ಬೆಂಗಳೂರು, (www.thenewzmirror.com) :
ಲೋಕಸಭೆ ಟಿಕೆಟ್ ವಿಚಾರದಲ್ಲಿ ಕಠಿಣ ನಿರ್ಧಾರ ಕೈಗೊಂಡ ಪರಿಣಾಮ ತನ್ನ ಸಹೋದರನ ಸಂಬಂಧವನ್ನೇ ಕಡಿದುಕೊಂಡಿದ್ದಾರೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್ ಅಧ್ಯಕ್ಷೆ ಮಮತಾ ಬ್ಯಾನರ್ಜಿ.
ತಮ್ಮ ಸಹೋದರ ಬಬುನ್ ಬ್ಯಾನರ್ಜಿಯೊಂದಿಗಿನ ಎಲ್ಲಾ ಸಂಬಂಧವನ್ನು ಕಡಿದುಕೊಂಡಿದ್ದಾರೆ. ಹೌರಾ ಲೋಕಸಭಾಕ್ಷೇತ್ರ ಅಭ್ಯರ್ಥಿ ಆಯ್ಕೆಯೇ ಇದಕ್ಕೆ ಕಾರಣವೆನ್ನಲಾಗುತ್ತಿದೆ.
ಹೌರಾ ಲೋಕಸಭಾ ಕ್ಷೇತ್ರದಿಂದ ಬ್ಯಾನರ್ಜಿ ಪ್ರಸುನ್ ಬ್ಯಾನರ್ಜಿಗೆ ಸ್ಪರ್ಧಿಸಲು ಆಯ್ಕೆಯಾಗಿದ್ದರು. ಇದರ ಬೆನ್ನಲ್ಲೇ ಮಮತಾ ಸಹೋದರ ಬಬುನ್ ಬ್ಯಾನರ್ಜಿ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಅಸಮಧಾನ ಹೊರಹಾಕಿದ್ದರು. ಪ್ರಸ್ತುತ ಆಯ್ಕೆಯಾಗಿರುವ ಅಭ್ಯರ್ಥಿ ನನಗೆ ಸರಿಕಾಣುವುದಿಲ್ಲ. ಪ್ರಸುನ್ ಬ್ಯಾನರ್ಜಿ ಸರಿಯಾದ ಆಯ್ಕೆಯಲ್ಲ. ಅವರನ್ನು ಹೊರತುಪಡಿಸಿ ಅನೇಕ ಯೋಗ್ಯ ಅಭ್ಯರ್ಥಿಗಳಿದ್ದರು ಎಂದು ತಮ್ಮ ಅಸಮಾಧಾನ ಹೊರಹಾಕಿದ್ದರು. ಜೊತೆಗೆ ತಾವು ಹೌರಾದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಬಗ್ಗೆ ಮಾಹಿತಿ ನೀಡಿದ್ದರು.
ಟಿಕೆಟ್ ಸಿಗದ ಹಿನ್ನಲೆಯಲ್ಲಿ ಅಸಮಧಾನ ಹೊರಹಾಕಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಮತಾ ಬ್ಯಾನರ್ಜಿ, ಪ್ರತಿ ಚುನಾವಣೆಯ ಮುಂಚೆ ಸಮಸ್ಯೆ ಸೃಷ್ಟಿಸುವ ದುರಾಸೆ ಬುದ್ಧಿಯ ಜನ ನನಗೆ ಇಷ್ಟವಾಗುವುದಿಲ್ಲ. ಬಬುನ್‌ಗೆ ಟಿಕೆಟ್ ಕೊಡಿಸಬಲ್ಲ ಕುಟುಂಬ ರಾಜಕಾರಣದಲ್ಲಿ ನನಗೆ ನಂಬಿಕೆಯಿಲ್ಲ. ಹಾಗಾಗಿ ಅವನೊಂದಿಗೆ ನನ್ನ ಎಲ್ಲಾ ಸಂಬಂಧಗಳನ್ನು ಕಡಿದುಕೊಳ್ಳುತ್ತಿದ್ದೇನೆ ಎಂದರು.
ಬಬುನ್ ಬ್ಯಾನರ್ಜಿ ಬಿಜೆಪಿ ಸೇರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಅವನಿಗೆ ಇಷ್ಟವಾಗಿದ್ದನ್ನು ಮಾಡಲಿ. ಪಕ್ಷ ತನ್ನ ಅಧಿಕೃತ ಅಭ್ಯರ್ಥಿ ಪ್ರಸುನ್ ಪರವಾಗಿದೆ ಎಂದಿ ಮಮತಾ ಅಭಿಪ್ರಾಯ ಪಟ್ಟಿದ್ದರು.
ಈ ಹಿಂದೆ ಕರೋನಾದ ಸಮಯದಲ್ಲೂ ಬಬುನ್ ಕರೋಮಾ ನಿಯಮ ಉಲ್ಲಂಘಿಸಿದ್ದರು. ಇದರಿಂದ ಇವರಿಬ್ಬರ ನಡುವೆ ಬಿರುಕು ಮೂಡಿತ್ತು.