Election News | ಮತದಾರರಿಗೆ ಲಂಚದ ಆಮೀಷ ಆರೋಪ, ಡಾ. ಕೆ. ಸುಧಾಕರ್ ವಿರುದ್ಧFIR ದಾಖಲು, 4.8 ಕೋಟಿ ನಗದು ವಶ, ವಾಟ್ಸ್ ಅಫ್ ಕಾಲ್ ಮಾಡಿ ಸಹಾಯ ಕೇಳಿದ್ರಾ ಮಾಜಿ ಸಚಿವ..?

ಬೆಂಗಳೂರು, (www.thenewzmirror.com) ;

ಕರ್ನಾಟಕದಲ್ಲಿ ಮೊದಲ ಹಂತದ ಚುನಾವಣೆ ಮುಕ್ತಾಯವಾಗಿದೆ. 28 ಲೋಕಸಭಾ ಕ್ಷೇತ್ರಗಳ ಪೈಕಿ 14 ಕ್ಷೇತ್ರಗಳಿಗೆ ಮತದಾನ ಮುಗಿದಿದ್ದು, ಅಭ್ಯರ್ಥಿಗಳ ಭವಿಷ್ಯ ಭದ್ರವಾಗಿದೆ. ಇದರ ಬೆನ್ನಲ್ಲೇ ಚುನಾವಣೆಗೂ ಮುನ್ನಾದಿನ ಚಿಕ್ಕಬಳ್ಳಾಪುರ ಬಿಜೆಪಿ ಲೋಕಸಭ ಕ್ಷೇತ್ರದ ಅಭ್ಯರ್ಥಿ ಹಾಗೂ ಮಾಜಿ ಸಚಿವ ಡಾ. ಕೆ. ಸುಧಾಕರ್ ವಿರುದ್ಧಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ. ಮತದಾರರಿಗೆ ಲಂಚ, ಆಮೀಷ ಹಾಗೂ ಪ್ರಭಾವ ಬೀರಿದ ಆರೋಪದಡಿ ಪ್ರಕರಣ ದಾಖಲು ಮಾಡಲಾಗಿದೆ. ಡಾ. ಕೆ. ಸುಧಾಕರ್ ಅವರ ವಿರುದ್ಧ ದಾಖಲಾದ FIR ಪ್ರತಿ ನ್ಯೂಝ್ ಮಿರರ್ ಗೆ ಲಭಿಸಿದೆ.

RELATED POSTS

ಚುನಾವಣೆಗೂ ಮುನ್ನಾದಿನ ಅಂದರೆ ಏಪ್ರಿಲ್ 25 ರಂದು ಮತದಾರರಿಗೆ ಹಣ ಹಂಚಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂಬ ಮಾಹಿತಿ ಚಿಕ್ಕಬಳ್ಳಾಪುರ ಜಿಲ್ಲೆ ನೋಡಲ್ ಅಧಿಕಾರಿ ಮುನೀಶ್ ಮೌದ್ಗಿಲ್ ಅವರ ಮೊಬೈಲ್ ಗೆ 10 ಕೋಟಿ ಸಂಗ್ರಹ ಮಾಡಿದ್ದರ ಕುರಿತು ದೂರು ಬಂದಿತ್ತು. ಮೌದ್ಗಿಲ್ ಸೂಚನೆ ಮೇರೆಗೆ ಫ್ಲೈಯಿಂಗ್ ಸ್ಕ್ಯಾಡ್ ನ ಅಧಿಕಾರಿ ದಶರಥ್ ವಿ ಕುಂಬಾರ್ ಅವರು ಸ್ಥಳಪರಿಶೀಲಿಸಿ ಮಾಹಿತಿ ಖಚಿತಪಡಿಸಿಕೊಂಡಿದ್ದರು. ಹಣ ಇದ್ದ ಮನೆಯ ಖಚಿತ ಮಾಹಿತಿ ಆಧರಿಸಿದ ಐಟಿ ಅಧಿಕಾರಿಗಳು ದಾಳಿ ನಡೆಸಿದಾಗ 4.8 ಕೋಟಿ ನಗದು ಇರೋದು ಗೊತ್ತಾಗಿದ್ದು, ಅದನ್ನ ವಶಕ್ಕೆ ಪಡಿಸಿಕೊಳ್ಳಲಾಗಿದೆ. ಇದರ ಆಧಾರದ ಮೇಲೆ ಡಾ. ಕೆ. ಸುಧಾಕರ್ ವಿರುದ್ಧಕಲಂ 171 E, 171F, 171 B, 171 C ಭಾರತೀಯ ದಂಡ ಸಂಹಿತೆ ಹಾಗೂ ಕಲಂ 123 ಆರ್ ಪಿ ಕಾಯ್ದೆ1951ರಿತ್ಯ ಪ್ರಕರಣ ದಾಖಲಾಗಿದೆ.

