Cricket News | ಟೀಂ ಇಂಡಿಯಾ ಕೋಚ್ ಆಗ್ತಿದ್ದಂತೆ ಹಿರಿಯರಿಗೆ ಶಾಕ್ ಕೊಡ್ತಾರಾ ಹೊಸ ಕೋಚ್ ಗೌತಮ್ ಗಂಭೀರ್..!?, ಕೊಹ್ಲಿ, ರೋಹಿತ್ ಗೆ ಕಾದಿದ್ಯಾ ಅಚ್ಚರಿ…!

ಬೆಂಗಳೂರು, (www.thenewzmirror.com) ;

ನಿರೀಕ್ಷೆಯಂತೆಗೆ ಭಾರತ ಪುರುಷರ ಕ್ರಿಕೆಟ್ ತಂಡಕ್ಕೆ ನೂತನ ಕೋಚ್ ಆಯ್ಕೆಯಾಗಿದೆ. ಈ ಬಾರಿಯ ಐಪಿಎಲ್ ಮುಗಿತಾ ಇದ್ದಂತೆ ಗೌತಮ್ ಗಂಭೀರ್ ನೂತನ ಕೋಚ್ ಆಗ್ತಾರೆ ಅನ್ನೋ ಮಾತುಗಳು ಕೇಳಿ ಬರ್ತಿತ್ತು. ಅಂತಿಮವಾಗಿ ಬಿಸಿಸಿಐ ಟಿ ೨೦ ಪುರುಷರ ವಿಶ್ವಕಪ್ ಟೂರ್ನಿ ಮುಗಿದ ಬಳಿಕ ಗೌತಮ್ ಅವ್ರನ್ನ ನೂತನ ಕೋಚ್ ಆಗಿ ಆಯ್ಕೆ ಮಾಡಿದೆ.

RELATED POSTS

ಹೊಸದಾಗಿ ಕೋಚ್ ಆಯ್ಕೆಆಗ್ತಿದ್ದಂತೆ ಟೀಂ ಇಂಡಿಯಾದಲ್ಲಿ ಭಾರೀ ಬದಲಾವಣೆ ಮಾಡುವ ಸಾಧ್ಯತೆ ಹೆಚ್ಚಾಗಿದೆ. ಈ ಹಿಂದೆ ಟೀಂ ಇಂಡಿಯಾದ ತರಬೇತುದಾರರಾಗಿದ್ದವಾಲ್ ಖ್ಯಾತಿಯ ರಾಹುಲ್ ದ್ರಾವಿಡ್ ನೇತೃತ್ವದಲ್ಲಿ ಭಾರತೀಯ ಕ್ರಿಕೆಟ್​ ತಂಡ ಟಿ20 ವಿಶ್ವಕಪ್ 2024 ಅನ್ನ ಗೆದ್ದಿತ್ತು.

ಇದೀಗ ಹಿರಿಯ ಆಟಗಾರರಿಲ್ಲದ ಟೀಂ ಇಂಡಿಯಾ ಜಿಂಬಾಬ್ವೆ ವಿರುದ್ಧ ಅದ್ಭುತ ಪ್ರದರ್ಶನ ತೋರುತ್ತಿದೆ. ಹೊಸ ಹುರುಪಿನಲ್ಲಿ ಇರುವ ಯುವ ಆಟಗಾರರ ತಂಡಕ್ಕೆ ಗೌತಿ ಹೊಸ ಹುಮ್ಮಸ್ಸು ತುಂಬುವುದರಲ್ಲಿ ಯಾವುದೇ ಅನುಮಾನವಿಲ್ಲ. ಕ್ರಿಕೆಟ್ ನಲ್ಲಿ ಸಾಕಷ್ಟು ಅನುಭವಹೊಂದಿರುವ 42 ವರ್ಷದ ಗೌತಮ್ ಗಂಭೀರ್, ಕೋಚ್ ಆಗಿ ಅಧಿಕಾರ ಸ್ವೀಕಾರ ಮಾಡ್ತಿದ್ದಂತೆ ಪಾತ್ರಗಳು ಬೇರೆಯಾದರೂ ಗುರಿ ಮಾತ್ರ ಒಂದೇ ಎಂದು ಹೇಳಿಕೆ ಕೊಟ್ಟಿದ್ದು, ಹಲವು ಅರ್ಥಗಳನ್ನ ಹುಟ್ಟಿಹಾಕಿದೆ.

