ಬೆಂಗಳೂರು, (www.thenewzmirror.com) ;
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿ ಜಯ್ ಶಾ ICC (ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ) ಯ ಮುಂದಿನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಹಾಲಿ ಅಧ್ಯಕ್ಷ ಗ್ರೆಗ್ ಬಾರ್ಕ್ಲೇ ಅವರ ಅವಧಿ ನವೆಂಬರ್ ಅಂತ್ಯಕ್ಕೆ ಕೊನೆಗೊಳ್ಳಲಿದ್ದು, ಜಯ್ ಶಾ ಡಿಸೆಂಬರ್ 1 ರಿಂದ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಹಾಲಿ ಅಧ್ಯಕ್ಷ ಗ್ರೆಗ್ ಬಾರ್ಕ್ಲೇ ಮತ್ತೊಂದು ಅವಧಿಗೆ ಸ್ಪರ್ಧಿಸೋದಿಲ್ಲ ಅಂತ ಇತ್ತೀಚೆಗೆ ತಿಳಿಸಿದ್ದರು. ಜುಲೈ 27 ಕ್ಕೆ ICC ಅಧ್ಯಕ್ಷಗಾದಿಗೆ ನಾಮಪತ್ರ ಸಲ್ಲಿಸೋಕೆ ಕೊನೆ ದಿನವಾಗಿತ್ತು. ಜಯ್ ಶಾ ಅವರನ್ನ ಹೊರತು ಪಡಿಸಿದರೆ ಬೇರೆ ಯಾರೂ ನಾಮಪತ್ರ ಸಲ್ಲಿಕೆ ಮಾಡಿರಲಿಲ್ಲ. ಹೀಗಾಗಿ ಶಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಜಯ್ ಶಾ ಅವರಿಗೆ ಕೇವಲ 35 ವರ್ಷ. ಅತ್ಯಂತ ಕಿರಿಯ ವಯಸ್ಸಿಗೆ ICC ಅಧ್ಯಕ್ಷ ಪಟ್ಟಕ್ಕೇರಿದ ಕೀರ್ತಿಗೂ ಜಯ್ ಶಾ ಪಾತ್ರರಾಗಿದ್ದಾರೆ.
ಸದ್ಯ ಬಿಸಿಸಿಐ ಕಾರ್ಯದರ್ಶಿಯಾಗಿದ್ದ ಅವರು ICC ಅಧ್ಯಕ್ಷ ಹುದ್ದೆ ಸ್ವತಂತ್ರ ಹುದ್ದೆ ಆಗಿದ್ದರಿಂದ BCCI ಹಾಗೂ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಅಧ್ಯಕ್ಷರನ್ನು ತ್ಯಜಿಸಬೇಕಾಗುತ್ತದೆ.