ಬೆಂಗಳೂರು, (www.thenewzmirror.com) :
ಬಾಲಿವುಡ್ ನಟಿ ಕಂ ಮಾಡೆಲ್ ಪೂನಂ ಪಾಂಡೆಗೆ ಮತ್ತೊಮ್ಮೆ ಸಂಕಷ್ಟ ಬಂದಿದೆ. ತನ್ನ ಸಾವಿನ ವಿಚಾರದಲ್ಲಿ ಸುಳ್ಳು ಸುದ್ದಿ ಹರಿಬಿಟ್ಟು ಆನಂತರ ಕರ್ವಿಕಲ್ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ತಾನು ಹೀಗೆ ಮಾಡಿದೆನೆಂದು ಹೇಳಿದ್ದರು. ತನ್ನ ಸಾವಿನ ಸುಳ್ಳು ಸುದ್ದಿ ಹರಿಬಿಟ್ಟ ಬಳಿಕ ತೀವ್ರ ಟೀಕೆಗೆ ಗುರಿಯಾಗಿದ್ದಲ್ಲದೆ ಆಕೆ ಹಾಗೂ ಅವರ ಪತಿಯ ವಿರುದ್ಧ ಕಾನ್ಪುರದಲ್ಲಿ ದೂರು ದಾಖಲಾಗಿದ್ದು 100 ಕೋಟಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
ನಟಿ, ಮಾಡೆಲ್ ಪೂನಂ ಪಾಂಡೆ ತನ್ನ ಸಾವಿನ ವಿಚಾರದಲ್ಲಿ ಮಾಡಿದ್ದ ಒಂದು ಪೋಸ್ಟ್ ನಿಂದ ದಿನಕ್ಕೆ ಕೋಟ್ಯಂತರ ಜನರನ್ನು ಫೂಲ್ ಮಾಡಿದ್ರು. ಪೂನಂ ಪಾಂಡೆ, ತಮ್ಮ ಸಾವಿನ ಬಗ್ಗೆ ಸುಳ್ಳು ಸುದ್ದಿ ಹರಿದಾಡುವಂತೆ ಮಾಡಿದ್ದರು. ಬಳಿಕ ಇದು ಜಾಗೃತಿ ಮೂಡಿಸೋದಿಕ್ಕೆ ಮಾಡಿದ್ದೆ ಅಂತ ಅಮಜಾಯಿಷಿ ಕೊಟ್ಟಿದ್ದರು. ಇದಾದ ಬಳಿಕ ಹಲವರು ಪೂನಂ ಪಾಂಡೆ ವಿರುದ್ಧ ಟೀಕೆ, ನಿಂದನೆಗಳನ್ನು ಮಾಡಿದರು. ಇದೆ ಬೆನ್ನಲ್ಲೇ ಫೈಜನ್ ಅನ್ಸಾರಿ ಎಂಬುವವರು ಕಾನ್ಪುರದಲ್ಲಿ ಪೋನಂ ಪಾಂಡೆ ಹಾಗೂ ಆಕೆಯ ಪತಿ ಸ್ಯಾಮ್ ಬಾಂಬೆ ವಿರುದ್ಧ 100 ಕೋಟಿ ರೂಪಾಯಿಗಳ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

ತನ್ನದೇ ಸಾವಿನ ಸುಳ್ಳು ಸುದ್ದಿಯನ್ನು ಹಬ್ಬಿಸಿ ಆತಂಕ ಉಂಟು ಮಾಡಿದ್ದ ಪೂನಂ ಪಾಂಡೆ ಹಾಗೂ ಅದಕ್ಕೆ ಸಹಾಯ ಮಾಡಿದ ಪತಿ ಸ್ಯಾಮ್ ಬಾಂಬೆ ವಿರುದ್ಧ ಫೈಜನ್ ಅನ್ಸಾರಿ ಎಂಬುವರು ಕಾನ್ಪುರದಲ್ಲಿ ದೂರು ದಾಖಲಿಸಿದ್ದು, ಪಬ್ಲಿಸಿಟಿ ಸ್ಟಂಟ್ಗಾಗಿ ಜನರಲ್ಲಿ ಆತಂಕ ಮೂಡಿಸಿದ, ಸಾರ್ವಜನಿಕರನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನ ಮಾಡಿದ ಪೂನಂ ಪಾಂಡೆ ವಿರುದ್ಧ ಹಾಗೂ ಆಕೆಯ ಪತಿ ಸ್ಯಾಮ್ ಬಾಂಬೆ ವಿರುದ್ಧ ಕ್ರಮ ಕೈಗೊಳ್ಳಿ ಅಂತ ಮನವಿ ಮಾಡಿದ್ದಾರೆ. ಅನ್ಸಾರಿಯ ದೂರು ಆಧರಿಸಿ ಪೂನಂ ಪಾಂಡೆ ಹಾಗೂ ಸ್ಯಾಮ್ ಬಾಂಬೆ ವಿರುದ್ಧ ಎಫ್ಐಆರ್ ಸಹ ದಾಖಲಾಗಿದೆ.