ನೋಡಲ್ ಅಧಿಕಾರಿಗೆ ಬಂದಿತ್ತಂತೆ ವಾಟ್ಸ್ ಅಫ್ ಕಾಲ್..!

ಹಣ ವಶಪಡಿಸಿಕೊಂಡ ಬಳಿಕ ನೋಡಲ್ ಅಧಿಕಾರಿಗೆ ವಾಟ್ಸ್ ಅಫ್ ಕಾಲ್ ಬಂದಿತ್ತಂತೆ. 4.8 ಕೋಟಿ ಹಣ ವಶಪಡಿಸಿಕೊಳ್ಳುತ್ತಿದ್ದಂತೆ ನೋಡಲ್ ಅಧಿಕಾರಿಯಾದ ಮುನೀಶ್ ಮೌದ್ಗಿಲ್ ಗೆ ವಾಟ್ಸ್ ಅಪ್ ಕರೆ ಬಂದಿತ್ತಂತೆ. ಏಪ್ರಿಲ್ 25 ರ ಮಧ್ಯಾಹ್ನ 2.05 ಗಂಟೆಗೆ ನೋಡಲ್ ಅಧಿಕಾರಿ ಮುನೀಶ್ ಮೌದ್ಗಿಲ್ ಐಎಎಸ್ ಅವರ ಮೊಬೈಲ್ ಸಂಖ್ಯೆ 9448194915ಸಂಖ್ಯೆಗೆ 9845204040 ಸಂಖ್ಯೆಯಿಂದ ವಾಟ್ಸ್ ಅಫ್ ಕರೆ ಪಡೆದಿದ್ದರಂತೆ, (ವಾಟ್ಸ್ ಅಫ್ ನಲ್ಲಿ ಶ್ರೀ ಸುಧಾಕರ್ ಎಂದು ಗುರ್ತಿಸಿಕೊಂಡಿದ್ದಾರೆ). ಇದಲ್ಲದೆ ಈ ಸಂಖ್ಯೆಗೆ ಮೂರು ವಾಟ್ಸ್ ಅಫ್ ಸಂದೇಶ ಗಳನ್ನೂ ಮುನೀಶ್ ಮೌದ್ಗಿಲ್ ಅವರು ಪಡೆದಿದ್ದರು. ಎಂದು FIR ನಲ್ಲಿ ವಿವರಿಸಲಾಗಿದೆ.

