ಬೆಂಗಳೂರು, (www.thenewzmirror.com) :
ಕೋವಿಡ್ ಸಮಯದಲ್ಲಿ 60 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಆಸ್ಪತ್ರೆಯನ್ನ ಕೇರಳ ಸರ್ಕಾರ ಕೆಡವಲು ತೀರ್ಮಾನಿಸಿದೆ. ಟಾಟಾ ಕಂಪನಿ ನಿರ್ಮಿಸಿದ ಆಸ್ಪತ್ರೆ ಇದಾಗಿದ್ದು, ಕೋವಿಡ್ ಸಮಯದಲ್ಲಿ ಇದನ್ನ ಕೋವಿಡ್ ಕೇರ್ ಗಾಗಿ ನಿರ್ಮಾಣ ಮಾಡಲಾಗಿತ್ತು.
2020 ರಲ್ಲಿ ಕಾಸರಗೋಡಿನ ಚಟ್ಟಂಚಾಲ್‌ನಲ್ಲಿ 60 ಕೋಟಿ ವೆಚ್ಚದಲ್ಲಿ ಕೋವಿಡ್ ಆಸ್ಪತ್ರೆಯನ್ನು ಟಾಟಾ ಕಂಪನಿಯ ಸಿಎಸ್‌ಆರ್ ನಿಧಿಯಲ್ಲಿ 4.12 ಎಕರೆ ಭೂಮಿಯಲ್ಲಿ 81,000 ಚದರ ಅಡಿ ಪ್ರದೇಶದಲ್ಲಿ ನಿರ್ಮಿಸಿತ್ತು. ಅಕ್ಟೋಬರ್ 2020 ರಲ್ಲಿ ಕಾರ್ಯನಿರ್ವಹಿಸಲು ಪ್ರಾರಂಭಿಸಿದ ಆಸ್ಪತ್ರೆಯಲ್ಲಿ ಇಲ್ಲಿಯವರೆಗೆ 4987 ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ.
30 ವರ್ಷಗಳ ಬಾಳಿನ ಭರವಸೆಯೊಂದಿಗೆ ನಿರ್ಮಿಸಿದ ಆಸ್ಪತ್ರೆ ಈಗ ಸರ್ಕಾರ ನೆಲಸಮ ಮಾಡಲು ತೀರ್ಮಾನ ಮಾಡಿದೆ. ಈಗಿರುವ ಆಸ್ಪತ್ರೆ ಕೆಡವಿ ಆ ಜಾಗದಲ್ಲಿ 23 ಕೋಟಿ ರೂ.ವೆಚ್ಚದಲ್ಲಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಲು ನಿರ್ಧರಿಸಲಾಗಿದೆ. ಕೋವಿಡ್ ಸಮಯದಲ್ಲಿ ಮಂಜೂರು ಮಾಡಿದ್ದ188 ಹುದ್ದೆಗಳನ್ನ ಇದೇ ಆಸ್ಪತ್ರೆಗೆ ವರ್ಗಾವಣೆ ಮಾಡಲಾಗಿತ್ತು.
ಇಲ್ಲಿನ ಕಟ್ಟಡದ ಶಿಥಿಲಾವಸ್ಥಯಲ್ಲಿದೆ ಇಲ್ಲಿನ ಬಿಸಿ ವಾತಾವರಣಕ್ಕೆ ಪ್ರೀ ಫ್ಯಾಬ್ರಿಕೇಷನ್ ಶಿಥಿಲವಾಗುತ್ತಿದೆ. ಹಾಗನೇ ಪ್ಲೈವುಡ್‌ನಿಂದ ಮಾಡಿದ ನೆಲಹಾಸು ಹಾನಿಗೊಳಗಾಗುವ ಸ್ಥಿತಿಯಲ್ಲಿದೆ. ಇದರ ಜತೆಗೆ ಅಗ್ನಿ ಅನಾಹುತಕ್ಕೆ ಎಡೆ ಮಾಡಿಕೊಡುವುದರ ಜತೆಗೆ ಕೋವಿಡ್ ಸಮಯದಲ್ಲಿ ಅಳವಡಿಸಲಾಗಿದ್ದ ವೆಂಟಿಲೇಟರ್ ಸೇರಿದಂತೆ ಇತರ ಉಪಕರಣಗಳು ಬಳಕೆಯಾಗದೆ ಕೊಳೆಯುತ್ತಿವೆ ಎಂದು ಸರ್ಕಾರ ಮಾಹಿತಿ ನೀಡಿದೆ.
ಟಾಟಾ ಸಂಸ್ಥೆ ನಿರ್ಮಿಸಿದ್ದರೂ ನಿರ್ವಹಣೆಯನ್ನು ಜಿಲ್ಲಾಡಳಿತವೇ ಮಾಡುತ್ತಿತ್ತು. ಸದ್ಯದ ಸ್ಥಿತಿಯಲ್ಲಿ ಸ್ವಲ್ಪ ಮಳೆ ಬಂದರೂ ಸೀಲಿಂಗ್ ಮತ್ತು ಕಿಟಕಿಗಳ ಮೂಲಕ ನೀರು ಆಸ್ಪತ್ರೆ ಸೇರುತ್ತದೆ.
ಆಗ ಅಧಿಕಾರಿಗಳು ಕಟ್ಟಡವನ್ನು 30 ವರ್ಷಗಳವರೆಗೆ ಬಳಸಬಹುದು ಎಂದು ಹೇಳಲಾಗಿತ್ತಾದರೂ ಜಿಲ್ಲಾಡಳಿತ ಸಮರ್ಪಕ ನಿರ್ವಹಣೆ ಮಾಡದ ಹಿನ್ನಲೆಯಲ್ಲಿ ಇದೀಗ ನೆಲಸಮ ಮಾಡಲು ತೀರ್ಮಾನಿಸಲಾಗಿದೆ.