ಬೆಂಗಳೂರು, (www.thenewzmirror.com) ;
ನೀಲಿಚಿತ್ರ ತಾರೆ ಜೆಸ್ಸಿ ಜೇನ್ ಸಾವನ್ನಪ್ಪಿದ್ದು ಅತಿಯಾದ ಡ್ರಗ್ಸ್ ಸೇವನೆಯಿಂದ ಅನ್ನೋದು ವರದಿಯಲ್ಲಿ ಉಲ್ಲೇಖವಾಗಿದೆ. 2024 ರ ಜನವರಿಯಲ್ಲಿ ಬಾಯ್ಫ್ರೆಂಡ್ ಮನೆಯಲ್ಲಿ ಜೆಸ್ಸಿ ಸಾವನ್ನಪದಪಿದ್ರು.
ಜೆಸ್ಸಿ ಸಾವನ್ನಪ್ಪುತ್ತಿದ್ದಂತೆ ನಡೆಸಿದ ಮರಣೋತ್ತರ ಪರೀಕ್ಷೆಯಲ್ಲಿ ಮಾದಕ ದ್ರವ್ಯಗಳ ಮಿತಿ ಮೀರಿದ ಸೇವೆನೆ ಎನ್ನುವುದು ಉಲ್ಲೇಖವಾಗಿದೆ. ಜೆಸ್ಸಿನಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಸಿಂಡಿ ಟೇಲರ್ ಅಥವಾ ಸಿಂಥಿಯಾ ಆನ್ ಹೋವೆಲ್ ಎಂಬ ಹೆಸರಿನ 43 ವರ್ಷದ ನಟಿ, ಜನವರಿ 24, 2024 ರಂದು ಒಕ್ಲಹೋಮದಲ್ಲಿರುವ ತನ್ನ ಗೆಳೆಯನ ಮನೆಯಲ್ಲಿ ಪತ್ತೆಯಾಗಿದ್ದರು. ಆಕೆಯ ಗೆಳೆಯ ಬ್ರೆಟ್ ಹಸೆನ್ ಮುಲ್ಲರ್ (33) ಕೂಡ ಘಟನಾ ಸ್ಥಳದಲ್ಲಿ ಶವವಾಗಿ ಪತ್ತೆಯಾಗಿದ್ದ.
ಒಕ್ಲಹಾಮ್ ವೈದ್ಯಕೀಯ ಪರೀಕ್ಷಕರ ಕಚೇರಿ ಶವಪರೀಕ್ಷೆ ನಡೆಸಿದ್ದು, ಸಾವಿಗೆ ತೀವ್ರವಾದ ಫೆಂಟಾನಿಲ್ ಮತ್ತು ಕೊಕೇನ್ ನಶೆ ಕಾರಣ ಎಂದು ಬಹಿರಂಗಪಡಿಸಿದೆ. ದೇಹ ಪತ್ತೆಯಾಗುವ ಮೊದಲು ಸಾಕಷ್ಟು ಸಮಯದ ಹಿಂದೆಯೇ ಸತ್ತಿದ್ದರು ಎಂಬುದನ್ನು ಸೂಚಿಸುತ್ತದೆ. ಹಾಗೆನೇ ಅವರ ಸಾವಿಗೆ ಕಾರಣ ಆ ಸಮಯದಲ್ಲಿ ಮಿತಿಮೀರಿದ ಸೇವನೆ ಎಂದು ಶಂಕಿಸಲಾಗಿದೆ.