ಬೆಂಗಳೂರು, (www.thenewzmirror.com);
ಪ್ರತಿ ಬಾರಿ ಐಪಿಎಲ್ ಆರಂಭವಾಗ್ತಿದ್ದಂತೆ ಕನ್ನಡಿಗರ ಬಾಯಲ್ಲಿ ಕೇಳುವ ಪದ ಅಂದ್ರೆ ಈ ಸಲ ಕಪ್ ನಮ್ದೆ ಅಂತ. ಇದೇ ಆಶಯ ಹಾಗೂ ಆಸೆ ಇಟ್ಟುಕೊಂಡು ಐಪಿಎಲ್ ಆವೃತ್ತಿ ಆರಂಬಿಸುವ ಆರ್ ಸಿಬಿ ಪ್ರತಿ ಬಾರಿಯೂ ತಂಡ ಆಯ್ಕೆ ಮಾಡುವಲ್ಲಿ ವಿಫಲವಾಗ್ತಿದೆ.., ಇದಕ್ಕೆ ಇತ್ತೀಚೆಗೆ ನಡೆದ ಹರಾಜು ಪ್ರಕ್ರಿಯೆ ಸೂಕ್ತ ಉದಾಹರಣೆ.
ಆರ್ ಸಿಬಿ ಅಂದ್ರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅತ್ಯಂತ ಹೆಚ್ಚು ಕ್ರಿಕೆಟ್ ಪ್ರೇಮಿಗಳನ್ನ ಹೊಂದಿರುವ ತಂಡಗಳಲ್ಲಿ ಮುಂಚೂಣಿಯಲ್ಲಿ ನಿಲ್ಲುತ್ತೆ. ಹಾಗೆನೇ ಅಭಿಮಾನಿಗಳಿಂದ ನಿರೀಕ್ಷೆಗಳೂ ಬೆಟ್ಟದಷ್ಟಿರುತ್ತೆ. ಇದೇ ನಿರೀಕ್ಷೆಗಳನ್ನ ಈಡೇರಿಸ್ತೀವಿ ಅಂತ ಕಣಕ್ಕೆ ಇಳಿಯೋ ತಂಡದಲ್ಲಿ ಪ್ರತಿಬಾರಿಯೂ ಅಸಮತೋಲನತೆ ಎದ್ದು ಕಾಣುತ್ತಿದೆ. ಹೀಗಾಗಿಯೇ ಐಪಿಎಲ್ ಚಾಂಪಿಯನ್ ಪಟ್ಟಕ್ಕೆ ಇನ್ನೂ ಮುತ್ತಿಡೋಕೆ ಸಾಧ್ಯವೇ ಆಗ್ಲಿಲ್ಲ.
ಆರ್ ಸಿಬಿ ತಂಡ ಮಾಡುವ ಸಣ್ಣ ಸಣ್ಣ ತಪ್ಪುಗಳು ಕರ್ನಾಟಕ ಕ್ರಿಕೆಟ್ ಪ್ರೇಮಿಗಳ ಪ್ರೀತಿಯನ್ನ ಉಳಿಸಿಕೊಳ್ಳುವಲ್ಲಿ ಐಪಿಎಲ್ ಆವೃತ್ತಿ ಆರಂಭವಾದಾಗಿನಿಂದಲೂ ವಿಫಲವಾಗ್ತಿದೆ. ಇದಕ್ಕೆ ಇತ್ತೀಚೆಗೆ ಮುಕ್ತಾಯಗೊಂಡ ಐಪಿಎಲ್ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಎಡವಿದ್ದು. ದುಬೈನಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಈ ಹಿಂದೆ ಮಾಡಿದ ತಪ್ಪುಗಳನ್ನೇ ಮತ್ತೆ ಮಾಡಿದ್ದು, ತಂಡವನ್ನ ಸಮತೋಲನ ಮಾಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಆ ಮೂಲಕ ಫ್ಯಾನ್ಸ್ ಗಳಿಗೆ ನಿರಾಸೆಯನ್ನುಂಟುಮಾಡಿದೆ.
