ಬೆಂಗಳೂರು, (www.thenewzmirror com);
ಸ್ವಾತಂತ್ರ್ಯ ಹೋರಾಟಗಾರ, ದೇಶಭಕ್ತ ಹಾಗೂ ರಾಷ್ಟ್ರೀಯವಾದ ವೀರ ಸಾವರ್ಕರ್ ವಿರುದ್ಧ ಅವಹೇಳನಕಾರಿ ಹೇಳಿಕರ ಕೊಟ್ಟ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವಿರುದ್ಧ ತೇಜಸ್ ಎ ಗೌಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.
ಗಾಂಧಿ ಜಯಂತಿ ದಿನದಂದು ನ್ಯಾಷನಲ್ ಕಾಲೇಜು ಆವರಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗಿಯಾಗಿದ್ದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಭಾಷಣ ಮಾಡುವ ಭರದಲ್ಲಿ ನಾಲಿಗೆಯನ್ನ ಹರಿಬಿಟ್ಟಿದ್ದರು. ವೀರ ಸಾವರ್ಕರ್ ವಿಚಾರದಲ್ಲಿ ಅವಹೇಳನಕಾತಿ ಭಾಷಣ ಮಾಡಿ ಹಿಂದೂ ಮುಖಂಡರ ಕೆಂಗಣ್ಣಿಗೆ ಗುರಿಯಾಗಿದ್ದರು.


ರಾಷ್ಟ್ರೀಯವಾದಿ, ದೇಶಭಕ್ತ, ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ವೀರ ಸಾವರ್ಕರ್ ಕುರಿತು ಮಾತನಾಡುವಾಗ ದಿನೇಶ್ ಗುಂಡೂರಾವ್, ವೀರ ಸಾವರ್ಕರ್ ಬ್ರಾಹ್ಮಣರಾಗಿದ್ದರೂ ಗೋಮಾಂಸವನ್ನ ತಿನ್ನುತ್ತಿದ್ದರು. ಹಾಗೆನೇ ಅವರು ಗೋಹತ್ಯೆಯನ್ನ ವಿರೋಧ ಮಾಡುತ್ತಿರಲಿಲ್ಲ ಎಂದು ಹೇಳಿಕೆ ಕೊಟ್ಟಿದ್ದರು.
ವೀತ ಸಾವರ್ಕರ್ ವಿರುದ್ಧ ಇಂಥ ಹೇಳಿಕೆಯಿಂದ ಅಪಾರ ಹಿಂದೂಗಳಲ್ಲಿ ಅದರಲ್ಲೂ ದೇಶ ಭಕ್ತರ ಮನಸ್ಸಿಗಡ ನೋವಾಗಿದೆ. ಜವಾಬ್ದಾರಿ ಮಂತ್ರಿ ಸ್ಥಾನದಲ್ಲಿ ಇರುವ ದಿನೇಶ್ ಗುಂಡೂರಾವ್ ಹೇಳಿನೆ ಬೇಜವಾಬ್ದಾರಿ ತನದಿಂದ ಕೂಡಿದ್ದಲ್ಲದೆ ಕೋಮು ದ್ವೇಶ ಹಾಗೂ ಕೋಮು ಪ್ರಚೋದನೆಗೆ ಪೂರಕವಾಗಿದೆ ಎಂದು ಹಿಂದೂ ಮುಖಂಡ ತೇಜಸ್ ಗೌಡ ಆರೋಪ ಮಾಡಿದ್ದಾರೆ.
ಹಿಂದೂಗಳ ಭಾವನೆಗೆ ಧಕ್ಕೆ ತಂದಿರುವ ಆರೋಗ್ಯ ಸಚಿವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಉಪ ಪೊಲೀಸ್ ಆಯುಕ್ತರಿಗೆ ದೂರು ಕೊಟ್ಟಿರುವ ತೇಜಸ್ ಗೌಡ, ನ್ಯಾಷನಲ್ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದಿನೇಶ್ ಗುಂಡೂರಾವ್ ಭಾಷಣದ ತುಣುಕನ್ನೂ ನೀಡಿದ್ದಾರೆ.
ಹಿಂದೂಗಳ ಭಾವನೆಗೆ ಧಕ್ಕೆ ತಂದಿರುವ ದಿನೇಶ್ ಗುಂಡೂರಾವ್ ಗೆ ಇದೀಗ ಸಂಕಷ್ಟ ಎದುರಾಗಿದ್ದು, ತೇಜಸ್ ಗೌಡ ಕೊಟ್ಟ ದೂರಿನ ಅನ್ವಯ ಕಾನೂನು ತಜ್ಞರ ಅಭಿಪ್ರಾಯ ಪಡೆದು ಮುಂದಿನ ಕ್ರಮ ಕೈಗೊಳ್ಳುವ ಭರವಸೆ ಪೊಲೀಸ್ ನಿಂದ ಸಿಕ್ಕಿದ್ದು ಕೂಡಲೇ ದಿನೇಶ್ ಗುಂಡೂರಾವ್ ಹಿಂದೂಗಳ ಕ್ಷಮೆ ಕೇಳಬೇಕೆಂದು ತೇಜಸ್ ಗೌಡ ಆಗ್ರಹಿಸಿದ್ದಾರೆ.