ಬೆಂಗಳೂರು, (www.thenewzmirror.com) ;
ಗಣಪತಿ ಹಬ್ಬ ಹಬ್ಬ ಬರ್ತಿದೆ. ಹಬ್ಬಕ್ಕೆ ಯಾವ ರೀತಿ ಗಣಪತಿ ಮೂರ್ತಿ ಕೂರಿಸೋಣ ಅನ್ನೋ ಆಲೋಚನೆ ಒಂದು ಕಡೆಯಾದ್ರೆ ಮತ್ತೊಂದ್ಕಡೆ ವೀಕೆಂಡ್ ನಲ್ಲಿ ಹಬ್ಬ ಬಂದಿದ್ದು ಎಲ್ಲಿಗೆ ಟ್ರಿಪ್ ಗೆ ಹೋಗೋಣ ಅಂತ ಪ್ಲಾನ್ ಮಾಡ್ತಿರೋದು ಮತ್ತೊಂದು ಕಡೆ ಇದೆಲ್ಲದ್ರ ನಡುವೆ ಆಹಾರ ಪ್ರಿಯರಿಗೆ ಯಾವ ಹೊಟೇಲ್ ನಲ್ಲಿ ಹಬ್ಬಕ್ಕೆ ಏನೇನ್ ಸ್ಪೇಷಲ್ ಅಡುಗೆ ಮಾಡಿರ್ತಾರೆ ಅನ್ನೋ ಆಲೋಚನೆ ಮಾಡುತ್ತಿರುತ್ತಾರೆ.
ಹೊಟೇಲ್ ವೆಂಕಟಾದ್ರಿ ಈ ಗಣೇಶ ಹಬ್ಬದ ಸಂತೋಷವನ್ನು ಮತ್ತಷ್ಟು ಹೆಚ್ಚಿಸಲು ಸಿದ್ಧವಾಗಿದೆ. ಗಿರಿನಗರ 60 ಅಡಿ ರಸ್ತೆಯಲ್ಲಿರುವ ತನ್ನ ಶಾಖೆಯಲ್ಲಿ ಸೆಪ್ಟೆಂಬರ್ 7ರಂದು ಮಧ್ಯಾಹ್ನ 12 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ವಿಶೇಷ ಹಬ್ಬದ ಊಟವನ್ನು ಆಯೋಜಿಸಿದೆ. “ಸವಿಯೋಣ @ ನಮ್ಮ ಹೊಟೇಲ್ ವೆಂಕಟಾದ್ರಿ” ಎಂಬ ಶೀರ್ಷಿಕೆಯಡಿಯಲ್ಲಿ ಹಬ್ಬದೂಟ ಆಯೋಜಿಸಿದೆ.
ಕೇವಲ 229 ರೂ.ಗೆ ಹಬ್ಬದೂಟದ ವ್ಯವಸ್ಥೆ ಮಾಡಿರುವ ಹೊಟೇಲ್ ವೆಂಕಟಾದ್ರಿ, ತನ್ನ ವಿಶಿಷ್ಟತೆ ಮತ್ತು ಆಹಾರದ ಗುಣಮಟ್ಟದಿಂದ ಗಮನಸೆಳೆಯುತ್ತಿದೆ. “ಮೊದಲ 200 ಜನರಿಗೆ ಮಾತ್ರ ಈ ಹಬ್ಬದೂಟದ ವ್ಯವಸ್ಥೆ” ಎಂದು ಘೋಷಿಸಿದ್ದು, ಅನ್ ಲಿಮಿಟೆಡ್ ಫುಡ್ ಅನ್ನು 229 ರೂ.ಗಳಿಗೆ ಒದಗಿಸುತ್ತಿದೆ. ಅಯ್ಯೋ ಹಬ್ಬದೂಟ ಅಲ್ವಾ ಅಂಥ ಹೆಚ್ಚಿನ ಮೆನ್ಯು ಇರೋದಿಲ್ಲ ಅಂತ ಅಂದುಕೊಳ್ಳುವವರು ಮೆನ್ಯು ಒಮ್ಮೆ ನೋಡಿದ್ರೆ ಅಚ್ಚರಿ ಪಡೋದಂತೂ ಸತ್ಯ. ಯಾಕಂದ್ರೆ ಈ ಹಬ್ಬದ ಊಟದಲ್ಲಿ 20ಕ್ಕೂ ಹೆಚ್ಚು ಬಗೆಯ ಪದಾರ್ಥಗಳನ್ನು ಸೇರಿಸಲಾಗಿದೆ. ಇನ್ನೊಂದು ವಿಶೇಷ ಅಂದ್ರೆ ಈ ಹೊಟೇಲ್ ನಲ್ಲಿ ಸಿದ್ದವಾಗುವ ಸೌತ್ ಇಂಡಿಯನ್, ನಾರ್ತ್ ಇಂಡಿಯನ್ ಹಾಗೂ ಚೈನಿಸ್ ಫುಡ್ ನಲ್ಲಿ ಯಾವುದೇ ಕೆಮಿಕಲ್ ಅಥವಾ ಬಣ್ಣದ ಪೌಡರ್ ಬಳಸುವುದಿಲ್ಲ, ಇದರಿಂದಾಗಿ ಆಹಾರ ರುಚಿಯಾಗಿದ್ದು, ಶುಚಿಯಾಗಿಯೂ ಆಹಾರ ಪ್ರಿಯರಿಗೆ ನೀಡುತ್ತಿದೆ.
