ಬೆಂಗಳೂರು, (www.thenewzmirror.com ) :
ಕೇಂದ್ರ ಸರ್ಕಾರ ಬಜೆಟ್ ಮಂಡನೆ ಬೆನ್ನಲ್ಲೇ ರಾಜ್ಯ ಬಜೆಟ್ ಮಂಡನೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ವಿತ್ತ ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಾಗಲೇ ಸಿದ್ಧತೆ ಆರಂಭಿಸಿದ್ದು, ಎಲ್ಲ ವಲಯಗಳ ಪ್ರಮುಖರ ಜತೆ ಸಭೆ ನಡೆಸಿ ಸಲಹೆಗಳನ್ನ ಪಡೆಯುತ್ತಿದ್ದಾರೆ.
ಅದೇ ರೀತಿ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ ಜತೆನೂ ಸಭೆ ನಡೆಸಿ ಕೈಗಾರಿಕಾ ವಲಯದಲ್ಲಿ ಆಗಬೇಕಾದ ಕ್ರಮಗಳ ಕುರಿತು ಮಾಹಿತಿ ಪಡೆದುಕೊಂಡರು. ಸಂಸ್ಥೆಯ ಅಧ್ಯಕ್ಷ ರಮೇಶ್ ಚಂದ್ರ ಲಹೋಟಿ ರಾಜ್ಯ ಕೈಗಾರಿಕೋದ್ಯಮಿಗಳ ಪರವಾಗಿ ಸರ್ಕಾರಕ್ಕೆ ಬಜೆಟ್ ಪೂರ್ವಸಭೆಯಲ್ಲಿ ಭಾಗವಹಿಸಿ ವಾಣಿಜ್ಯ, ಕೈಗಾರಿಕೆ ಮತ್ತು ಸೇವಾ ವಲಯಗಳ ಮೇಲೆ ಪರಿಣಾಮ ಬೀರುವ ಪ್ರಮುಖ ವಿಷಯಗಳ ಕುರಿತು ಗಮನ ಸೆಳೆದರು.
![](https://thenewzmirror.com/wp-content/uploads/2024/02/WhatsApp-Image-2024-02-12-at-17.01.39.jpeg)
ಎಪಿಎಂಸಿ ಯಾರ್ಡ್ಗಳ ಒಳಗೆ ಮತ್ತು ಹೊರಗೆ ಸಾಮಾನ್ಯ ನಿಯಮಗಳು ಮತ್ತು ನಿಬಂಧನೆಗಳನ್ನು ತರುವಲ್ಲಿ ಎಪಿಎಂಸಿಯನ್ನು ಬೆಂಬಲಿಸುವ ನಿರ್ದಿಷ್ಟ ಉಲ್ಲೇಖದೊಂದಿಗೆ ಮತ್ತು ಭ್ರಷ್ಟಾಚಾರವನ್ನು ಕಡಿಮೆ ಮಾಡಲು ಜಿಎಸ್‌ಟಿಯ ಮಾದರಿಯಲ್ಲಿ ಎಪಿಎಂಸಿಯ ಪೋರ್ಟಲ್ ಅನ್ನು ಬಲವಾಗಿ ಪ್ರತಿಪಾದಿಸಿದರು. ಇದರ ಜತೆಗೆ ಹಣಕಾಸು ಸಚಿವರಿಗೆ ಕೊಟ್ಟ ಕೆಲ ಶಿಫಾರಸ್ಸುಗಳೇನು ಅನ್ನೋದನ್ನ ನೋಡೋದಾದರೆ..,
– ಬೆಳವಣಿಗೆಯ ಪುನರುಜ್ಜೀವನ, ಹೂಡಿಕೆ ಪುನರುಜ್ಜೀವನ, ಕೈಗಾರಿಕಾ ಬೆಳವಣಿಗೆ ಮತ್ತು “ಬೆಂಗಳೂರನ್ನು ಹೊರತುಪಡಿಸಿದ ಮೂಲಸೌಕರ್ಯ ಅಭಿವೃದ್ಧಿ, ಎಂಎಸ್‌ಎಂಇಗಳ ಅಭಿವೃದ್ಧಿ ಮತ್ತು ಅದರ ಬೆಳವಣಿಗೆಗೆ ವಿಶೇಷ ಪ್ರೋತ್ಸಾಹಕಗಳಿಗೆ ಆದ್ಯತೆ.
– ವಿಶೇಷವಾಗಿ ಕೈಗಾರಿಕಾ ಮತ್ತು ಸೇವಾ ಚಟುವಟಿಕೆಗಳಿಗೆ ಆಸ್ತಿ ತೆರಿಗೆಯನ್ನು ತರ್ಕಬದ್ಧಗೊಳಿಸುವಿಕೆ.
– ರಾಜ್ಯದಲ್ಲಿ ಪ್ರವಾಸಿ ವಲಯಕ್ಕೆ ಉತ್ತೇಜನ.
– ವಿದ್ಯುತ್ ಸಂಬಂಧಿತ ಸಮಸ್ಯೆಗಳ ಪರಿಹಾರ ಕುರಿತು.
– ಉದ್ಯಮಿಗಳಿಗೆ ವ್ಯಾಪಾರವನ್ನು ಸುಲಭಗೊಳಿಸುವುದು.
– ಕೃಷಿ ಅಭಿವೃದ್ಧಿಗೆ ಉತ್ತೇಜನ.
– ಕೌಶಲ್ಯ ಅಭಿವೃದ್ಧಿ ಚಟುವಟಿಕೆಗಳಿಗೆ ಉತ್ತೇಜನ / ಪ್ರಚಾರ
– ಉತ್ಪಾದನಾ ವಲಯದಲ್ಲಿ ಉತ್ತಮ ಸಾಧನೆಗೆ ಉತ್ತೇಜನ
– ಕೈಗಾರಿಕಾ ವಲಯಕ್ಕೆ ಸಾಲದ ಹರಿವಿನ ಹೆಚ್ಚಳಕ್ಕೆ ಒತ್ತು
– ಹಳೆಯ ಕಾನೂನುಗಳನ್ನು ರದ್ದುಪಡಿಸುವುದು.
– ಸೂಕ್ತ ಸಂಪನ್ಮೂಲ ಹಂಚಿಕೆ
– ಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸುವ ಕುರಿತು.