ಬೆಂಗಳೂರು, (www.thenewzmirror.com) :
ಕೇಂದ್ರ ಸರ್ಕಾರದ ವಿರುದ್ಧ ಮತ್ತೆ ದೇಶದ ಅನ್ನದಾತರು ಬೀದಿಗೆ ಇಳಿಯೋಕೆ ಸಿದ್ದರಾಗುತ್ತಿದ್ದಾರೆ. ಈ ಹಿಂದೆ ಕೃಷಿ ಕಾಯ್ದೆ ವಿರೋಧಿಸಿ ವರ್ಷಗಳ ಕಾಲ ಪ್ರತಿಭಟನೆ ನಡೆಸಿ ಯಶಸ್ವಿ ಕಂಡಿದ್ದ ದೇಶದ ರೈತರು ಮತ್ತೊಮ್ಮೆ ಅಂಥಹದ್ದೆ ಸಾಹಸಕ್ಕೆ ಮುಂದಾಗುತ್ತಿದ್ದಾರೆ. ಲೋಕಸಭಾ ಚುನಾವಣೆ ಹೊತ್ತಿಲಲ್ಲೇ ಇದು ರಾಜಕೀಯ ಪ್ರೇರಿತ ಅಂತ ಹೇಳಾಗುತ್ತಿದ್ದರೂ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಅನ್ನದಾತರು ಇದೀಗ ಮತ್ತೊಮ್ಮೆ ಕೇಂದ್ರದ ಮೇಲೆ ವಿವಿಧ ಬೇಡಿಕೆಗಳನ್ನ ಇಟ್ಟುಕೊಂಡು ದೆಹಲಿ ರ್ಯಾಲಿಗೆ ಮುಂದಾಗಿದ್ದಾರೆ.
ಈ ಹಿಂದೆ ವಿವಾದಿತ ಕೃಷಿನ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರಕ್ಕೆ ಬಿಸಿ ಮುಟ್ಟಿದ್ದ ಬೆನ್ನಲ್ಲೇ ಈ ಬಾರಿ ಕೇಂದ್ರ ಸರ್ಕಾರ ಎಚ್ಚೆತ್ತುಕೊಂಡಿದೆ. ಒಂದ್ಕಡೆ ಅನ್ನದಾತರ ಹೋರಾಟ ಹತ್ತಿಕ್ಕೋ ನಿಟ್ಟಿನಲ್ಲಿ ಕ್ರಮಗಳನ್ನ ಕೈಗೊಳ್ತಿದ್ರೆ ಮತ್ತೊಂದ್ಕಡೆ ಹೋರಾಟ ಯಶಸ್ವಿಗೊಳಿಸೋಕೆ ದೇಶದ ಅನ್ನದಾತರು ತಯಾರಿ ಮಾಡಿಕೊಳ್ತಿದ್ದಾರೆ.
ಬಜೆಟ್ ಅಧಿವೇಶನ ನಡೆಯುತ್ತಿದೆ.., ಪ್ರಧಾನಿ ಮೋದಿ ನೇತೃತ್ವದ ಕೊನೆಯ ಅಧಿವೇಶನ ಇದಾಗಿದ್ದು, ಭಾರೀ ಮಹತ್ವ ಪಡೆದುಕೊಂಡಿದೆ.
