ಶಿವಮೊಗ್ಗ, (www.thenewzmirror.com) :
ರಾಜ್ಯದಲ್ಲಿ ಲೋಕಸಭಾ ಕಾವು ಏರುತ್ತಿದೆ. ಅದರಲ್ಲೂ ಬಿಜೆಪಿ ಪಟ್ಟಿ ಬಿಡುಗಡೆಯಾದ ಮೇಲೆ ಆರೋಪ ಪ್ರತ್ಯಾರೋಪ ಕೊಂಚಜೋರಾಗೇ ಇದೆ. ರಾಜ್ಯದಲ್ಲಿ 20 ಲೋಕಸಭಾ ಕ್ಷೇತ್ರಗಳಿಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೊಷಣೆ ಮಾಡಿದ್ದು, ಸದ್ಯ ಕೆಲವು ಕ್ಷೇತ್ರಗಳಲ್ಲಿ ಟಿಕೆಟ್ ವಂಚಿತರ ಆಕ್ರೋಶ ಜೋರಾಗುತ್ತಿದೆ. ಇದಕ್ಕೆಅಜಿ ಸಚಿವ ಕೆ.ಎಸ್. ಈಶ್ವರಪ್ಪ ಕೂಡ ಹೊರತಾಗಿಲ್ಲ.
ತನ್ನ ಮಗನಿಗೆ ಹಾವೇರಿ ಕ್ಷೇತ್ರದಿಂದ ಟಿಕೆಟ್ ಕೇಳಿದ್ದ ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪ ಪಕ್ಷದ ವರಿಷ್ಠರ ವಿರುದ್ದ ಫುಲ್ ಗರಂ ಆಗಿದ್ದಲ್ಲದೆ ಮಗನ ಟಿಕೆಟ್ ತಪ್ಪಿಸೋಕೆ ಬಿ.ಎಸ್.ಯಡಿಯೂರಪ್ಪ ಹಾಗೂ ಬಿ.ವೈ.ವಿಜಯೇಂದ್ರ ಕಾರಣ ನೇರ ಆರೋಪವನ್ನೇ ಮಾಡಿದ್ದರು. ಅಂದು ಜೋಡೆತ್ತಾಗಿ ಇಡೀ ರಾಜ್ಯಾದ್ಯಂತ ಪಕ್ಷ ಕಟ್ಟದ್ದವರು ಇಂದು ಟಿಕೆಟ್ ಗಾಗಿ ಕುಚಿಕು ವಿರುದ್ಧವೇ ಗಂಭೀರ ಆರೋಪ ಮಾಡ್ತಿದ್ದಾರೆ ಈಶ್ವರಪ್ಪ.
ಬಿಜೆಪಿ ಟಿಕೆಟ್ ಕೈ ತಪ್ಪಿರುವ ಪ್ರಮುಖ ಬಿಜೆಪಿ ನಾಯಕರು ಕೆ.ಎಸ್ ಈಶ್ವರಪ್ಪ ಅವರ ನಿವಾಸದಲ್ಲಿ ಸಭೆ ನಡೆಸಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಟಿಕೆಟ್ ವಂಚಿತ ಡಿ.ವಿ.ಸದಾನಂದ ಗೌಡ ಹಾಗೂ ಸಿ.ಟಿ.ರವಿ ಈಶ್ವರಪ್ಪ ನಿವಾಸದಲ್ಲಿ ಸಭೆ ನಡೆಸಿದ್ದಾರೆ. ಬಳಿಕ ಯಡಿಯೂರಪ್ಪ ಅವರ ವಿರುದ್ಧ ಆಕ್ರೋಶ ಹೊರ ಹಾಕಿದ ಕೆ.ಎಸ್ ಈಶ್ವರಪ್ಪ ಶಿವಮೊಗ್ಗ ಕ್ಷೇತ್ರದಲ್ಲಿ ಬಿ.ವೈ. ರಾಘವೇಂದ್ರ ಅವರ ಎದರು ಸ್ಪರ್ಧೆ ಮಾಡುವುದಾಗಿ ಹೇಳಿಕೆ ನೀಡಿದ್ದಾರೆ.
ನನ್ನ ಮಗನಿಗೆ ಹಾವೇರಿ ಟಿಕೆಟ್ ಕೊಡಿಸಿ ಗೆಲ್ಲಿಸಿಕೊಡುವ ಕೆಲಸ ನನ್ನದು ಎಂದು ಭರವಸೆ ನೀಡಿದ್ದೆ. ಆದ್ರೆ ಶೋಭಾ ಕರಂದ್ಲಾಜೆಗೆ ಉಡುಪಿಯಲ್ಲಿ ವಿರೋಧ ಇದೆ ಬೆಂಗಳೂರು ಉತ್ತರದಲ್ಲಿ ಟಿಕೆಟ್ ನೀಡಿದ್ದಾರೆ. ಹಾಗಾಗಿ ರಾಘವೇಂದ್ರನನ್ನು ಸೋಲಿಸುವುದೇ ನನ್ನ ಗುರಿಯಾಗಿದ್ದು ನಾನು ಚುನಾವಣೆಗೆ ಸ್ಪರ್ಧಿಸೋದಾಗಿ ಆಕ್ರೋಶದಿಂದಲೇ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.