ಅಮಿತ್ ಶಾ ನಿವಾಸದಲ್ಲಿ ಹರ್ ಘರ್ ತಿರಂಗಾ..!

ಬೆಂಗಳೂರು, (www.thenewzmirror.com) :

77 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲು ರಾಷ್ಟ್ರವು ಸಿದ್ಧವಾಗುತ್ತಿದ್ದಂತೆ, ‘ಹರ್ ಘರ್ ತಿರಂಗಾ’ ಅಭಿಯಾನವು ದೇಶದಾದ್ಯಂತ  ಚಾಲನೆ ಪಡೆದುಕೊಂಡಿದೆ. ಪ್ರಧಾನಿ ಮೋದಿಯವರ ವಿನಂತಿಯ ಮೇರೆಗೆ, ದೇಶದ ಸಾಮಾನ್ಯ ಮತ್ತು ಪ್ರಮುಖರು ಭಾಗವಹಿಸುತ್ತಿರುವ  ಈ ರಾಷ್ಟ್ರವ್ಯಾಪಿ ಅಭಿಯಾನದ ಪ್ರಚಾರವು ಭರದಿಂದ ಸಾಗುತ್ತಿದೆ.

RELATED POSTS

‘ಹರ್ ಘರ್ ತಿರಂಗಾ’ ಅಭಿಯಾನದ ಕರೆ ಭಾರತದಾದ್ಯಂತ ಸದ್ದು ಮಾಡುತ್ತಿದೆ. ಗೃಹ ಸಚಿವ ಅಮಿತ್ ಶಾ ಅವರು ತಮ್ಮ ದೆಹಲಿಯ ನಿವಾಸದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸುವ ಮೂಲಕ ‘ಹರ್ ಘರ್ ತಿರಂಗಾ’ ಅಭಿಯಾನದಲ್ಲಿ ಭಾಗವಹಿಸಿದರು. ಈ ಮಹತ್ವದ ಸಂದರ್ಭದಲ್ಲಿ ಅವರ ಜೊತೆ ಅವರ ಪತ್ನಿ ಸೋನಾಲ್ ಶಾ ಕೂಡ ಭಾಗವಹಿಸಿದ್ದರು.

ನಾಗರಿಕರಿಗೆ ಮನವಿ ಮಾಡುತ್ತಾ, ಗೃಹ ಸಚಿವ ಶಾರವರು ಎಲ್ಲರೂ ತಮ್ಮ ಮನೆಗಳಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿ ಅದರ ಸೆಲ್ಫಿಗಳನ್ನು harghartiranga.com ನಲ್ಲಿ ಅಪ್‌ಲೋಡ್ ಮಾಡುವ ಮೂಲಕ ತಮ್ಮ ದೇಶಭಕ್ತಿಯ ಅಭಿವ್ಯಕ್ತಿಗಳನ್ನು ಹಂಚಿಕೊಳ್ಳಲು ಹೇಳಿದರು. ಶಾ ಅವರ ಕರೆಯು ದೇಶದ ನಾಗರಿಕರಿಕರಿಗೆ ಆಹ್ವಾನದಂತೆ ಪ್ರತಿಧ್ವನಿಸಿ, ‘ಹರ್ ಘರ್ ತಿರಂಗಾ’ ಅಭಿಯಾನದಲ್ಲಿ ಭಾಗವಹಿಸಲು ದೇಶವಾಸಿಗಳನ್ನು ಪ್ರೇರೇಪಿಸಿತು . ಭಾರತದ ವೈವಿಧ್ಯತೆಯದಲ್ಲಿ ಏಕತೆ ಮತ್ತು ಸಹೋದರತ್ವದ ಮಹತ್ವವನ್ನು ಅವರು ಒತ್ತಿ ಹೇಳಿದರು.

ಭಾರತದ ಏಕತೆ ಮತ್ತು ಭ್ರಾತೃತ್ವದ ಆದರ್ಶಗಳನ್ನು ಎತ್ತಿ ಹಿಡಿಯಲು ದೆಹಲಿಯ ಸ್ವನಿವಾಸದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿದ್ದೇನೆ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದರು. ಹೆಚ್ಚುವರಿಯಾಗಿ, ತಮ್ಮ ಟ್ವೀಟ್ ಮೂಲಕ ಅವರು ತಮ್ಮ ಪಾಲ್ಗೊಳ್ಳುವಿಕೆಗಾಗಿ ಪಡೆದ ಮೆಚ್ಚುಗೆಯ ಪ್ರಮಾಣಪತ್ರವನ್ನು ಹಂಚಿಕೊಂಡರು.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist