Board Chairmans List | 44 ನಿಮಗಳಿಗೆ ಅಧ್ಯಕ್ಣರ ನೇಮಕ, ಡಿಕೆಶಿ, ಸಿದ್ದರಾಮಯ್ಯ ಆಪ್ತರ ಯಾರ್ಯಾರಿಗೆ ಮಣೆ.?

ಬೆಂಗಳೂರು, (www.thenewzmirror.com) :

ಹಲವು ತಿಂಗಳಿನಿಂದ ಖಾಲಿಯಾಗಿದ್ದ ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮ ಮಾಡಿ ಸರ್ಕಾರ ಆದೇಶ ಮಾಡಿದೆ. ಆ ಮೂಲಕ ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರಿಗೆ ಸಿಹಿ ಸುದ್ದಿ ಕೊಟ್ಟಿದೆ.

RELATED POSTS

ಕಳೆದ ತಿಂಗಳು ಶಾಸಕರನ್ನು ನಿಗಮ ಮಂಡಳಿಗೆ ನೇಮಕ ಮಾಡಿ ಆದೇಶ ಹೊರಡಿಸಿದ್ದ ಕರ್ನಾಟಕ ಕಾಂಗ್ರೆಸ್ ಸರ್ಕಾರ, ಇದೀಗ 44 ಮಂದಿ ಕಾರ್ಯಕರ್ತರನ್ನು ನಿಗಮ ಮಂಡಳಿಗೆ ಅಧ್ಯಕ್ಷರನ್ನಾಗಿ ನೇಮಕ ಮಾಡಿದೆ.

ನಿಗಮ ಮಂಡಳಿಗೆ 44 ಜನರನ್ನು ಸಿಎಂ ಸಿದ್ದರಾಮಯ್ಯ ನೇಮಿಸಿದ್ದು, ಅದರಲ್ಲಿ ಚಲನಚಿತ್ರ ಅಕಾಡೆಮಿಯೂ ಸೇರಿದೆ. ಸಿಎಂ ಸಿದ್ದರಾಮಯ್ಯನವರಿಗೆ ಆಪ್ತರಾಗಿರುವ ನಟ ಹಾಗೂ ಸಂಗೀತ ನಿರ್ದೇಶಕ ಹಾಸ್ಯ ಕೋಕಿಲ ಅವರನ್ನು ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ.

ಯಾರಿಗೆ ಯಾವ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ?

• ಮಮತಾ ಗಟ್ಟಿ – ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷೆ
• ಜಿ.ಪಲ್ಲವಿ – ಸಾಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿ ಅಧ್ಯಕ್ಷೆ
• ಹೆಚ್.ಸಿ.ಸುಧೀಂದ್ರ – ತೆಂಗು ಅಭಿವೃದ್ಧಿ ಮಂಡಳಿ ಅಧ್ಯಕ್ಷ
• ಕಾಂತಾ ನಾಯ್ಕ – ಕೌಶಲ್ಯಾಭಿವೃದ್ಧಿ ನಿಗಮ ಅಧ್ಯಕ್ಷೆ
• ಮುಂಡರಗಿ ನಾಗರಾಜು – ಬಾಬು ಜಗಜೀವನ್​ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ
• ವಿನೋದ್ ಕೆ. ಅಸೂಟಿ – ಕರ್ನಾಟಕ ಕ್ರೀಡಾ ಪ್ರಾಧಿಕಾರ ಉಪಾಧ್ಯಕ್ಷ
• ಬಿ.ಹೆಚ್​.ಹರೀಶ್ – ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ನಿಗಮ ಅಧ್ಯಕ್ಷ
• ಡಾ.ಅಂಶುಮಂತ್​ – ಭದ್ರಾ ಕಾಡಾ ಅಧ್ಯಕ್ಷ
• ಜೆ.ಎಸ್​.ಆಂಜನೇಯಲು – ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ
• ಡಾ.ಬಿ.ಯೋಗೇಶ್ ಬಾಬು – ಕರ್ನಾಟಕ ದ್ರಾಕ್ಷಾರಸ ಮಂಡಳಿ ಅಧ್ಯಕ್ಷ
• ಮರೀಗೌಡ ಯಾದಗಿರಿ – ರಾಜ್ಯ ತೊಗರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ
• ದೇವೇಂದ್ರಪ್ಪ ವರ್ತೂರು – ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ಅಧ್ಯಕ್ಷ
• ರಾಜಶೇಖರ್ ರಾಮಸ್ವರಂ – ಕರ್ನಾಟಕ ಜೈವಿಕ ಇಂಧನ ಮಂಡಳಿ ಅಧ್ಯಕ್ಷ
• ಕೆ.ಮರೀಗೌಡ – ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ
• ಎಸ್​.ಮನೋಹರ್ – ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್
• ಅಯೂಬ್ ಖಾನ್ – ಬಣ್ಣ ಮತ್ತು ಅರಗು ಕಾರ್ಖಾನೆ ಅಧ್ಯಕ್ಷ
• ಜಯಸಿಂಹ – ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ
• ವಿಜಯ್ ಕೆ.ಮುಳುಗುಂದ್ – ಉಪನಗರ ವರ್ತುಲ ರಸ್ತೆ ಯೋಜನಾ ಪ್ರಾಧಿಕಾರ
• ಮರಿಸ್ವಾಮಿ ಚಾಮರಾಜನಗರ – ಕಾಡಾ ಅಧ್ಯಕ್ಷ
• ಸದಾಶಿವ ಉಲ್ಲಾಳ್ – ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ
• ರಘುನಂದನ್ ರಾಮಣ್ಣ – ಬಿಎಂಐಸಿಎಪಿಎ ಅಧ್ಯಕ್ಷ
• ಬಸವರಾಜ್ ಜಾಬಶೆಟ್ಟಿ – ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ
• ಸಾಧು ಕೋಕಿಲ – ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist