ಬೆಂಗಳೂರು,(www.thenewzmirroe.com) ;
ಸಿಲಿಕಾನ್ ಸಿಟಿಯಲ್ಲಿ ಹಸಿರು ಬಾವುಟ ಹಾರಾಟ ಆಗಿರುವುದಕ್ಕೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಶಿವಾಜಿನಗರದ ಚಾಂದಿನಿ ಚೌಕ್ ನಲ್ಲಿ ಹಸಿರು ಧ್ವಜ ಹಾರಾಟ ನಡೆಸಲಾಗಿದೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವಿರೋಧಗಳು ವ್ಯಕ್ತವಾಗುತ್ತಿವೆ. ವಿಕಾಸ್ ವಿಕ್ಕಿ ಹಿಂದೂ ಎಂಬ ವ್ಯಕ್ತಿ ಫೇಸ್ ಬುಕ್ ನಲ್ಲಿ ಹಸಿರು ಧ್ವಜ ಇರುವ ಫೋಟೋ ಪೋಸ್ಟ್ ಮಾಡಿ ಇದು ಯಾವ ಧರ್ಮದ್ದು ಕಾಂಗ್ರೆಸ್ ನಾಯಕರು ಉತ್ತರ ಕೊಡಬೇಕು ಎಂದು ಪೋಸ್ಟ್ ಮಾಡಿದ್ದಾರೆ.
ಹಾಗೆನೇ ತೆಗೆಸೋ ತಾಕತ್ ಇಲ್ವಾ.? ಹಿಂದೂ ಗ್ರಾಮಸ್ಥರ ಮೇಲೆ ಮಾತ್ರ ನಿಮ್ಮ ಅಟ್ಟಹಾಸವೋ ಎಂದು ಪ್ರಶ್ನೆ ಮಾಡಿದ್ದಾರೆ.
ವಿಕಾಸ್ ವಿಕ್ಕಿ ಹಿಂದೂ ಪೋಸ್ಟ್ ಬೆಂಬಲಿಸಿ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿದ್ದು, ಸರ್ಕಾರದ ನಡೆ ವಿರುದ್ದ ಅಸಮಧಾನವನ್ನ ಹೊರಹಾಕುವ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.
ಸದ್ಯಕ್ಕೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಅಗತ್ಯ ಕ್ರಮ ಕೈಗೊಂಡಿದ್ದಾರೆ.