ಐಪಿಎಲ್ ನಲ್ಲಿ ವಿರಾಟ್ ಜತೆ ಕಿರಿಕ್ ಮಾಡಿಕೊಂಡಿದ್ದ ಗೌತಮ್ ಅವ್ರ ಮೊದಲ ಟಾರ್ಗೇಟ್ ವಿರಾಟ್ ಕೊಹ್ಲಿ ಎಂದೇ ಕ್ರೀಡಾ ವಿಶ್ಲೇಷಕರು ಅಭಿಪ್ರಾಯ ಪಡ್ತಿದ್ದಾರೆ. ಕೊಹ್ಲಿ ಜತೆ ರೋಹಿತ್ ಶರ್ಮಾ ಕೂಡ ಗೌತಿ ಅವ್ರ ಟಾರ್ಗೇಟ್ ನಲ್ಲಿ ಇದ್ದಂತೆ ಕಾಣಿಸುತ್ತಿದ್ದು, ಹಿರಿಯ ಆಟಗಾರರಿಗೆಲ್ಲ ಶಾಶ್ವತ ಕೋಕ್ ಕೊಡುವ ಸಾಧ್ಯತೆ ಹೆಚ್ಚಾಗಿದೆ. ಸದ್ಯಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಟೂರ್ನಿ ಯಾವುದೂ ಇಲ್ಲ ಅನ್ನೋ ಕಾರಣಕ್ಕೆ ಗೌತಮ್ ಈ ಪ್ರಯೋಗ ಮಾಡಿ ಹೊಸಬರಿಗೆ ಅವಕಾಶ ಕೊಡುವ ಸಾಧ್ಯತೆಯನ್ನ ತಳ್ಳಿ ಹಾಕುವಂತಿಲ್ಲ.

ಇದಕ್ಕೆ ಪೂರಕ ಎನ್ನುವಂತೆ ಭಾರತ ದೇಶ ನನ್ನ ಗುರುತಾಗಿದೆ. ನನ್ನ ದೇಶಕ್ಕೆ ಸೇವೆ ಸಲ್ಲಿಸುವುದು ಜೀವನದ ಅತಿ ದೊಡ್ಡ ಗೌರವ. ವಿಭಿನ್ನ ಜವಾಬ್ದಾರಿಯೊಂದಿಗೆ ತಂಡಕ್ಕೆ ಮರಳುತ್ತಿರುವುದಕ್ಕೆ ನನಗೆ ಗೌರವ ಇದೆ. ಆದರೆ ಎಂದಿನಂತೆ, ಪ್ರತಿಯೊಬ್ಬ ಭಾರತೀಯನೂ ಹೆಮ್ಮೆ ಪಡುವಂತೆ ಮಾಡುವುದು ನನ್ನ ಗುರಿ ಎಂದು ಗಂಭೀರ್ ಟ್ವೀಟ್ ಮಾಡಿದ್ದಾರೆ. ಗಂಭೀರ್ ಅವರ ಅಧಿಕಾರವಧಿ ಮೂರುವರೆ ವರ್ಷ. 2027ರಲ್ಲಿ ತನ್ನ ಅಧಿಕಾರ ಕೊನೆಯಾಗಲಿದೆ.

ಗಂಭೀರ್ ನೀಡುವ ಮೂರುವರೆ ವರ್ಷಗಳ ಮಾರ್ಗದರ್ಶನದಲ್ಲಿ ಟೀಮ್ ಇಂಡಿಯಾ ಬರೋಬ್ಬರಿ 5 ಐಸಿಸಿ ಟೂರ್ನಿಗಳನ್ನು ಆಡಬೇಕಿದೆ. ಎಲ್ಲ ಐಸಿಸಿ ಟೂರ್ನಿಗಳನ್ನೂ ಗೆಲ್ಲುವ ಗುರಿ ಹಾಕಿದ್ದಾರೆ ಗಂಭೀರ್​. ಗಂಭೀರ್ ಅವರು ವಾರ್ಷಿಕ 12 ಕೋಟಿ ರೂಪಾಯಿ ವೇತನ ಪಡೆಯಲಿದ್ದಾರೆ ಎಂದು ವರದಿಯಾಗಿದೆ.

ಗೌತಮ್ ಗಂಭೀರ್ 2003ರಲ್ಲಿ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್​ಗೆ ಪದಾರ್ಪಣೆ ಮಾಡಿ, 2004ರಲ್ಲಿ ಟೆಸ್ಟ್​ ಮತ್ತು 2007ರಲ್ಲಿ ಟಿ20ಐ ಕ್ರಿಕೆಟ್ ಆಡಿದ ಕೀರ್ತಿ ಗೌತಮ್ ಅವರದ್ದು. ಒಟ್ಟು 147 ಏಕದಿನ ಪಂದ್ಯವನ್ನಾಡಿ 34 ಅರ್ಧಶತಕ, 11 ಶತಕ ಸಹಿತ 5238 ರನ್ ಗಳಿಸಿದ್ದಾರೆ. ಟೆಸ್ಟ್​ನಲ್ಲಿ 58 ಪಂದ್ಯಗಳ ಪೈಕಿ 104 ಇನ್ನಿಂಗ್ಸ್​​ಗಳಲ್ಲಿ ಕಣಕ್ಕಿಳಿದಿದ್ದು 22 ಅರ್ಧಶತಕ, 9 ಶತಕ ಸಹಿತ 4154 ರನ್ ಸಿಡಿಸಿದ್ದಾರೆ. ಇನ್ನು 37 ಟಿ20 ಪಂದ್ಯಗಳಲ್ಲಿ 7 ಅರ್ಧಶತಕಗಳ ಸಹಿತ 932 ರನ್ ಸಿಡಿಸಿದ್ದಾರೆ.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist