ಬೆಂಗಳೂರು/ಮಂಗಳೂರು, (www.thenewzmirror.com) ;
ಬಹು ಜನಪ್ರಿಯ ಬ್ರ್ಯಾಂಡ್ ಗುಡ್‌ನೈಟ್‌ನ ತಯಾರಿಕಾ ಕಂಪನಿ ಗೋದ್ರೇಜ್ ಕನ್ಸುಮರ್ ಪ್ರಾಡಕ್ಟ್ಸ್ ಲಿಮಿಟೆಡ್ (ಜಿಸಿಪಿಎಲ್), ಮಂಗಳೂರಿನಲ್ಲಿ ಗುಡ್‌ನೈಟ್‌ನ ನಕಲಿ ಉತ್ಪನ್ನಗಳ ಅಕ್ರಮ ಶೇಖರಣಾ ಘಟಕದ ವಿರುದ್ಧ ಕಾನೂನು ಕ್ರಮ ಕೈಗೊಂಡಿದೆ
ಗುಡ್‌ನೈಟ್‌ನ ನಕಲಿ ಉತ್ಪನ್ನಗಳನ್ನು ರಾಜ್ಯದಲ್ಲಿ ಮಾರಾಟ ಮಾಡುವುದರ ಕುರಿತು ʼಜಿಸಿಪಿಎಲ್ʼ ಹಲವಾರು ದೂರುಗಳನ್ನು ಸ್ವೀಕರಿಸಿತ್ತು. ಈ ವರದಿಗಳನ್ನು ಆಧರಿಸಿ ಕಂಪನಿ ತನಿಖಾ ತಂಡ ಸ್ಥಳೀಯ ಪೊಲೀಸ್ ಅಧಿಕಾರಿಗಳ ನೆರವಿನಿಂದ ದಾಸ್ತಾನು ಘಟಕದ ಮೇಲೆ ದಾಳಿ ನಡೆಸಿದೆ. ಈ ದಾಳಿಯಲ್ಲಿ 22 ಪಿಸಿಎಸ್‌ಗಳ ನಕಲಿ ಗುಡ್ ನೈಟ್ ಉತ್ಪನ್ನಗಳನ್ನು ಜಪ್ತಿ ಮಾಡಲಾಗಿದೆ. ನಕಲಿ ಉತ್ಪನ್ನ ಮತ್ತು ಹಕ್ಕುಸ್ವಾಮ್ಯ ಉಲ್ಲಂಘನೆಗೆ ಸಂಬಂಧಿಸಿದ 1957ರ ಹಕ್ಕುಸ್ವಾಮ್ಯ ಕಾಯ್ದೆಯ ಸೆಕ್ಷನ್ 51 ಮತ್ತು 63ರ ಅಡಿಯಲ್ಲಿ ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ಈ ನಕಲಿ ಉತ್ಪನ್ನಗಳಿಗೆ ಕಾರಣವಾಗಿರುವ ವಿತರಣಾ ಜಾಲವನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಪೊಲೀಸರ ಈ ಕಾರ್ಯಾಚರಣೆಯು ನಕಲಿ ಉತ್ಪನ್ನಗಳ ವಿತರಕರಿಗೆ ಸ್ಪಷ್ಟ ಸಂದೇಶ ರವಾನಿಸಿದೆ. ನಿಜವಾದ ಮತ್ತು ಸುರಕ್ಷಿತವಾದ ಗುಡ್‌ನೈಟ್ ಉತ್ಪನ್ನಗಳನ್ನು ಗ್ರಾಹಕರು ಖರೀದಿಸುವುದನ್ನು ಇದು ಖಚಿತಪಡಿಸಲಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಗೋದ್ರೇಜ್ ಕನ್ಸುಮರ್ ಪ್ರಾಡಕ್ಟ್ಸ್ ಲಿಮಿಟೆಡ್‌ನ (ಜಿಸಿಪಿಎಲ್) ಹೋಮ್ ಕೇರ್ ವಿಭಾಗದ ಮುಖ್ಯಸ್ಥ ಶೇಖರ್ ಸೌರಭ್, ದೇಶದಾದ್ಯಂತ ನಕಲಿ ಉತ್ಪನ್ನಗಳ ವಿತರಣೆಯು ತ್ವರಿತವಾಗಿ ಬಿಕರಿಯಾಗುವ ಗ್ರಾಹಕ ಉತ್ಪನ್ನ (ಎಫ್‌ಎಂಸಿಜಿ) ತಯಾರಿಸುವ ಉದ್ಯಮಗಳ ಪಾಲಿಗೆ ಪ್ರಮುಖ ಕಳವಳಕಾರಿ ಸಂಗತಿಯಾಗಿದೆ. ನಕಲಿ ಉತ್ಪನ್ನಗಳು ಕಾನೂನುಬಾಹಿರವಷ್ಟೇ ಅಲ್ಲದೆ, ಅವುಗಳ ಬಳಕೆಯು ಬಳಕೆದಾರರ ಆರೋಗ್ಯಕ್ಕೆ ಹಾನಿಕಾರಕ ಮತ್ತು ಅಪಾಯಕಾರಿಯೂ ಆಗಿರಲಿದೆ. ʼಜಿಸಿಪಿಎಲ್ʼ ತನ್ನ ಆದಾಯದ ಗಮನಾರ್ಹ ಭಾಗವನ್ನು ಗ್ರಾಹಕರಿಗೆ ಉತ್ತಮ ಸೇವೆ ನೀಡಲು ಹೊಸ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಲು ವೆಚ್ಚ ಮಾಡುತ್ತಿದೆ. ಮನೆ ಒಳಗಿನ ಕೀಟನಾಶಕ ಉತ್ಪನ್ನಗಳ ವಿಭಾಗದಲ್ಲಿ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿ ಇರುವ ಗುಡ್‌ನೈಟ್ ಉತ್ಪನ್ನವು ಕಂಪನಿಯ ಉತ್ತಮ ದರ್ಜೆಯ ಉತ್ಪನ್ನಗಳಿಗೆ ಒಂದು ಉದಾಹರಣೆಯಾಗಿದೆ. ನಮ್ಮ ವಿತರಣಾ ಜಾಲ, ಸ್ಥಳೀಯ ಅಧಿಕಾರಿಗಳು ಮತ್ತು ಗ್ರಾಹಕರ ಸಹಯೋಗದ ಮೂಲಕ ನಾವು ನಮ್ಮ ಉತ್ಪನ್ನಗಳ ಗುಣಮಟ್ಟದ ಪರಿಶೀಲನೆಯನ್ನು ನಿಯಮಿತವಾಗಿ ಕೈಗೊಳ್ಳುತ್ತೇವೆ. ಮಂಗಳೂರು ಪೊಲೀಸ್ ಅಧಿಕಾರಿಗಳ ಜೊತೆಗಿನ ಈ ಕಾರ್ಯಾಚರಣೆಯು ರಾಜ್ಯದಲ್ಲಿ ನಕಲಿ ಗುಡ್‌ನೈಟ್ ಉತ್ಪನ್ನಗಳ ತಯಾರಕರು, ವಿತರಕರು ಮತ್ತು ಅವುಗಳನ್ನು ಮಾರಾಟ ಮಾಡುವ ಸ್ಥಳೀಯ ಚಿಲ್ಲರೆ ವ್ಯಾಪಾರಿಗಳನ್ನು ಶಿಕ್ಷೆಗೆ ಗುರಿಪಡಿಸಲಿದೆ ಎಂದು ಹೇಳಿದ್ದಾರೆ.
ಮಾರುಕಟ್ಟೆಯಲ್ಲಿ ಲಭ್ಯವಿರುವ ನಕಲಿ ಗುಡ್‌ನೈಟ್ ಉತ್ಪನ್ನಗಳ ಬಗ್ಗೆ ಗ್ರಾಹಕರು ಜಾಗರೂಕರಾಗಿರಬೇಕು ಮತ್ತು ನೈಜ ಮಾರಾಟ ಸರಕುಪಟ್ಟಿ ಇರುವ ಉತ್ಪನ್ನಗಳನ್ನು ಮಾತ್ರ ಖರೀದಿಸಬೇಕು. ನಕಲಿ ಗುಡ್‌ನೈಟ್ ಉತ್ಪನ್ನಗಳ ಬಗ್ಗೆ ಅನುಮಾನ ಬಂದರೆ ಅಥವಾ ಯಾವುದೇ ಸಗಟು ವ್ಯಾಪಾರಿ/ಚಿಲ್ಲರೆ ವ್ಯಾಪಾರಿಗಳು ಇಂತಹ ನಕಲಿ ಉತ್ಪನ್ನಗಳನ್ನು ಮಾರಾಟ ಮಾಡುವುದು ಗಮನಕ್ಕೆ ಬಂದರೆ ಆ ಮಾಹಿತಿಯನ್ನು [email protected]ಗೆ ನೀಡುವ ಮೂಲಕ ಅಥವಾ 1800-266-0007 ಗೆ ಕರೆ ಮಾಡುವ ಮೂಲಕ ʼಜಿಸಿಪಿಎಲ್ʼಗೆ ವಿಷಯ ತಿಳಿಸಬಹುದು.