Fastag problem | ನಿಮ್ಮ ವಾಹನಕ್ಕೆ Paytm ಬ್ಯಾಂಕ್ ಫಾಸ್ಟ್ ಟ್ಯಾಗ್ ಇದ್ಯಾ .? NHAI ಕೊಟ್ಟಿದೆ ಶಾಕಿಂಗ್ ನ್ಯೂಸ್.!

ಬೆಂಗಳೂರು, (www.thenewzmirror.com) :

ಪೇಟಿಯಂ ಬ್ಯಾಂಕ್ ನ ಫಾಸ್ಡ್ ಟ್ಯಾಗ್ ಹೊಂದಿರುವ ವಾಹನ ಮಾಲೀಕರಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸೂಚನೆಯೊಂದನ್ನು ನೀಡಿದೆ.

RELATED POSTS

ಪೇಟಿಎಂ ಬ್ಯಾಂಕ್‌ನಿಂದ ಫಾಸ್ಟ್ಯಾಗ್‌ ಖರೀದಿಸಿರುವ ಹೆದ್ದಾರಿ ಬಳಕೆದಾರರು ಮಾರ್ಚ್‌ 15ರೊಳಗೆ ಬೇರೆ ಬ್ಯಾಂಕ್‌ಗಳಿಂದ ಫಾಸ್ಟ್ಯಾಗ್‌ ಖರೀದಿಸುವುದು ಒಳಿತು. ಇದರಿಂದ ಟೋಲ್ ಪ್ಲಾಜಾಗಳಲ್ಲಿ ತೊಂದರೆ ಅನುಭವಿಸುವುದು ತಪ್ಪಲಿದೆ ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ತಿಳಿಸಿದೆ.

ಇತರೆ ಬ್ಯಾಂಕ್‌ಗಳಿಂದ ಫಾಸ್ಟ್ಯಾಗ್‌ ಖರೀದಿಸಿದರೆ ಹೆದ್ದಾರಿಗಳಲ್ಲಿ ಪ್ರಯಾಣಿಸುವ ವೇಳೆ ದಂಡ ಅಥವಾ ಎರಡು ಬಾರಿ ಹಣ ಪಾವತಿಯಂತಹ ಸಮಸ್ಯೆ ಎದುರಾಗುವ ಪ್ರಮೇಯವೇ ಉದ್ಭವಿಸುವುದಿಲ್ಲ ಎಂದು ಇದೇ ವೇಳೆ NHAI ಹೇಳಿದೆ. 

ಮಾರ್ಚ್‌ 15ರ ಬಳಿಕ ಎಲ್ಲ ಬಗೆಯ ಸೇವೆಗಳನ್ನು ಸ್ಥಗಿತಗೊಳಿಸುವಂತೆ ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ ಲಿಮಿಟೆಡ್‌ಗೆ (ಪಿಪಿಬಿಎಲ್‌) ಭಾರತೀಯ ರಿಸರ್ವ್‌ ಬ್ಯಾಂಕ್‌ ಸೂಚಿಸಿತ್ತು. ಈ ಗಡುವಿನ ಬಳಿಕ ಪೇಟಿಎಂ ಬಳಕೆದಾರರ ಖಾತೆಗಳು, ಪ್ರೀಪೇಯ್ಡ್‌ ಪೇಮೆಂಟ್‌, ವ್ಯಾಲೆಟ್‌ ಮತ್ತು ಫಾಸ್ಟ್ಯಾಗ್‌ಗಳಿಗೆ ಯಾವುದೇ ಠೇವಣಿ ಅಥವಾ ಟಾಪ್‌ ಅಪ್‌ಗಳನ್ನು ಸ್ವೀಕರಿಸುವಂತಿಲ್ಲ ಎಂದು ಸೂಚಿಸಿದೆ. 

ಆದರೆ ಉಳಿತಾಯ ಖಾತೆ, ಚಾಲ್ತಿ ಖಾತೆ, ಪ್ರಿಪೇಯ್ಡ್, ಫಾಸ್ಟ್ಯಾಗ್‌, ರಾಷ್ಟ್ರೀಯ ಸಾಮಾನ್ಯ ಮೊಬಿಲಿಟಿ ಕಾರ್ಡ್‌ನಲ್ಲಿ ಇರುವ ಬಾಕಿ ಹಣ ಹಿಂಪಡೆಯಲು ಅಥವಾ ಬಳಸುವುದಕ್ಕೆ ಈ ಗಡುವಿನ ನಂತರವೂ ಪೇಟಿಎಂ ಬ್ಯಾಂಕ್‌ ಬಳಕೆದಾರರಿಗೆ ಅನುಮತಿ ನೀಡಲಾಗಿದೆ ಎಂದು ಆರ್‌ಬಿಐ ಸ್ಪಷ್ಟಪಡಿಸಿದೆ.

ಹೆದ್ದಾರಿ ಬಳಕೆದಾರರು ತಮ್ಮ ಖಾತೆಯಲ್ಲಿ ಉಳಿದಿರುವ ಬಾಕಿ ಹಣವನ್ನು ಟೋಲ್‌ ಪಾವತಿಗೂ ಬಳಸಬಹುದಾಗಿದೆ ಎಂದು ತಿಳಿಸಿದೆ.

‘ಭಾರತೀಯ ಹೆದ್ದಾರಿ ನಿರ್ವಹಣಾ ಕಂಪನಿಯ (ಐಎಚ್‌ಎಂಸಿಎಲ್) ವೆಬ್‌ಸೈಟ್‌ನಲ್ಲಿಯೂ ಓದುಗರ ಪ್ರಶ್ನೆಗಳಿಗೆ ಉತ್ತರಿಸಲಾಗಿದೆ. ಇಲ್ಲಿಯೂ ಪರಿಶೀಲಿಸಬಹುದಾಗಿದೆ’ ಎಂದು ಹೆದ್ದಾರಿ ಪ್ರಾಧಿಕಾರ ತಿಳಿಸಿದೆ. 

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist