊರಹಾಕುತ್ತಿದ್ದಾರೆ. ಪದವಿ ಇದೆ ಅಂದಾಕ್ಷಣ ಮನಸೋ ಇಚ್ಛೆ ನಡೆದುಕೊಳ್ತಿರೋದು ಸರಿಯಲ್ಲ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳದಳುವಂತೆಯೂ ಆಗ್ರಹಿಸಿದ್ದಾರೆ.