ಮೆನ್ಯೂ ಹೈಲೈಟ್ಸ್:
- ಗಣಪತಿಗೆ ಇಷ್ಟವಾದ ಕಡಬು (ಸಿಹಿ ಮತ್ತು ಕಾರ)
- ಎಳ್ಳುಂಡೆ ಮತ್ತು ತಂಬಿಟ್ಟು
- ಹೋಳಿಗೆ ಮತ್ತು ತುಪ್ಪ
- ಪಾಯಸ
- ಎರಡು ಬಗೆಯ ಪಲ್ಯ, ಕೋಸಂಬರಿ
- ಬಜ್ಜಿ, ಸಂಡಿಗೆ
- ಅಕ್ಕಿ ರೊಟ್ಟಿ
- ವೆಜ್ ಪಲಾವ್ ಮತ್ತು ವೆಜ್ ಕುರ್ಮ
- ರೈತ, ಪುಳಿಯೊಗರೆ, ಮ್ಯಾಗೋ ರೈಸ್, ವೈಟ್ ರೈಸ್, ಅನ್ನ
- ಸಾಂಬಾರ್, ರಸಂ, ಮೊಸರು
- ಬಾಳೆಹಣ್ಣು, ಐಸ್ ಕ್ರೀಂ, ಬೀಡಾ
- ನೀರಿನ ಬಾಟಲ್
ಈ ಎಲ್ಲಾ ತಿನಿಸುಗಳನ್ನು ಬಾಳೆ ಎಲೆಯಲ್ಲಿ ನೀಡಲಾಗುತ್ತದೆ, ಇದರಿಂದ ತಿನಿಸಿನ ರುಚಿ ಇನ್ನಷ್ಟು ಹೆಚ್ಚಿಸಲಿದೆ.
ಪಾರ್ಸಲ್ ವ್ಯವಸ್ಥೆ:
ಗೌರಿ ಗಣೇಶ ಹಬ್ಬದ ಭರ್ಜರಿ ಹಬ್ಬದೂಟದ ಮತ್ತೊಂದು ವಿಶೇಷ ಅಂದ್ರೆ ಹಬ್ಬದೂಟ ಪಾರ್ಸೆಲ್ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಹಬ್ಬದೂಟ ಪಾರ್ಸಲ್ ನೀಡ್ತಿರೋ ಬೆಂಗಳೂರಿನ ಏಕೈಕ ಹೊಟೇಲ್ ಎನ್ನುವ ಖ್ಯಾತಿಗೆ ಹೊಟೇಲ್ ವೆಂಕಟಾದ್ರಿ ಪಾತ್ರವಾಗಲಿದೆ. ಪಾರ್ಸಲ್ ಗೆ ಅಂತ ಪಾರ್ಸಲ್ ಚಾರ್ಜ್ ಕೊಡಬೇಕಷ್ಟೇ.
VN R ಪಾರ್ಟಿ ಹಾಲ್:
ಹೋಟೇಲ್ ವೆಂಕಟಾದ್ರಿಗೆ ಹೊಂದಿಕೊಂಡಂತೆ ವಿಎನ್ ಆರ್ ಪಾರ್ಟಿ ಹಾಲ್ ಇರುವುದು ಮತ್ತೊಂದು ವಿಶೇಷ. ಗಿರಿನಗರ 60 ಅಡಿ ರಸ್ತೆಯಲ್ಲಿ ಸುಸಜ್ಜಿತವಾದ ಪಾರ್ಟಿ ಹಾಲ್ ಕೊರತೆ ಇತ್ತು. ಅದು ಇದೀಗ ನಿವಾರಣೆ ಆಗಿದ್ದು, ಅದೇ ಪಾರ್ಟಿ ಹಾಲ್ ನಲ್ಲೇ ಗೌರಿ ಗಣೇಶ ಹಬ್ಬದ ಭೋಜನ ಸವಿಯೋಕೆ ಅವಕಾಶ ಕಲ್ಪಿಸಲಾಗಿದೆ.
ಯಾವುದೇ ರಸಾಯನಿಕ ಪದಾರ್ಥ ಬಳಸದೆ ಸಿದ್ದವಾಗುವ ಗೌರಿ ಗಣೇಶ ಹಬ್ಬದ ಊಟವನ್ನ ಸವಿಬೇಕು ಅನ್ನುವ ಆಹಾರ ಪ್ರಿಯರು 9945782534 ಸಂಖ್ಯೆಗೆ ಸಂಪರ್ಕಿಸಿ ತಮ್ಮ ಸೀಟುಗಳನ್ನ ಬುಕ್ ಮಾಡಬಹುದಾಗಿದೆ.