ದಕ್ಷಿಣ ಕೋರಿಯಾ, (www.thenewzmirror.com) ;
181 ಜನರು ಪ್ರಯಾಣಿಸುತ್ತಿದ್ದ ಜೆಜು ಏರ್ ವಿಮಾನ ಪತನಗೊಂಡು ಸುಮಾರು 28 ಜನ ಮೃತಪಟ್ಟು, ಇಬ್ಬರು ಗಂಭೀರ ಗಾಯಗೊಂಡ ಘಟನೆ ಇಂದು ಬೆಳ್ಳಂಬೆಳಗ್ಗೆ ದಕ್ಷಿಣ ಕೊರಿಯಾದ ಮುವಾನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ. ವಿಮಾನವೊಂದು ರನ್‌ವೇಯಿಂದ ಕೆಳಗಿಳಿದು ಪತನಗೊಂಡ ನಂತರ ಈ ದುರ್ಘಟನೆ ಸಂಭವಿಸಿದೆ ಎಂದು ವರದಿಯಾಗಿದೆ.
BREAKING: New video shows moment Boeing 737-800 plane carrying 181 people onboard crashes at Muan International Airport in South Korea.
— AZ Intel (@AZ_Intel_) December 29, 2024
pic.twitter.com/konxWBpnWy
ಥೈಲ್ಯಾಂಡ್‌ನ ಬ್ಯಾಂಕಾಕ್‌ನಿಂದ ಹೊರಟ ವಿಮಾನ ದಕ್ಷಿಣ ಕೊರಿಯಾದ ಮುವಾನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಆಗುವಾಗ ಬ್ಯಾಂಕಾಕ್‌ನಿಂದ ಎಜೆಜು ಏರ್ ವಿಮಾನವು ಸ್ಥಳೀಯ ಕಾಲಮಾನ 9:07 ಕ್ಕೆ ರನ್‌ವೇಯಿಂದ ಹೊರಬಿದ್ದು ಬೇಲಿಗೆ ಬಡಿದಿದೆ. ಇದರ ಪರಿಣಾಮವಾಗಿ ವಿಮಾನದಲ್ಲಿದ್ದ 181 ಜನರಲ್ಲಿ ಕನಿಷ್ಠ 28 ಮಂದಿ ಸಾವನ್ನಪ್ಪಿದ್ದಾರೆ ಎಂದು ಯೋನ್‌ಹಾಪ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಅಪಘಾತಕ್ಕೀಡಾದ ವಿಮಾನ ‘ಜೆಜು ಏರ್’ ವಿಮಾನಯಾನ ಸಂಸ್ಥೆಯದ್ದು. ಅದರಲ್ಲಿ 6 ಸಿಬ್ಬಂದಿ, 175 ಮಂದಿ ಪ್ರಯಾಣಿಕರಿದ್ದರು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ. ಬದುಕುಳಿದಿದ್ದ ಇಬ್ಬರನ್ನು ರಕ್ಷಿಸಲಾಗಿದೆ ಎಂದು ಅಗ್ನಿಶಾಮಕ ಸಿಬ್ಬಂದಿ ತಿಳಿಸಿದ್ದಾರೆ. 28 ಮಂದಿ ಮೃತಪಟ್ಟಿರುವುದು ಅಧಿಕೃತವಾಗಿಲ್ಲ. ಆದರೆ, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ವಿಮಾನವು ಗೋಡೆಗೆ ಡಿಕ್ಕಿಯಾಗುತ್ತಿದ್ದಂತೆ, ಬೆಂಕಿ ಹೊತ್ತಿಕೊಳ್ಳುವ ದೃಶ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಘಟನಾ ಸ್ಥಳದಲ್ಲಿ ದಟ್ಟ ಹೊಗೆ ಆವರಿಸಿದೆ.
ಹಂಗಾಮಿ ಅಧ್ಯಕ್ಷ ಚೋಯ್ ಸಾಂಗ್-ಮೋಕ್ ಅವರು, ಪ್ರಯಾಣಿಕರ ರಕ್ಷಣೆಗೆ ಎಲ್ಲ ರೀತಿಯ ಪ್ರಯತ್ನ ಮಾಡುವಂತೆ ಆದೇಶಿಸಿದ್ದಾರೆ.