ಬೆಂಗಳೂರು, ( www.thenewzmirror.com) :
ಇತ್ತೀಚಿಗೆ ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಕಿಡಿಗೇಡಿಗಳ ಹುಚ್ಚಾಟ ಹೆಚ್ಚಾಗುತ್ತಿದ್ದು, ಯುವಕನ ಹುಚ್ಚಾಟಕ್ಕೆ ಅರ್ಧ ಗಂಟೆ ಮೆಟ್ರೋ ಸೇವೆ ಸ್ಥಗಿತಗೊಂಡ ಘಟನೆ ಮಂಗಳವಾರ ನಡೆದಿದೆ.
ಮಂಗಳವಾರ ಮಧ್ಯಾಹ್ನ ಜ್ಞಾನಭಾರತಿ ಸ್ಟೇಷನ್ನಿಂದ ಪಟ್ಟಣಗೆರೆ ಸ್ಟೇಷನ್ ನಡುವೆ ಮೆಟ್ರೋ ಹಳಿಯಲ್ಲಿ ಯುವಕ ಕಾಣಿಸಿಕೊಂಡಿದ್ದು, ಮೈಸೂರು ರಸ್ತೆ ನಿಲ್ದಾಣದಿಂದ ಚಲ್ಲಘಟ್ಟ ನಡುವಿನ ನೇರಳೆ ಮಾರ್ಗದಲ್ಲಿ ಸುಮಾರು ಅರ್ಧ ಗಂಟೆ ಮೆಟ್ರೋ ಸೇವೆ ಸ್ಥಗಿತಗೊಳಿಸಲಾಗಿದೆ.
ಹಳಿ ಮೇಲೆ ಯುವಕನ ಓಡಾಟವನ್ನು ಗಮನಿಸಿದ ಅಧಿಕಾರಿಗಳು ಕೂಡಲೇ ಮೆಟ್ರೋ ಸೇವೆಯನ್ನು ಸ್ಥಗಿತಗೊಳಿಸಿದ್ದಾರೆ. ಮೆಟ್ರೋ ಹಳಿಗಳ ಬಳಿ ಹೈವೊಲ್ಟೇಜ್ ವಿದ್ಯುತ್ ಇರುವುದರಿಂದ ಪವರ್ ಆಫ್ ಮಾಡಿಸಿ ಮದ್ಯಾಹ್ನ 3 ಗಂಟೆಯಿಂದ 3.27 ರವರೆಗೆ ಮೆಟ್ರೋ ಸೇವೆ ಸ್ಥಗಿತಗೊಳಿಸಲಾಗಿತ್ತು.