ಈ ಅಧಿವೇಶನದಲ್ಲೇ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಅಂದ್ರೆ ಮಿನಿಮಮ್ ಸಪೋರ್ಟಿಂಗ್ ಪ್ರೈಸ್ ನೀಡಬೇಕು ರೈತರ ಸಾಲಮನ್ನಾ ಮಾಡಬೇಕು, ಸ್ವಾಮಿನಾಥನ್ ವರದಿ ಜಾರಿಯಾಗಬೇಕು 60 ವರ್ಷ ತುಂಬಿದ ರೈತರಿಗೆ ಪಿಂಚಣಿ ಸೇರಿದಂತೆ ವಿವಿಧ ಬೇಡಿಕೆ ಇಟ್ಟುಕೊಂಡು ದೆಹಲಿ ರ್ಯಾಲಿ ಇದೇ ಫೆಬ್ರವರಿ ೧೩ ರಂದು ನಡೆಸೋಕೆಸಂಯುಕ್ತ ಕಿಸಾನ್ ಮೋರ್ಚಾ ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ಸೇರಿದಂತೆ 200 ಕ್ಕೂ ಹೆಚ್ಚು ರೈತ ಸಂಘಗಳು ‘ದೆಹಲಿ ಚಲೋ’ಗೆ ಕರೆ ನೀಡಿದ್ದು, ಈಗಾಗಲೇ ಹಲವು ರೈತ ಸಂಘಟನೆಗಳು ದೆಹಲಿಯತ್ತ ಮುಖಮಾಡುತ್ತಿವೆ. ಈ ರ್ಯಾಲಿಗೆ ಮುನ್ನೆಚ್ಚರಿಕೆಯಾಗಿ ಸರ್ಕಾರ ಹಲವು ತಡೆಗಳನ್ನು ಒಡ್ಡುತ್ತಿದೆ. ರೈತರು ದೆಹಲಿ ತಲುಪದಂತೆ ತಡೆಯಲು ದೆಹಲಿ, ಪಂಜಾಬ್ ಮತ್ತು ಹರಿಯಾಣ ಗಡಿಗಳನ್ನು ಮುಚ್ಚಲಾಗುತ್ತಿದೆ.
ಇದೇ ಮೊದಲ ಬಾರಿಗೆ ಹರಿಯಾಣ ಮತ್ತು ದೆಹಲಿಯ ಅಧಿಕಾರಿಗಳು ತಮ್ಮ ನೆರೆಯ ರಾಜ್ಯಗಳ ಗಡಿಗಳನ್ನು ಕಾಂಕ್ರೀಟ್ ಬ್ಲಾಕ್‌ಗಳು, ರಸ್ತೆ ಸ್ಪೈಕ್ ತಡೆಗಳು ಮತ್ತು ಮುಳ್ಳುತಂತಿಗಳನ್ನು ಹಾಕುವ ಮೂಲಕ ವಾಹನಗಳ ಪ್ರವೇಶವನ್ನು ತಡೆಯುವ ಕೆಲಸವನ್ನ ಮಾಡುತ್ತಿವೆ. ಇದೆ ಜತೆಗೆ ನಿಷೇಧಾಜ್ಞೆಗಳನ್ನು ಹೇರುವುದು, ಸಾವಿರಾರು ಪೊಲೀಸರನ್ನು ನಿಯೋಜಿಸಿ ತಮ್ಮ ಗಡಿಯನ್ನು ಭದ್ರಪಡಿಸಿದ್ದಾರೆ. ಅಷ್ಟೇ ಅಲ್ಲದೆ ಅಂಬಾಲಾದ ಸೆಕ್ಟರ್ 10 ರಲ್ಲಿನ ರಾಜೀವ್ ಗಾಂಧಿ ಸ್ಪೋರ್ಟ್ಸ್ ಸ್ಟೇಡಿಯಂ ಅನ್ನು ತಾತ್ಕಾಲಿಕ ಬಂಧನ ಕೇಂದ್ರವೆಂದು ಘೋಷಿಸಲಾಗಿದೆ
ಅನ್ನದಾತರ ಹೋರಾಟಕ್ಕೆ ಕೇಂದ್ರ ಹೆದರಿದೆ ಅಂತ ವಿಪಕ್ಷಗಳು ಟೀಕೆ ಮಾಡುತ್ತಿವೆ. ಶತಾಯ ಗತಾಯ ನಾವು ಹೋರಾಟ ಮಾಡಿಯೇ ತೀರುತ್ತೀವಿ ಅಂತ ಹೇಳ್ತಿರೋ ರೈತರ ಹೋರಾಟ ಯಾವ ಮಟ್ಟಕ್ಕೆ ಹೋಗುತ್ತೆ ಅನ್ನೋದನ್ನ ಕಾದು ನೋಡ್ಬೇಕು.