ಬೆಂಗಳೂರು, (www.thenewzmirror.com) ;
ಈ ಸ್ಟೋರಿ ಅಚ್ಚರಿ ಅನಿಸಿದರೂ ನೀವು ನಂಬಲೇಬೇಕು.., ಯಾಕಂದ್ರೆ 70 ಕಿಲೋ ಮೀಟರ್ ಪ್ರಯಾಣಕ್ಕೆ 20 ರೂ ಚಾರ್ಜ್. ಆದರೆ 14 ಗಂಟೆ ಪಾರ್ಕಿಂಗ್ ಗೆ ಬರೋಬ್ಬರಿ 60 ರೂ ಕೋಡ್ಬೇಕು. ಇದು ಬೆಂಗಳೂರಿನಲ್ಲಿ ಪಾರ್ಕಿಂಗ್ ಮಾಫಿಯಾಗೆ ಹಿಡಿದ ಕನ್ನಡಿ.
ಪ್ರಯಾಣಿಕರೊಬ್ಬರು ಕೆ.ಆರ್ ಪುರಂ ನಿಂದ ಬಂಗಾರಪೇಟೆಗೆ ಹೋಗಬೇಕಿತ್ತು. ಟ್ರೈನ್ ನಲ್ಲಿ ಹೋಗೋಣ ಅಂತ ಕೆ.ಆರ್. ಪುರಂ ರೈಲ್ವೆ ನಿಲ್ದಾಣದ ಪಾರ್ಕಿಂಗ್ ನಲ್ಲಿ ದ್ವಿಚಕ್ರ ವಾಹನವನ್ನ ಪಾರ್ಕ್ ಮಾಡಿದ್ರು. ಬೆಳಗ್ಗೆ ಪಾರ್ಕ್ ಮಾಡಿ ಟ್ರೈನ್ ನಲ್ಲಿ ಬಂಗಾರಪೇಟೆಗೆ ತೆರಳಿ ಅಲ್ಲಿ ತಮ್ಮ ಕೆಲ್ಸ ಮುಗಿಸಿಕೊಂಡು ವಾಪಾಸ್ ಟ್ರೈನ್ ನಲ್ಲಿ ಬಂಗಾರಪೇಟೆಯಿಂದ ಕೆ.ಆರ್. ಪುರಂಗೆ ವಾಪಾಸ್ ಬಂದ್ರು. ಆ ಪ್ರಯಾಣಿಕರಿಗೆ ಕೆ.ಆರ್. ಪುರಂ ಟು ಬಂಗಾರಪೇಟೆ ಹಾಗೆನೇ ಬಂಗಾರಪೇಟೆ ಟು ಕೆ.ಆರ್. ಪುರಂ ಗೆ ಒಟ್ಟು ಟ್ರೈನ್ ಚಾರ್ಜ್ ರೂ ಮಾತ್ರ ಆಗಿತ್ತು.
ಸುಮಾರು 14 ಗಂಟೆಗಳ ನಂತರ ಕೆ.ಆರ್. ಪುರಂ ರೈಲ್ವೆ ನಿಲ್ದಾಣದ ಪಾರ್ಕಿಂಗ್ ಜಾಗಕ್ಕೆ ಬಂದು ರಶೀದಿ ಕೊಟ್ಟು ಬೈಕ್ ಹತ್ತೋಕೆ ಮುಂದಾದ್ರು. ಈ ವೇಳೆ ಆ ಪ್ರಯಾಣಿಕನಿಗೆ ಶಾಕ್ ಕಾದಿತ್ತು. ಯಾಕಂದ್ರೆ 14 ಗಂಟೆ ಪಾರ್ಕಿಂಗ್ ಗೆ ಪಾರ್ಕಿಂಗ್ ಸಿಬ್ಬಂದಿ ಕೊಟ್ಟ ಬಿಲ್ ಬರೋಬ್ಬರಿ 60 ರೂ.
ಮೂಗಿಗಿಂತ ಮೂಗುತಿ ಭಾರ ಆಯ್ತು ಅಂತಾರಲ್ಲ ಹಾಗೆನೇ ರೈಲ್ವೆ ಪ್ರಯಾಣಕ್ಕಿಂತ ರೈಲ್ವೆ ನಿಲ್ದಾಣದಲ್ಲಿನ ಪಾರ್ಕಿಂಗ್ ಚಾರ್ಜ್ ಸಿಕ್ಆಪಟ್ಟೆ ಹೆಚ್ಚಾಗಿದೆ ಅಂತ ಅಳಲನ್ನ ತೋಡಿಕೊಂಡಿದ್ದಾರೆ ಆ ಪ್ರಯಾಣಿಕ. ತನಗಾದ ಅನ್ಯಾಯ ಹಾಗೂ ನೋವನ್ನ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಪಡಿಸಿದ್ದಾರೆ. ಆ ಪೋಸ್ಟ್ ನಲ್ಲಿ
ಕೆಆರ್ ಪುರಂ ರೈಲ್ವೆ ಸ್ಟೇಷನ್ನಲ್ಲಿ ದ್ವಿಚಕ್ರ ವಾಹನ ಪಾರ್ಕಿಂಗ್ ಕರ್ಮಕಾಂಡ 14 ಗಂಟೆಗಳಿಗೆ 60 ರೂಪಾಯಿ ಪಾರ್ಕಿಂಗ್ ತೆಗೆದುಕೊಳ್ಳುತ್ತಾರೆ ಕೆಆರ್ ಪುರಂ ಇಂದ ಬಂಗಾರಪೇಟೆಗೆ ಟ್ರೈನ್ ನಲ್ಲಿ ಹೋದರೆ 20 ರೂಪಾಯಿ ಬರಲು ರೂ.20 ತೆಗೆದುಕೊಳ್ಳುತ್ತಾರೆ. ಹೋಗಿಬರಲು ರೂ. 40 ಖರ್ಚಾಗುತ್ತದೆ ದಿನವೊಂದಕ್ಕೆ ಪಾರ್ಕಿಂಗ್ 60 ರೂಪಾಯಿ ಖರ್ಚಾಗುತ್ತದೆ ಇದು ತುಂಬಾ ಅನ್ಯಾಯವಲ್ಲವೇ 14 ಗಂಟೆಗಳ ಕಾಲಕ್ಕೆ ರೂ. 60 ತೆಗೆದುಕೊಂಡಿದ್ದಾರೆ ಎಷ್ಟು ಹೇಳಿದರು ಕೇಳಲಿಲ್ಲ ಇದನ್ನು ಆದಷ್ಟು ಬೇಗ ಸರಿ ಮಾಡಿ ಅಂತ ಕೇಂದ್ರ ರೈಲ್ವೆ ಸಚಿವರಿಗೆ, ಪ್ರಧಾನ ಮಂತ್ರಿಗಳಿಗೆ, ಹಣಕಾಸು ಸಚಿವರಿಗೆ, ಮುಖ್ಯಮಂತ್ರಿಗೆ, ರೈಲ್ವೆ ಅಧಿಕಾರಿಗಳಿಗೆ, ರಕ್ಷಣಾ ಸಚಿವರಿಗೆ, ಕೇಂದ್ರದಲ್ಲಿ ಮಂತ್ರಿಯಾಗಿರುವ ರಾಜ್ಯದ ಸಂಸದರಿಗೆ ಟ್ಯಾಗ್ ಮಾಡಿ ತಮ್ಮ ಅಳಲನ್ನ ತೋಡಿಕೊಂಡಿದ್ದಾರೆ.
ಆದಷ್ಟು ಬೇಗ ಈ ಸಮಸ್ಯೆ ಬಗೆಹರಿಸಿ ಅಂತಾನೂ ಆ ಪೋಸ್ಟ್ ನಲ್ಲಿ ಟ್ಯಾಗ್ ಮಾಡಿದ್ದಾರೆ.