ಆರ್‌ಸಿಬಿಗೆ ವಿದೇಶಿ ಆಟಗಾರರ ಮೇಲೆ ಪ್ರೀತಿ ಇನ್ನು ಕಮ್ಮಿಯಾಗಿಲ್ಲ ಅನ್ನೋದು ಮತ್ತೊಮ್ಮೆ ಸಾಬೀತಾಗಿದ್ದು, ದೇಶಿ ಆಟಗಾರರ ಅದರಲ್ಲೂ ಕನ್ನಡಿಗರ ಆಟಗಾರರಿಗೆ ತೋರಿಸದ ಆಸಕ್ತಿ ವಿದೇಶಿ ಆಟಗಾರರಿಗೆ ತೋರಿಸಿ ಕೋಟ್ಯಾಂತರ ಹಣವನ್ನ ಖರ್ಚು ಮಾಡಿದೆ. ಆರ್‌ಸಿಬಿಯ ಹರಾಜಿನ ಇತಿಹಾಸವನ್ನು ನೋಡ್ತಾ ಹೋದರೆ ದೇಶೀಯ ಆಟಗಾರರಿಗಿಂತಲೂ, ವಿದೇಶಿ ಆಟಗಾರರ ಪರ ಹೆಚ್ಚು ಆಸಕ್ತಿ ತೋರಿರೋದು ಪದೇ ಪದೇ ಸಾಬೀತಾಗ್ತಾನೇ ಇದೆ.
ಇದಕ್ಕೆ ಒಂದು ಎಕ್ಸಾಂಪಲ್ ನೀಡೋದಾದ್ರೆ ಯುವ ಪ್ರತಿಭೆ ಅದರಲ್ಲೂ ಬೆಂಗಳೂರು ಮೂಲದ ರಚಿನ್ ರವೀಂದ್ರ ಅವರನ್ನ ಬಿಡ್ ಮಾಡುವ ಗೋಜಿಗೇ ಆರ್ ಸಿಬಿ ಹೋಗಲಿಲ್ಲ.., ಆರ್ ಸಿಬಿ ಫ್ಯಾನ್ ಗಳು ಈ ಬಾರಿಯ ತಮ್ಮ ತಂಡದಲ್ಲಿ ರಚಿನ್ ರನ್ ಹರಿಸುತ್ತಾರೆ ಅಂತಾನೇ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಆ ಎಲ್ಲ ನಿರೀಕ್ಷೆಗಳನ್ನ ಹುಸಿಗೊಳಿಸಿರುವ ಆರ್ ಸಿಬಿ ಮ್ಯಾನೇಜ್ ಮೆಂಟ್ ರಚಿನ್ ರವೀಂದ್ರ ಅವರ ಪರ ಬಿಡ್ ಮಾಡುವ ಗೋಜಿಗೇ ಹೋಗಲಿಲ್ಲ.., ಮತ್ತೊಂದು ಉದಾಹರಣೆ ಅಂದರೆ ದೇಶೀಯ ಆಟಗಾರರಾದ ಇತ್ತೀಚಿನ ಕೆಲ ಟೂರ್ನಿಗಳನ್ನ ಮಿಂಚುತ್ತಿದ್ದಾರೆ ಅವರಲ್ಲಿ ಪ್ರಮುಖರಾದವರು ಶಾರ್ದೂಲ್ ಠಾಕೂರ್, ಕಾರ್ತಿಕ್ ತ್ಯಾಗಿ, ಮನೀಷ್ ಪಾಂಡೆ, ಚೇತನ್ ಸಕಾರಿಯಾ, ಕೆ.ಎಸ್ ಭರತ್, ಅಂಡರ್ 19 ವಿಶ್ವಕಪ್‌ನಲ್ಲಿ ಮಿಂಚಿರುವ ಅರ್ಶಿನ್ ಕುಲ್ಕರ್ಣಿ ಸೇರಿದಂತೆ ಹಲವು ದೇಶೀಯ ಆಟಗಾರರ ಬಿಡ್ ನಲ್ಲಿ ಕೂಗಿದರೂ ಅವರನ್ನ ಖರೀದಿ ಮಾಡುವಲ್ಲಿ ಮನಸ್ಸು ತೋರಿಸಲೇ ಇಲ್ಲ.
