ಬೆಂಗಳೂರು, (www.thenewzmirror.com) ;
ಸಿಎಂ ವಿರುದ್ಧ ಪ್ರಾಸಿಕ್ಯೂಷನ್ಗೆ ರಾಜ್ಯಪಾಲರು ಅನುಮತಿ ನೀಡಿದ್ದಕ್ಕೆ ಕೋರ್ಟ್ ನಿಂದ
ತಡೆಯಾಜ್ಞೆ ಇದ್ದರೂ ಸಿಎಂ ರಾಜೀನಾಮೆ ಬಿಜೆಪಿ ಕೇಳುತ್ತಿದೆ. ಬಿಜೆಪಿ ನಾಯಕರ ನಡೆಗೆ ಅಸಮಧಾನ ಹೊರಹಾಕಿರೋ ಕಾಂಗ್ರೆಸ್ ಮುಖಂಡ ಬಿ.ಕೆ. ಹರಿಪ್ರಸಾದ್, ಈ ಹಿಂದೆ ಬಿಜೆಪಿ ಆಪರೇಷನ್ ಕಮಲ ಮೂಲಕ ಸರ್ಕಾರ ಕೆಡವುತ್ತಿತ್ತು. ಆದರೆ, ಈಗ ವಾಮಮಾರ್ಗದ ಮೂಲಕ ಸರ್ಕಾರ ಅಸ್ಥಿರಗೊಳಿಸಲು ಯತ್ನಿಸುತ್ತಿದೆ. ಎಂದು ಗಂಭೀತ ಆರೋಪ ಮಾಡಿದ್ದಾರೆ.
ಬಿಜೆಪಿ ನಡೆ ನೋಡಿದ್ರೆ ನಗು ಬರುತ್ತೆ ಅಂತ ಅಭಿಪ್ರಾಯಪಟ್ಟಿದ್ದಲ್ಲದೆ ಇವರದ್ದು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದೆ ಎಂದು ವ್ಯಂಗ್ಯವಾಡಿದ್ರು. ರಾಜ್ಯಪಾಲರು ರಾಜ ಭವನ ದುರುಪಯೋಗ ಮಾಡ್ತಿದಾರೆ. ಬಿಜೆಪಿ ಪಕ್ಷದ ಅಧ್ಯಕ್ಷರಂತೆ ರಾಜ್ಯಪಾಲರು ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಆರೋಪಿಸಿದ್ರು.
ಸದ್ಯ ಹೈಕೋರ್ಟ್ ರಿಲೀಫ್ ಕೊಟ್ಟಿದ್ದು, ನ್ಯಾಯಾಂಗ ಹೋರಾಟ ನಡೀತಿದೆ. ಯಡಿಯೂರಪ್ಪ ಪ್ರಕರಣ 20 ಕೋಟಿ ಚೆಕ್ ಮೂಲಕ ಲಂಚ ಪಡೆದಿರೋದು, ಗಡೀಪಾರಾಗಿದ್ದ ಅಮಿತ್ ಶಾ ಮಂತ್ರಿಯಾಗಿದ್ದು ಹೀಗೆ ಬಿಜೆಪಿ ನಾಯಕರ ಮೇಲೂ ಗಂಭೀರ ಆರೋಪಗಳು ಕೇಳಿಬಂದಿದ್ವು. ರಾಜ್ಯಪಾಲರನ್ನ ನಾನು ಹತ್ತಿರದಿಂದ ಬಲ್ಲೆ. ಬಿಜೆಪಿಯವರಿಗೆ ದಲಿತರ ಮೇಲೆ ಪ್ರೀತಿಯಿದ್ರೆ ಸಂವಿಧಾನ ಬದಲಾವಣೆ ಅಂತ ಯಾಕೆ ಮಾತನಾಡ್ತಿದ್ರು ಅಂತ ಪ್ರಶ್ನಿಸಿದರು.