ಬೆಂಗಳೂರು, (www.thenewzmirror.com)
ಚಂದ್ರಯಾನ್ 3 ಉಡಾವಣೆಗೆ ದಿನಾಂಕವನ್ನ ಇಸ್ರೋ ಪ್ರಕಟ ಮಾಡಿದೆ. ಇದೇ ತಿಂಗಳ 14 ರಂದು ಉಡಾವಣೆ ಮಾಡೋಕೆ ಇಸ್ರೋ ನಿರ್ಧರಿಸಿದೆ. ಈ ಹಿಂದೆ 13 ರಂದು ಉಡಾವಣೆಗೆ ಇಸ್ರೋ ತೀರ್ಮಾನಿಸಿತ್ತು. ಆದ್ರೆ ಕೆ ಬದಲಾವಣೆ ಆದ ಹಿನ್ನಲೆಯಲ್ಲಿ 13 ರ ಬದಲು 14 ರಂದು ಉಡಾವಣೆಯಾಗಿದೆ.
ಚಂದ್ರನ ಸಂಶೋಧನೆಯಲ್ಲಿ ಅಮೆರಿಕ, ರಷ್ಯಾ ಬಳಿಕ ಭಾರತ ಕೂಡ ಚಂದ್ರನ ಅಧ್ಯಯನ ಮಾಡುತ್ತಿರೋ ರಾಷ್ಟ್ರ ಎನಿಸಿದೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಚಂದ್ರಯಾನ -3 ಉಪಗ್ರಹವನ್ನ ಜುಲೈ 14 ರಂದು ಮಧ್ಯಾಹ್ನ 2:35 ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಲಿದೆ. ಈ ಕುರಿತಂತೆ ಇಸ್ರೋ ತನ್ನ ಟ್ವಿಟರ್ ನಲ್ಲ ಪ್ರಕಟಿಸಿಕೊಂಡಿದೆ.