ಬೆಂಗಳೂರು, (www.thenewzmirror.com) ;
ಬಿಎಂಟಿಸಿ ನಿರ್ವಾಹಕರ ಹುದ್ದೆ ಕುರಿತಂತೆ ಅರ್ಹತಾ ಪಟ್ಟಿ ಪ್ರಕಟ ಮಾಡಿದೆ. ಕಲ್ಯಾಣ-ಕರ್ನಾಟಕ (371-ಜೆ) ಮೀಸಲಾತಿಯ ಸ್ಥಳೀಯ ವೃಂದದ ನಿರ್ವಾಹಕ ಹುದ್ದೆಗೆ ಅರ್ಜಿ ಸಲ್ಲಿಸಿದ್ದ ಅಭ್ಯರ್ಥಿಗಳು ಜುಲೈ ತಿಂಗಳಂದು ಪರೀಕ್ಷೆ ಬರೆದಿದ್ದರು. ಅರ್ಹತಾ ಪಟ್ಟಿಯಲ್ಲಿ ಸಾಮಾನ್ಯ ಸಾಮರ್ಥ್ಯ ಪರೀಕ್ಷೆಯಲ್ಲಿ ಗಳಿಸಿದ ಒಟ್ಟು ಅಂಕಗಳ ಶೇಕಡ 75ರಷ್ಟು ಮತ್ತು ಹುದ್ದೆಗೆ ನಿಗಧಿಪಡಿಸಲಾದ ಶೈಕ್ಷಣಿಕ ವಿದ್ಯಾರ್ಹತೆಯಲ್ಲಿ ಗಳಿಸಿದ ಒಟ್ಟು ಅಂಕಗಳ ಶೇಕಡ 25ರಷ್ಟು ಅಂಕಗಳನ್ನು ಸೇರಿಸಿ ಬಂದ ಒಟ್ಟು ಶೇಕಡ ಅಂಕಗಳ ಆಧಾರದ ಮೇಲೆ ಮತ್ತು ನೇರನೇಮಕಾತಿ ಸಂಬಂಧ ಜಾರಿಯಲ್ಲಿರುವ ಸರ್ಕಾರದ ಮೀಸಲಾತಿ ನಿಯಮಾನುಸಾರ ಮೂಲದಾಖಲಾತಿಗಳ ಮತ್ತು ದೇಹದಾರ್ಢ್ಯತೆ ಪರಿಶೀಲನೆಗಾಗಿ 1:5ರ ಅನುಪಾತದಲ್ಲಿ ಅರ್ಹತಾ ಪಟ್ಟಿಯನ್ನು ಪ್ರಕಟಿಸಲಾಗಿದೆ.
371-ಜೆ ಮೀಸಲಾತಿಯ ನಿರ್ವಾಹಕ ಹುದ್ದೆಯ ಅರ್ಹತಾ ಪಟ್ಟಿಯಲ್ಲಿ ಸೇರ್ಪಡೆಗೊಂಡಿರುವ ಮೀಸಲಾತಿವಾರು ಕೊನೆಯ ಅಭ್ಯರ್ಥಿಯ ಶೇಕಡವಾರು (Cut-Off) ಅಂಕಗಳು ಈ ಕೆಳಕಂಡಂತಿದೆ.
ಮೀಸಲಾತಿ ಶೇಕಡವಾರು ಸಾಮಾನ್ಯ ಮಹಿಳಾ ಮೀಸಲು ಗ್ರಾಮೀಣ ಮೀಸಲು ಕನ್ನಡ ಮಾಧ್ಯಮ ಯೋಜನಾ ನಿರಾಶ್ರಿತರು ಮಾಜಿ ಸೈನಿಕರು
ಪ.ಜಾ ಶೇಕಡ 46.33 – 47.45 46.80 34.96 –
ಹುಟ್ಟಿದ ದಿನಾಂಕ 01.06.1989 – 20.12.1997 01.06.2001 05.10.2000 –
ಪ.ಪಂ ಶೇಕಡ 48.07 – 51.02 50.09 – –
ಹುಟ್ಟಿದ ದಿನಾಂಕ 22.03.1998 – 10.04.2001 01.01.1989 – –
ಪ್ರ-1 ಶೇಕಡ 49.32 – 52.57 – – –
ಹುಟ್ಟಿದ ದಿನಾಂಕ 05.09.2000 – 03.06.1998 – – –
2ಎ ಶೇಕಡ 49.43 – 50.58 50.19 48.47 –
ಹುಟ್ಟಿದ ದಿನಾಂಕ 03.08.1999 – 05.06.1993 05.03.1998 08.06.1996 –
2ಬಿ ಶೇಕಡ 40.18 – 44.20 – – –
ಹುಟ್ಟಿದ ದಿನಾಂಕ 05.03.1994 – 10.01.1997 – – –
