ಬೆಂಗಳೂರು, (www.thenewzmirror.com) ;
ಬಾಲಿವುಡ್ ಕಿಂಗ್ ಖಾನ್, ಬಾಲಿವುಡ್ ಬಾದ್ ಷಾ ಅಂದ್ರೆ ಶಾರುಖ್ ಖಾನ್, ಸದ್ಯ ಬಾಲಿವುಡ್ ನಲ್ಲಿರೋ ಅಂತ್ಯತ ಸ್ಟಾರ್ ನಟರ ಪೈಕಿ ಮುಂಚೂಣಿಯಲ್ಲಿ ನಿಲ್ತಾರೆ. ಕಳೆದ ಹಲವು ದಶಕಗಳಿಂದ ಬಾಲಿವುಡ್ ನ ಕಿಂಗ್ ಆಗಿರುವ ಎಸ್ ಆರ್ ಕೆ ಸಾವಿರಾರು ಕೋಟಿಯ ಆಸ್ತಿಯನ್ನೂ ಹೊಂದಿದ್ದಾರೆ.
ಶಾರುಖ್ ಖಾನ್ ಅವರು ಇಷ್ಟೆಲ್ಲ ಸಾಧನೆ ಮಾಡಿದ್ದು ಸ್ವಂತ ಶ್ರಮದಿಂದ ಅನ್ನೋದು ಎಲ್ಲರಿಗೂ ತಿಳಿದಿರೋ ವಿಚಾರವೇ. ಸಿನೆಮಾ ಇಂಡಸ್ಟ್ರಿಗೂ ಬರುವ ಮೊದಲು ಝಿರೋ ಆಗಿದ್ದ ಶಾರುಖ್ ಖಾನ್ ಇದೀಗ ಸೂಪರ್ ಸ್ಟಾರ್ ಆಗಿ ಬೆಳೆದಿದ್ದಾರೆ.
https://www.instagram.com/reel/C9sH-tTtSXJ/?igsh=MWFwNmNzZWVnN2ZhcQ==
ಶಾರುಖ್ ಖಾನ್ ಅವರ ಬಳಿ ನೂರಾರು ಅವಾರ್ಡ್ಗಳು ಕೂಡ ಇವೆ. ಅಚ್ಚರಿ ವಿಷಯ ಎಂದರೆ ಈ ಪೈಕಿ ಕೆಲ ಅವಾರ್ಡ್ಗಳನ್ನು ಅವರು ಖರೀದಿ ಮಾಡಿದ್ರಾ ಅನ್ನೋದು..!
ಈ ವಿಚಾರ ಗೊತ್ತಾಗಿದ್ದು ಒಂದು ಅವಾರ್ಡ್ ಫಂಕ್ಷನ್ ನಲ್ಲಿ. ಈ ಕಾರ್ಯಕ್ರಮದಲ್ಲಿ ವಿದ್ಯಾ ಬಾಲನ್ ಅವರ ಕಾಲೆಳೆಯೋ ಪ್ರಯತ್ನ ಮಾಡಿದ ಶಾರುಖ್, ನಿಮ್ಮ ಬಳಿ ಎಷ್ಟು ಅವಾರ್ಡ್ ಇದೆ ಎಂದು ನಟಿ ವಿದ್ಯಾ ಬಾಲನ್ ಅವರನ್ನ ಕೇಳ್ತಾರೆ.
ಎಂದು ಶಾರುಖ್ ಖಾನ್ ಅವರು ವಿದ್ಯಾ ಬಾಲನ್ ಅದಕ್ಕೆ ಉತ್ತರಿಸಿದ ವಿದ್ಯಾ ಬಾಲನ್, ನನ್ನ ಬಳಿ 47 ಎಂದು ಉತ್ತರ ಕೊಡ್ತಾರೆ.. ಇದಕ್ಕೆ ಶಾರುಖ್, ಓಹ್ 47 ಎಂದು ಉದ್ಘರಿಸುತ್ತಾರೆ.
ಇದಾದ ಬಳಿಕ ವಿದ್ಯಾ ಶಾರುಖ್ ಗೆ ಮರು ಪ್ರಶ್ನೆ ಮಾಡ್ತಾರೆ. ನಿಮ್ಮ ಬಳಿ ಎಷ್ಟು ಅವಾರ್ಡ್ಗಳು ಇವೆ ಎಂದು ವಿದ್ಯಾ ಅವರು ಶಾರುಖ್ಗೆ ಕೇಳುತ್ತಾರೆ. ಇದಕ್ಕೆ ಉತ್ತರಿಸಿದ ಶಾರುಖ್ ಖಾನ್ ಅವರು ಹೆಮ್ಮೆಯಿಂದ 155 ಎಂದರು. ಇದರಲ್ಲಿ ಖರೀದಿ ಮಾಡಿದ್ದೆಷ್ಟು ಎಂದು ವಿದ್ಯಾ ನೇರವಾಗಿ ಪ್ರಶ್ನೆ ಮಾಡಿದರು. ಇದನ್ನು ಕೇಳಿ ಶಾರುಖ್ ಖಾನ್ ಅವರು ನಿಜಕ್ಕೂ ಶಾಕ್ ಆಗುತ್ತಾರೆ. ಈ ವಿಚಾರವನ್ನ ವಿದ್ಯಾ ಬಾಲನ್ ಅವರು ಎಕ್ಸ್ಪೋಸ್ ಮಾಡಿದ್ದಾರೆ.