ಬೆಂಗಳೂರು, (www.thenewzmirror.com) ;
KSRTC ಗೆ ನೂತನ ಉಪಾಧ್ಯಕ್ಷರ ನೇಮಕವಾಗಿದೆ. ಗುರಪ್ಪನ ಪಾಳ್ಯ ವಾರ್ಡ್ ನಿಂದ ಬೆಂಗಳೂರು ಮಹಾನಗರ ಪಾಲಿಕೆ ಸದಸ್ಯರಾಗಿದ್ದ ಮೊಹಮ್ಮದ್ ರಿಜ್ವಾನ್ ನವಾಬ್ ಅವರು ಇಂದು ಉಪಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು. ಈ ಸಂದರ್ಭದಲ್ಲಿ
ನಿಗಮದ ಎಂಡಿ ಅನ್ಬು ಕುಮಾರ್ ಸೇರಿಸಂತೆ ಹಿರಿಯ ಅಧಿಕಾರಿಗಳು ಹಾಜರಿದ್ದು ಶುಭಕೋರಿದ್ರು.
ಮಹಮ್ಮದ್ ರಿಜ್ವಾನ್ ನವಾಬ್ ಬಿಬಿಎಂಪಿಯ ಆಡಳಿತ ಪಕ್ಷದ ನಾಯಕರಾಗಿ ಕಾರ್ಯನಿರ್ವಹಣೆ ಮಾಡಿದ್ದರು. ಇವರ ಸಮಯದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಉತ್ತಮ ನಿರ್ಣಯಗಳನ್ನ ಕೈಗೊಂಡಿತ್ತು.