3ಎ (ಹಿಂಬಾಕಿ) ಶೇಕಡ 36.86 – 32.95 – – –
ಹುಟ್ಟಿದ ದಿನಾಂಕ 15.05.1995 – 02.06.1998 – – –
3ಬಿ ಶೇಕಡ 49.96 – 51.03 – – –
ಹುಟ್ಟಿದ ದಿನಾಂಕ 01.06.1989 – 01.06.1997 – – –
ಸಾಮಾನ್ಯ ವರ್ಗ ಶೇಕಡ 54.26 35.19 57.88 57.06 50.03 64.17
ಹುಟ್ಟಿದ ದಿನಾಂಕ 08.06.1988 31.05.1997 03.03.1997 06.10.1998 01.07.1990 22.02.1995
1:5 ಅರ್ಹತಾ ಪಟ್ಟಿಯಲ್ಲಿ ಸೇರ್ಪಡೆಗೊಂಡಿರುವ ಅಭ್ಯರ್ಥಿಗಳ ವಿವರಗಳನ್ನು ಸಂಸ್ಥೆಯ ವೆಬ್‌ಸೈಟ್ www.mybmtc.karnataka.gov.in ರಲ್ಲಿ ಪ್ರಕಟಿಸಲಾಗಿದೆ. 1:5 ರ ಅರ್ಹತಾ ಪಟ್ಟಿಯಲ್ಲಿ ಸೇರ್ಪಡೆಗೊಂಡಿರುವ ಅಭ್ಯರ್ಥಿಗಳು ಅರ್ಜಿ ಸಂಖ್ಯೆ ಮತ್ತು ಹುಟ್ಟಿದ ದಿನಾಂಕ ಅಥವಾ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಲಾಗಿನ್ ಆಗಿ, ಕರೆಪತ್ರವನ್ನು ಸಂಸ್ಥೆಯ ವೆಬ್‌ಸೈಟ್ www.mybmtc.karnataka.gov.in ನಲ್ಲಿ ಡೌನ್ಲೋಡ್ ಮಾಡಿಕೊಂಡು ಮುದ್ರಿಸಿಕೊಳ್ಳಬಹುದಾಗಿದೆ ಹಾಗೂ ಮೂಲ ದಾಖಲೆ ಮತ್ತು ದೇಹದಾರ್ಢ್ಯತೆ ಪರಿಶೀಲನೆಗೆ ನಿಗಧಿಪಡಿಸಿದ ಸ್ಥಳ, ದಿನಾಂಕ ಮತ್ತು ಸಮಯಕ್ಕೆ ಸರಿಯಾಗಿ ಹಾಜರಾಗತಕ್ಕದ್ದು. ಈ ಸಂಬಂಧ ಯಾವುದೇ ಪತ್ರ ವ್ಯವಹಾರಗಳನ್ನು ಮಾಡಲಾಗುವುದಿಲ್ಲ ಎಂದು ನಿಗಮ ತಿಳಿಸಿದೆ.
1:5ರ ಅರ್ಹತಾ ಪಟ್ಟಿಯಲ್ಲಿ ಗುಂಪುವಾರು ಹಾಗೂ ಶೇಕಡವಾರು ಅಂಕಗಳಿಗಿಂತ ಹೆಚ್ಚಿನ ಅಂಕಗಳಿಸಿದಾಗ್ಯೂ ಮೂಲ ದಾಖಲಾತಿಗಳ ಪರಿಶೀಲನೆಗೆ ಸದರಿ ಪಟ್ಟಿಯಲ್ಲಿ ಸೇರ್ಪಡೆಗೊಳ್ಳದ ಅಭ್ಯರ್ಥಿಗಳು ಸಂಬಂಧಪಟ್ಟ ಮೂಲದಾಖಲಾತಿಗಳೊಂದಿಗೆ ಅಧ್ಯಕ್ಷರು, ಆಯ್ಕೆ ಸಮಿತಿ, ಬೆ.ಮ.ಸಾ.ಸಂಸ್ಥೆ, ಕೇಂದ್ರ ಕಛೇರಿ, ಶಾಂತಿನಗರ ಬೆಂಗಳೂರು-560027 ಇಲ್ಲಿ ದಿನಾಂಕ:03/09/2024ರೊಳಗಾಗಿ ಮೂಲ ದಾಖಲಾತಿಗಳೊಂದಿಗೆ ಖುದ್ದಾಗಿ ಹಾಜರಾಗಿ ಲಿಖಿತ ಆಕ್ಷೇಪಣೆ ಸಲ್ಲಿಸತಕ್ಕದ್ದು. ಸೆಪ್ಟೆಂಬರ್ 03 ರ ನಂತರ ಬಂದ ಆಕ್ಷೇಪಣೆಗಳನ್ನ ಪರಿಗಣಿಸಲಾಗುವುದಿಲ್ಲ ಅಂತ ನಿಗಮ ಮಾಹಿತಿ ನೀಡಿದೆ.