ಬೆಂಗಳೂರು, (www.thenewzmirror.com) ;
ಇನ್ಮುಂದೆ ಯಾರಾದರೂ ಬೆಟ್ಟ ಕಡಿದೆ 1 ಕೋಟಿವರೆಗೂ ದಂಡ ಕಟ್ಟಬೇಕಾಗುತ್ತೆ ಅಂತ ಗೋವಾ ಸರ್ಕಾರ ಮಹತ್ವದ ಆದೇಶ ಮಾಡಿದೆ. ರಾಜ್ಯದಲ್ಲಿ ಕಳೆದ ಆರು ತಿಂಗಳಿನಿಂದ ಬೆಟ್ಟ ಕಡಿಯೋಕೆ ಅನುಮತಿ ನೀಡಿಲ್ಲ. ಒಂದು ವೇಳೆ ಅದನ್ನ ಮೀರಿ ಯಾರಾದ್ರೂ ಮುಂದಾದರೆ ಅಂಥವರ ವಿರುದ್ಧ ಈ ಕ್ರಮ ಅಂತಾನೂ ಸ್ಪಷ್ಟಪಡಿಸಿದೆ.
ವಯನಾಡು, ಶಿರೂರು ಘಟನೆ ಬಳಿಕ ಎಚ್ಚೆತ್ತ ಗೋವಾ ಸರ್ಕಾರ ಪರಿಸರ ಸೂಕ್ಷ್ಮ ಪ್ರದೇಶಗಳು, ಬೆಟ್ಟ, ಗುಡ್ಡಗಳ ಕಡಿಯುವುದನ್ನು ತಡೆಗಟ್ಟಲು ಗೋವಾ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಬೆಟ್ಟ ಕಡಿಯುವುದು ಅಥವಾ ಅಂತಹ ಅಕ್ರಮ ಚಟುವಟಿಕೆಗಳ ಮೂಲಕ ನಿಯಮ ಉಲ್ಲಂಘಿಸಿದರೆ ₹1 ಲಕ್ಷದಿಂದ ₹1 ಕೋಟಿ ವರೆಗೂ ದಂಡ ವಿಧಿಸಲು ನಿಯಮದಲ್ಲಿ ತಿದ್ದುಪಡಿ ತರಲಾಗುವುದು ಎಂದು ಸರ್ಕಾರ ಮಾಹಿತಿ ನೀಡಿದೆ.
ಅಷ್ಟಕ್ಕೂ ಸರ್ಕಾರ ಈ ಸ್ಪಷ್ಟನೆ ನೀಡೋದಕ್ಕೂ ಒಂದು ಕಾರಣವಿದೆ. ರಿಯಲ್ ಎಸ್ಟೇಟ್ ಸಂಸ್ಥೆ ರೀಸ್ ಮಾಗೋಸ್ ಪಣಜಿ ಬಳಿ ಇರುವ ಗ್ರಾಮದ ಇಳಿಜಾರು ಬೆಟ್ಟದಲ್ಲಿ ಕಟ್ಟಡ ನಿರ್ಮಿಸಿದ ಘಟನೆ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಈ ಕುರಿತು ಮಾಹಿತಿ ನೀಡುವ ವಿಚಾರದ ವೇಳೆ ಸರ್ಕಾರ ಸ್ಪಷ್ಟೀಕರಣ ಕೊಟ್ಟಿದೆ.