ಹೀಗೆ ಪ್ರತಿ ಬಾರಿ ಬಿಡ್ ( ಹರಾಜು) ಪ್ರಕ್ರಿಯೆಯಲ್ಲಿ ಪ್ಲೇಯಿಂಗ್ ಹನ್ನೊಂದನ್ನ ಮಾಡುವ ನಿಟ್ಟಿನಲ್ಲಿ ತಂಡ ಖರೀದಿ ಮಾಡುವಲ್ಲಿ ವಿಫಲವಾಗ್ತಿದೆ ಅನ್ನೋದು ಆರ್ ಸಿಬಿ ಫ್ಯಾನ್ಸ್ ಗಳ ಬೇಜಾರು.
ಸದ್ಯ ಆರ್ ಸಿಬಿ ಯಲ್ಲಿ ಕೆಜಿಎಫ್ ಅನ್ನ ಮಾತ್ರ ನಂಬಿಕೊಂಡಿದೆ. ಒಂದು ವೇಳೆ ಈ ಕೆಜಿಎಫ್ ( ಕೋಹ್ಲಿ, ಗ್ಲೇನ್ ಮ್ಯಾಕ್ಸ್ ವೆಲ್ ಹಾಗೂ ಫ್ಲಾಪ್ ಡ್ಯುಪ್ಲಸಿಸ್) ಇವರುಗಳು ಫೇಲ್ಯೂರ್ ಆದ್ರೆ ತಂಡದ ಮೊತ್ತ ೧೦೦ ಗಡಿ ದಾಟೋದು ಕಷ್ಟವಾಗ್ತಿದೆ. ಅಂದ್ರೆ ತಂಡಕ್ಕೆ ಮಿಡಲ್ ಆರ್ಡರ್ ನಲ್ಲಿ ತಂಡ ಅನುಭವಿಸುತ್ತಿರೋ ರನ್ ಕೊರತೆಯನ್ನ ನೀಗಿಸುವವರು ಬೇಕಾಗಿದ್ದಾರೆ.
ಸದ್ಯ ಹರಾಜು ಪ್ರಕ್ರಿಯೆ ಪೂರ್ಣಗೊಂಡಿದೆ. ಒಂದಿಷ್ಟು ಆಟಗಾರರು ಹರಾಜಿನಲ್ಲಿ ಮಾರಾಟವಾಗದೇ ಉಳಿದಿದ್ದಾರೆ. ಅವರಲ್ಲಿ ಉತ್ತಮ ಆಟಗಾರರಿದ್ದು, ಅವರನ್ನ ಮೂಲ ಬೆಲೆಗೆ ಖರೀದಿ ಮಾಡಿ ತಂಡವನ್ನ ಬ್ಯಾಲೆನ್ಸ್ ಮಾಡುವ ಕೆಲ್ಸಕ್ಕೆ ಆರ್ ಸಿಬಿ ಮ್ಯಾನೇಜ್ ಮೆಂಟ್ ಮುಂದಾಗುತ್ತಾ ಕಾದುನೋಡ್ಬೇಕಿದೆ.
ಸದ್ಯಕ್ಕೆ ಆರ್ ಸಿಬಿ ತಂಡ ಬ್ಯಾಲೆನ್ಸ್ ಆಗಿಲ್ಲ ಅನ್ನೋದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಇಂಥ ತಂಡವನ್ನ ಸಮತೋಲನ ಮಾಡಿ ಈಸಲ ಕಪ್ ನಮ್ದೆ ಅನ್ನೋ ಘೋಷವಾಕ್ಯದಂತೆ ಐಪಿಎಲ್ ಕಪ್ ಕೊರತೆ ನೀಗಿಸುತ್ತಾ ಕಾದುನೋಡಬೇಕಿದೆ.