ಬೆಂಗಳೂರು, (www.thenewzmirror.com) ;
ಸ್ಟೆಮ್ ಕಾರ್ಯಕ್ರಮದ ಮೂಲಕ ಗ್ರಾಮೀಣ ಭಾಗದ ಮಕ್ಕಳು ಗ್ಲೋಬಲ್ ಮಟ್ಟಕ್ಕೆ ಏರುವಂತಹ ಕಾರ್ಯಕ್ರಮ ಇದಾಗಿದೆ. ಸರ್ಕಾರಿ ಶಾಲೆಯ ಮಕ್ಕಳು ಅಂತರರಾಷ್ಟ್ರೀಯ ಮಟ್ಟಕ್ಕೆ ಏರಲು ನಮ್ಮ ಸರ್ಕಾರದ ಸಂಪೂರ್ಣ ಬೆಂಬಲ ಮತ್ತು ಬದ್ದತೆ ಇದೆ. ಮಕ್ಕಳ ಸಾಧನೆಯ ಹಿಂದೆ ಶಿಕ್ಷಕರ ಶ್ರಮವೂ ಸೇರಿಕೊಂಡಿದೆ ಎಂದು ಡಿಸಿಎಂ ಡಿ. ಕೆ. ಶಿವಕುಮಾರ್ ಅವರು ಅಭಿಪ್ರಾಯಪಟ್ಟರು.
ನ್ಯಾಷನಲ್ ಎಜುಕೇಷನ್ ಫೌಂಡೇಶನ್ ವತಿಯಿಂದ ರಾಜರಾಜೇಶ್ವರಿ ನಗರದ ಆದಿತ್ಯ ಲೇಔಟ್ ನ ನ್ಯಾಷನಲ್ ಎಜುಕೇಷನ್ ಫೌಂಡೇಶನ್ ಕ್ಯಾಂಪಸ್ ನ ಜಿಎಟಿ ಸಭಾಂಗಣದಲ್ಲಿ ನಡೆದ 4ನೇ ರಾಷ್ಟ್ರೀಯ ಸ್ಟೆಮ್ (STEM) ಚಾಲೆಂಜ್ ಅಂತಿಮ ಸುತ್ತಿನ ಸ್ಪರ್ಧೆಯನ್ನು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಸ್ಪರ್ಧಾ ವಿಜೇತರಿಗೆ ಪ್ರಶಸ್ತಿ ವಿತರಣೆ ಮಾಡಿ ಮಾತನಾಡಿದರು.
“ನಮ್ಮ ಸರ್ಕಾರ ರಾಜ್ಯದ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಪಣ ತೊಟ್ಟಿದೆ. ಸಿಎಸ್ ಆರ್ ಅನುದಾನದ ಅಡಿ ಶಾಲೆಗಳ ಅಭಿವೃದ್ಧಿ ಯೋಜನೆಯನ್ನು ದೇಶದ ನಾನಾ ರಾಜ್ಯಗಳು ಗಮನಿಸುತ್ತಿವೆ. ನಾನು ಶಿಕ್ಷಣ ಪ್ರೇಮಿ ಆದ ಕಾರಣಕ್ಕೆ ನನ್ನ ಎಲ್ಲಾ ಕೆಲಸಗಳನ್ನು ಬದಿಗೊತ್ತಿ ದೇಶದ ನಾನಾ ಭಾಗದ ಸರ್ಕಾರಿ ಶಾಲೆಯ ಮಕ್ಕಳು ಯಾವ ರೀತಿಯಲ್ಲಿ ಸಾಧನೆ ಮಾಡಿದ್ದಾರೆ ಎಂದು ನೋಡಲು ಬಂದಿದ್ದೇನೆ” ಎಂದರು.
“ನಾನು ಶಿಕ್ಷಣ ಸಂಸ್ಥೆಯನ್ನು ಪ್ರಾರಂಭ ಮಾಡುವಾಗ ಅನೇಕರು ಪ್ರಶ್ನೆ ಮಾಡಿದರು. ನಮ್ಮ ವಿದ್ಯಾರ್ಥಿ ಯುವ ಸಮೂಹ ರಾಷ್ಟ್ರಮಟ್ಟದಲ್ಲಿ ಗುರುತಿಸಿ ಕೊಳ್ಳಬೇಕು ಎನ್ನುವ ಕಾರಣಕ್ಕೆ ನ್ಯಾಷನಲ್ ಹಿಲ್ ವ್ಯೂ ಪಬ್ಲಿಕ್ ಶಾಲೆ ಎಂದು ಹೆಸರನ್ನು ಇಡಲಾಯಿತು. ರಾಷ್ಟ್ರಮಟ್ಟದಿಂದ ಅಂತರರಾಷ್ಟೀಯ ಮಟ್ಟಕ್ಕೆ ಬೆಳೆಯಬೇಕು ಎನ್ನುವ ಉದ್ದೇಶಕ್ಕೆ ನಮ್ಮ ಸಂಸ್ಥೆಯ ಇಂಜಿನಿಯರಿಂಗ್ ಕಾಲೇಜಿಗೆ ಗ್ಲೋಬಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಎಂದು ಹೆಸರು ಇಡಲಾಯಿತು” ಎಂದು ಹೇಳಿದರು.
“ಐಶ್ವರ್ಯ ಡಿ. ಕೆ. ಎಸ್ ಹೆಗ್ಡೆ ಅವರು ಮಾದರಿ ಶಿಕ್ಷಣ ಸಂಸ್ಥೆ ಹಾಗೂ ಮಾದರಿ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಗ್ರಾಮೀಣ ಸರ್ಕಾರಿ ಶಾಲೆಯ ಮಕ್ಕಳಿಗೆ ಪ್ರೋತ್ಸಾಹ ನೀಡುವಂತಹ ಇಂತಹ ಕಾರ್ಯಕ್ರಮ ರೂಪಿಸುವುದು ಕಷ್ಟಕರ. ಇದರಲ್ಲಿ ಇವರು ಯಶಸ್ವಿಯಾಗಿದ್ದಾರೆ” ಎಂದು ಅಭಿಪ್ರಾಯಪಟ್ಟರು.
*ರಾಷ್ಟ್ರೀಯ ವಿಜ್ಞಾನ ಮಾದರಿ ಮೇಕಿಂಗ್ ಪ್ರಶಸ್ತಿಗಳು:*
ಮೊದಲ ಸ್ಥಾನ: ದೀಪಕ್ ಕುಮಾರ್, (ಬೇಸಿಕ್ ಸ್ಕೂಲ್, ಚೋಟಾ ಗೋವಿಂದ್‌ಪುರ, ಜಮ್‌ಶೆಡ್‌ಪುರ), ಮತ್ತು ಸನ್ನಿ ಕುಮಾರ್, ಬೇಸಿಕ್ ಸ್ಕೂಲ್, ಚೋಟಾ ಗೋವಿಂದ್‌ಪುರ, ಜಮ್‌ಶೆಡ್‌ಪುರ)
2ನೇ ಸ್ಥಾನ: ಜಿಶನ್ ಬೈದ್ಯ (ಬಿಷ್ಣುಪುರ ಸರ್ ರಮೇಶ್ ಸಂಸ್ಥೆ) ಮತ್ತು ಎಸ್.ಕೆ. ಫರ್ಹಾನ್ ಉದ್ದೀನ್ (ಬಿಷ್ಣುಪುರ್ ಸರ್ ರಮೇಶ್ ಸಂಸ್ಥೆ)
*ರಾಷ್ಟ್ರೀಯ ಟಿಂಕರಿಂಗ್ ಮತ್ತು ಇಂಜಿನಿಯರಿಂಗ್ ಪ್ರಶಸ್ತಿಗಳು:*
ಮೊದಲ ಸ್ಥಾನ: ಧೃಬಜ್ಯೋತಿ ಪೈಕ್ (ಜಾದವ್‌ಪುರ ವಿದ್ಯಾಪೀಠ, ಕೋಲ್ಕತ್ತಾ) ಮತ್ತು ಆದಿತ್ಯ ಮೊಂಡಲ್ (ಜಾದವ್‌ಪುರ ವಿದ್ಯಾಪೀಠ, ಕೋಲ್ಕತ್ತಾ)
2 ನೇ ಸ್ಥಾನ : ಮಾರೋಜು ಹರ್ಷ ವರ್ಧನ್ ಚಾರಿ (ZPHS ನಾಗೋಲ್, ಹೈದರಾಬಾದ್) ಮತ್ತು ಶ್ರೀಕರ್ ಸಾವಂತ್ (ZPHS ನಾಗೋಲ್, ಹೈದರಾಬಾದ್
*ರಾಷ್ಟ್ರೀಯ ಸ್ಟೆಮ್ ಮಾಸ್ಟರ್ ಮೇಕರ್ 2023 ಪ್ರಶಸ್ತಿ*
ಧ್ರುಬಜ್ಯೋತಿ ಪೈಕ್ (ಜಾದವ್‌ಪುರ ವಿದ್ಯಾಪೀಠ, ಕೋಲ್ಕತ್ತಾ)
ಜಿಶನ್ ಬೈದ್ಯ (ಬಿಷ್ಣುಪುರ್ ಸರ್ ರಮೇಶ್ ಸಂಸ್ಥೆ)
*ರಾಷ್ಟ್ರೀಯ ಸ್ಟೆಮ್ ಶಿಕ್ಷಕ ಪ್ರಶಸ್ತಿ:*
ದತ್ತಾತ್ರೇ ರಾಸ್ಕರ್, ಕ್ರಾಂತಿಜ್ಯೋತಿ ಸಾವಿತ್ರಿಬಾಯಿ ಫುಲೆ ಮಾಧ್ಯಮಿಕ ವಿದ್ಯಾಲಯ, ನೈಗಾಂವ್ (ಪುಣೆ)