ಬೆಂಗಳೂರು, (www.thenewzmirror.com) ;
IPL 2025 ಕ್ಕೆ ಮೂಹೂರ್ತ ಫಿಕ್ಸ್ ಆಗಿದ್ದು ಉದ್ಘಾಟನಾ ಪಂದ್ಯ ಮಾರ್ಚ್ 23 ಕ್ಕೆ ನಡೆಯಲಿದೆ ಎಂದು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಮಾಹಿತಿ ನೀಡಿದ್ರು.
ಇಂದು ನಡೆದ ಬಿಸಿಸಿಐ ಸಭೆಯಲ್ಲಿ ನೂತನ ಖಜಾಂಚಿ ಮತ್ತು ಕಾರ್ಯದರ್ಶಿ ನೇಮಕಕ್ಕೆ ಸಂಬಂಧಿಸಿದಂತೆ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದ್ದು, ಈ ವೇಳೆ ಐಪಿಎಲ್ ಉದ್ಘಾಟನಾ ದಿನಾಂಕದ ಬಗ್ಗೆಯೂ ಚರ್ಚೆ ಯಾಗಿದೆ ಎಂದು ತಿಳಿಸಿದ ಅವರು, ಉದ್ಘಾಟನಾ ಪಂದ್ಯದ ದಿನಾಂಕವನ್ನು ದೃಢಪಡಿಸಿದ್ದಾರೆ, ಆದರೆ ಪ್ಲೇಆಫ್ ಅಥವಾ ಫೈನಲ್ ದಿನಾಂಕಗಳನ್ನು ಹೇಳಲಿಲ್ಲ.


ಬಿಸಿಸಿಐ ನ ನೂತನ ಕಾರ್ಯದರ್ಶಿಯಾಗಿ ದೇವಜಿತ್ ಸೈಕಿಯಾ ಮತ್ತು ಖಜಾಂಚಿಯಾಗಿ ಪ್ರಭತೇಜ್ ಸಿಂಗ್ ಭಾಟಿಯಾ ಆಯ್ಕೆಯಾಗಿದ್ದಾರೆ. ಮಹಿಳಾ ಪ್ರೀಮಿಯರ್ ಲೀಗ್ (WPL) ಸ್ಥಳದ ಬಗ್ಗೆ ಸ್ಪಷ್ಟತೆ ಬಹುತೇಕ ಅಂತಿಮಗೊಂಡಿದೆ ಎಂದು ತಿಳಿಸಿದರು.
ಹೆಚ್ಚುವರಿಯಾಗಿ, ಐಪಿಎಲ್ ಒಂದು ವರ್ಷದ ಅವಧಿಗೆ ಹೊಸ ಆಯುಕ್ತರ ನೇಮಕವನ್ನು ಪ್ರಕಟಿಸಿದೆ. ಜನವರಿ 18-19 ರಂದು ನಡೆಯಲಿರುವ ಮುಂದಿನ ಸಭೆಯು ಮುಂಬರುವ ಚಾಂಪಿಯನ್ಸ್ ಟ್ರೋಫಿಗೆ ತಂಡವನ್ನು ಅಂತಿಮಗೊಳಿಸುವುದರ ಮೇಲೆ ಕೇಂದ್ರೀಕರಿಸಲಿದೆ ಎಂದು ತಿಳಿದುಬಂದಿದೆ.