ಇದಲ್ಲದೆ 25.4.2024 ರಂದು ಮಧ್ಯಾಹ್ನ 2.04 ಗಂಟೆಗೆ ಜಿಲ್ಲಾ ಎಂಸಿಸಿ ನೋಡಲ್ ಅಧಿಕಾರಿ ಮುನೀಶ್ ಮೌದ್ಗಿಲ್, ಐಎಎಸ್ ರವರ 9448194915 ಸಂಖ್ಯೆಗೆ 9845204040 ಸಂಖ್ಯೆಯಿಂದ ವಾಟ್ಸ್ ಅಪ್ ಕರೆಯನಗನ ಪಡೆದರು (whasAppನಲ್ಲಿ ಶ್ರೀ ಸುಧಾಕರ್ ಎಂದು ಗುರುತಿಸಿದ್ದಾರೆ ಇದಲ್ಲದೆ, ಈ ಸಂಖ್ಯೆಗೆ ಈ ಕೆಳಗಿನ ಮೂರು ವಾಟ್ಸ್ ಅಫ್ ಸಂದೇಶಗಳನ್ನು ಜಿಲ್ಲಾ ಎಂಸಿಸಿ ನೋಡಲ್ ಅಧಿಕಾರಿಗೆ 2.04 PM ನಲ್ಲಿ MADAVARA GOVINDAPPA IT TEAM 02.07 ಗಂಟೆಗೆ Ps help will be great full to you. Regards Folded Hands Logo) ಮತ್ತು 3ನೇ ಸಂದೇಶ 2.14Pm ಗೆ 9945141601 Anand Ratkal ಎಂದು whatuApp ಮಾಡಲಾಗಿದೆ. ಶ್ರೀ ಸುಧಾಕರ್ ಚಿಕ್ಕಬಳ್ಳಾಪುರ ಸಂಸದೀಯ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಚಿಕ್ಕಬಳ್ಳಾಪುರದಿಂದ ಸ್ಪರ್ಧಿಸುತ್ತಿರುವ ಬಿಜೆಪಿ ಅಭ್ಯರ್ಥಿಯು ಡಿಸ್ಟ್ರಿಕ್ ಎಂಸಿಸಿ ನೋಡಲ್ ಅಧಿಕಾರಿ ಮುನೀಶ್ ಮೌದ್ಗಿಲ್ ಅವರಿಗೆ ವಾಟ್ಸ್ ಅಫ್ ಮೆಸೆಜ್ ನ ಸ್ಟ್ರೀನ್ ಶಾಟ್ ಮತ್ತು ವಾಟ್ಸ್ ಅಫ್ ನಲ್ಲಿ ಬಂದ ಫೋನ್ ಕರೆಯನ್ನ ಲಗತ್ತಿಸಲಾಗಿದೆ. ಮೇಲಿನ ವಿವರವಾದ ಕಾರಣಗಳಿಗಾಗಿ ನಗದನ್ನ ವಶಕ್ಕೆ ಪಡೆಯಲಾಗಿದ್ದು, ಚಿಕ್ಕಬಳ್ಳಾಪುರ ಸಂಸದೀಯ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀ ಸುಧಾಕರ್ ವಿರುದ್ಧ RP ಕಾಯ್ದೆ 1951 ಅಡಿಯಲ್ಲಿ ಅನುಚಿತ ಪ್ರಭಾವ, ಲಂಚ ಮತ್ತು ಭ್ರಷ್ಟಚಾರ ಪ್ರಯತ್ನಕ್ಕಾಗಿ ಕಲಂ ಕಲಂ 171 E, 171F, 171 B, 171 C ಭಾರತೀಯ ದಂಡ ಸಂಹಿತೆ ಹಾಗೂ ಕಲಂ 123 ಆರ್ ಪಿ ಕಾಯ್ದೆ1951ರಿತ್ಯ ಪ್ರಕರಣವನ್ನ ದಾಖಲಿಸಿ ಮತ್ತು ತನಿಖೆ ಮಾಡಿ ಮತ್ತು ಕಾನೂನಿನ ಪ್ರಕಾರ ಕ್ರಮ ತೆಗೆದುಕೊಳ್ಳುವಂತೆ ನೀಡಿದ ದೂರನ್ನು ಪಡೆದು ಠಾಣಾ ಎನ್ ಸಿಆರ್ ನಂ 1123/2024 ರಲ್ಲಿ ನೋಂದಾಯಿಸಿಕೊಂಡಿರುತ್ತೆ. ಸದ್ಯ ಪ್ರಕರಣ ದಾಖಲಾಗಿದ್ದು, ಪ್ರಕರಣ ವಿಚಾರಣೆ ನಡೆಯುತ್ತಿದೆ.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist