ಬೆಂಗಳೂರು, (www.thenewzmirror.com) ;
ಇದೇ ಮೇ 10 ರಂದು ಕರ್ನಾಟಕ ರಾಜ್ಯ ಚುನಾವಣೆ ನಡೆಯಲಿದೆ. ಶತಾಯಗತಾಯ ಶೇಕಡಾ 100 ರಷ್ಟು ಮತದಾನ ಆಗಲೇಬೇಕು ಅಂತ ಚುನಾವಣಾ ಆಯೋಗ ಕಸರತ್ತು ಮಾಡ್ತಿದೆ.
ಇನ್ನು ಚುನಾವಣೆ ದಿನ ರಜೆ ಘೋಷಣೆ ಮಾಡಿ ಮತದಾನ ಮಾಡೋಕೆ ಅವಕಾಶ ಕೊಟ್ಟಿದೆ. ಆದರೆ ರಜೆ ಇದೆ ಅಂತ ಟ್ರಿಪ್ ಗೆ ಹೋಗೋಕೆ ಅದೆಷ್ಟೋ ಜನ ಪ್ಲಾನ್ ಮಾಡಿಕೊಂಡಿದ್ದಾರೆ. ಅಂಥವರಿಗೆ ರಾಜದಯ ಸರ್ಕಾರ ಬಿಗ್ ಶಾಕ್ ಕೊಟ್ಟಿದೆ.
ಮೇ 10ರಂದು ಅಂದು ಸರ್ಕಾರಿ ಕಚೇರಿ, ಖಾಸಗಿ ಕಚೇರಿಗಳಲ್ಲಿ ಉದ್ಯೋಗಿಗಳಿಗೆ ವೇತನ ಸಹಿತ ರಜೆ ನೀಡಲಾಗುತ್ತಿದ್ದು, ರಜೆಯೆಂದು ಹೊರಗಡೆ ಸುತ್ತಾಡಲು, ಪ್ರವಾಸಕ್ಕೆ ಹೋಗಿ ಮತದಾನ ಮಾಡುವುದನ್ನು ತಪ್ಪಿಸುವುದು ಬೇಡವೆಂದು ಸರ್ಕಾರ ಹೊಸ ಮಾರ್ಗೋಪಾಯ ಕಂಡುಕೊಂಡಿದೆ.
ಅಂದು ಬಹುತೇಕ ಪ್ರವಾಸಿ ತಾಣಗಳು ಬಂದ್ ಆಗಲಿವೆ. ಪ್ರವಾಸಿ ತಾಣಗಳು ಮಾತ್ರವಲ್ಲದೆ ಹೊಟೇಲ್‍ಗಳು, ರೆಸಾರ್ಟ್‍ಗಳಲ್ಲಿ ಸಹ ಮೇ 10ರಂದು ಬುಕ್ಕಿಂಗ್ ಗೆ ಅವಕಾಶವಿರುವುದಿಲ್ಲ. ಕಡ್ಡಾಯವಾಗಿ ಮತದಾರರು ಅಂದು ತಮ್ಮ ಹಕ್ಕು ಚಲಾಯಿಸಬೇಕೆಂಬುದು ಚುನಾವಣಾ ಆಯೋಗದ ಉದ್ದೇಶವಾಗಿದೆ.
ಜನರು ಮತ ಚಲಾಯಿಸಿ ಬಂದು ಹೊಟೇಲ್, ರೆಸಾರ್ಟ್ ಬುಕ್ಕಿಂಗ್ ಮಾಡಿದರೆ ವಿಶೇಷ ರಿಯಾಯಿತಿ ನೀಡಲು ಅನೇಕ ಸಂಸ್ಥೆಗಳು, ಪ್ರವಾಸಿ ತಾಣಗಳು, ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳು ಮುಂದಾಗಿವೆ. ಆಯಾ ಜಿಲ್ಲಾಗಳಲ್ಲಿ ಪ್ರವಾಸಿ ತಾಣಗಳನ್ನು ಮೇ 10ರಂದು ಮುಚ್ಚುವಂತೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಜೋಗ್ ಫಾಲ್ಸ್‌ಅನ್ನು ಮೇ 10ರಂದು ಮುಚ್ಚಲಾಗುತ್ತದೆ.
ಮೇ 10ರಂದು ಮೃಗಾಲಯಗಳನ್ನು ಮುಚ್ಚಲಾಗುವುದು ಎಂದು ಕರ್ನಾಟಕ ಮೃಗಾಲಯ ಪ್ರಾಧಿಕಾರ ತಿಳಿಸಿದೆ. ಮೈಸೂರು ಮೃಗಾಲಯವು ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸುತ್ತದೆ, ಬನ್ನೇರುಘಟ್ಟ ಜೈವಿಕ ಉದ್ಯಾನವನವನ್ನು ಮುಚ್ಚಿ ಸಿಬ್ಬಂದಿಗೆ ಮತದಾನ ಮಾಡಲು ಅನುವು ಮಾಡಿಕೊಡುತ್ತದೆ.
ಮೇ 10ರಂದು ರಜಾದಿನವೆಂದು ಜನರು ಭಾವಿಸಿ ಸುತ್ತಾಡಲು ಹೋಗುವುದು, ಪ್ರವಾಸಕ್ಕೆ ಹೋಗುವುದು ಮಾಡಬಾರದು. ಆ ದಿನ ಬುಕ್ಕಿಂಗ್ ಮಾಡಿಕೊಳ್ಳದಂತೆ ನಾವು ಹೇಳುತ್ತೇವೆ. ನಮ್ಮ ಸಿಬ್ಬಂದಿಗಳು ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕೆಂಬುದು ನಮ್ಮ ಉದ್ದೇಶ ಎಂದು ಕೆಎಸ್ ಟಿಡಿಸಿ ಅಧಿಕಾರಿಗಳು ಹೇಳುತ್ತಾರೆ.