ಬೆಂಗಳೂರು, (www.thenewzmirror.com) :
ಈತನ ವಯಸ್ಸು ಕೇವಲ 22 ವರ್ಷ. ಈವರೆಗೆ ಆಡಿರುವುದು 9 ಟೆಸ್ಟ್ ಪಂದ್ಯಗಳು. ಬಾರಿಸಿದ್ದು 3 ಶತಕ, 2 ದ್ವಿಶತಕ ಹಾಗೂ 4 ಅರ್ಧಶತಕ. ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್ ಪಂದ್ಯದಲ್ಲಿ ಭಾರತದ ಯುವ ಬ್ಯಾಟರ್ ಹೊಸ ಚರಿತ್ರೆಯನ್ನೇ ಸೃಷ್ಟಿಸಿದ್ದಾರೆ.
ಇದೇ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ ಹಲವು ದಾಖಲೆಗಳನ್ನು ತನ್ನ ಹೆಸರಿಗೆ ಬರೆದುಕೊಂಡರು. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅತಿ ಹೆಚ್ಚು ರನ್ (712) ಗಳಿಸಿದ ಭಾರತೀಯ ಬ್ಯಾಟರ್ ಎನಿಸಿಕೊಂಡರು. ಇಂದಿನ ಪಂದ್ಯದಲ್ಲಿ ಒಂದು ರನ್ ಗಳಿಸುವ ಮೂಲಕ ಈ ಮೈಲಿಗಲ್ಲನ್ನು
![](https://thenewzmirror.com/wp-content/uploads/2024/03/1000854395.jpg)
![](https://thenewzmirror.com/wp-content/uploads/2024/03/1000854394-1024x576.jpg)
.
ಟೆಸ್ಟ್ ಕ್ರಿಕೆಟ್ನಲ್ಲಿ (ಇನ್ನಿಂಗ್ಸ್ಗಳು) ವೇಗವಾಗಿ 1000 ರನ್ ಗಳಿಸಿದ ಭಾರತದ ಬ್ಯಾಟರ್ ಪೈಕಿ ಎರಡನೇ ಸ್ಥಾನ, 1,000 ರನ್ ಪೂರೈಸಿದ 4ನೇ ಅತ್ಯಂತ ಕಿರಿಯ ಭಾರತೀಯ ಎಂಬ ಶ್ರೇಯಕ್ಕೂ ಯಶಸ್ವಿ ಜೈಸ್ವಾಲ್ ಪಾತ್ರರಾದರು. ರೆಕಾರ್ಡ್ ಕಿಂಗ್ ಆರ್ಭಟಕ್ಕೆ ಸಚಿನ್, ವಿರಾಟ್ ಕೊಹ್ಲಿ, ಸುನೀಲ್ ಗವಾಸ್ಕರ್ ಅವರ ದಾಖಲೆಗಳೆಲ್ಲಾ ಉಡೀಸ್ ಆಗಿದೆ.
9 ಪಂದ್ಯ, 16 ಇನ್ನಿಂಗ್ಸ್ಗಳಲ್ಲಿ 1,000 ರನ್ಪೂರೈಕೆ
• ಪಂದ್ಯಗಳು : 09
• ಇನ್ನಿಂಗ್ಸ್ :16
• ರನ್ಗಳು : 1,028*
• ಬಾಲ್ಗಳು : 1,467
• ಸರಾಸರಿ : 68.53
• ಸ್ಟ್ರೈಕ್ ರೇಟ್ : 70.07
• ಶತಕ : 3
• ದ್ವಿಶತಕ : 2
• ಅರ್ಧಶತಕಗಳು : 4
• ಬೌಂಡರಿಗಳು : 108
• ಸಿಕ್ಸರ್ಗಳು : 29
ಭಾರತದಪರಟೆಸ್ಟ್ಸರಣಿಯಲ್ಲಿಅತಿಹೆಚ್ಚುರನ್ಗಳಿಸಿದವರು
• 774 : ಸುನಿಲ್ ಗವಾಸ್ಕರ್ (ವೆಸ್ಟ್ ಇಂಡೀಸ್), 1971
• 732 : ಸುನಿಲ್ ಗವಾಸ್ಕರ್ (ವೆಸ್ಟ್ ಇಂಡೀಸ್), 1978-79
• 712 : ಯಶಸ್ವಿ ಜೈಸ್ವಾಲ್ (ಇಂಗ್ಲೆಂಡ್), 2024*
• 692 : ವಿರಾಟ್ ಕೊಹ್ಲಿ (ಆಸ್ಟ್ರೇಲಿಯಾ), 2014-15
• 655 : ವಿರಾಟ್ ಕೊಹ್ಲಿ (ಇಂಗ್ಲೆಂಡ್), 2016
ವೇಗವಾಗಿ 1000 ರನ್‌ಗಳಿಸಿದಭಾರತದಬ್ಯಾಟರ್ (ಇನ್ನಿಂಗ್ಸ್ಗಳು)
• ವಿನೋದ್ ಕಾಂಬ್ಳಿ : 14 ಇನ್ನಿಂಗ್ಸ್
• ಯಶಸ್ವಿ ಜೈಸ್ವಾಲ್ : 16 ಇನ್ನಿಂಗ್ಸ್
• ಚೇತೇಶ್ವರ ಪೂಜಾರ : 18 ಇನ್ನಿಂಗ್ಸ್
• ಮಯಾಂಕ್ ಅಗರ್ವಾಲ್ : 19 ಇನ್ನಿಂಗ್ಸ್
• ಸುನಿಲ್ ಗವಾಸ್ಕರ್ : 21 ಇನ್ನಿಂಗ್ಸ್
1,000 ರನ್‌ಪೂರೈಸಿದಅತ್ಯಂತಕಿರಿಯಭಾರತೀಯ
• ಸಚಿನ್ ತೆಂಡೂಲ್ಕರ್ : 19 ವರ್ಷ, 217 ದಿನಗಳು
• ಕಪಿಲ್ ದೇವ್ : 21 ವರ್ಷ, 27 ದಿನಗಳು
• ರವಿಶಾಸ್ತ್ರಿ : 21 ವರ್ಷ, 197 ದಿನಗಳು
• ಯಶಸ್ವಿ ಜೈಸ್ವಾಲ್ : 22 ವರ್ಷ 70 ದಿನಗಳು
• ದಿಲೀಪ್ ವೆಂಗ್‌ಸರ್ಕರ್ : 22 ವರ್ಷ, 293 ದಿನಗಳು
ಕಡಿಮೆ ಪಂದ್ಯಗಳಲ್ಲಿ1,000 ರನ್ ಸಿಡಿಸಿದವರು
• ಡಾನ್ ಬ್ರಾಡ್ಮನ್ : 7
• ಯಶಸ್ವಿ ಜೈಸ್ವಾಲ್ : 9
• ಎವರ್ಟನ್ : 9
• ಹರ್ಬರ್ಟ್ : 9
• ಜಾರ್ಜ್ ಹೆಡ್ಲಿ : 9